Breaking News

ಸೋಮಯ್ಯ ಅವರ ಸಾವಿನತನಿಖೆ ಸಿಬಿಐಗೆ ಒಪ್ಪಿಸಿ ನ್ಯಾಯ ಒದಗಿಸವಂತೆ ಹಾಲಪ್ಪ ಆಚಾರ್ ಆಗ್ರಹ

Halappa Achar demands that the investigation into Somaiah’s death be handed over to the CBI and justice be served.

ಜಾಹೀರಾತು

ಕಾಂಗ್ರೆಸ್ ದುರಾಡಳಿತ ನಡೆಸುತ್ತಿದೆ : ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪ,,

ವರದಿ : ಪಂಚಯ್ಯ ಹಿರೇಮಠ.
ಕುಕನೂರು : ವಿನಯ್ ಸೋಮಯ್ಯ ಅವರ ಸಾವಿನ ಪ್ರಕರಣದಲ್ಲಿ ಎಸ್‌ಪಿ ನೇರಹೊಣೆ ಎಂಬುದು ಗೊತ್ತಾಗಿದ್ದು, ಅವರನ್ನು ಅಮಾನತು ಮಾಡಬೇಕು. ಪ್ರಕರಣದಲ್ಲಿ ಒಳಗೊಂಡ ಆರೋಪಿತರಾದ ಶಾಸಕರಾದ ಪೊನ್ನಣ್ಣ, ಮಂಥರ್ ಗೌಡ, ಆರೋಪಿತ ತನ್ನೀರ್ ಮೈನಾ ಅವರನ್ನು ಎಫ್‌ಐಆರ್‌ನಲ್ಲಿ ಸೇರಿಸಿ ತನಿಖೆ ನಡೆಸಬೇಕು ಎಂದು ಹಾಲಪ್ಪ ಆಚಾರ್ ಆಗ್ರಹಿಸಿದರು.

ಅವರು ಶನಿವಾರದಂದು ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸೋಮಯ್ಯ ಅವರ ಆತ್ಮಹತ್ಯೆ ಹಿಂದೆ ಶಾಸಕ ಪೊನ್ನಣ್ಣನವರು ಇದ್ದಾರೆ ಎಂದು ವಿನಯ್ ಸೋಮಯ್ಯ ಡೆತ್ ನೋಟಿನಲ್ಲಿ ಬರೆದುಕೊಂಡಿದ್ದಾರೆ. ತಡಮಾಡದೇ ಈ ಕೇಸನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಗೃಹ ಮಂತ್ರಿ ಜಿ. ಪರಮೇಶ್ವರ ಅವರು ಒಬ್ಬ ನಿಷ್ಠಾವಂತರು, ಒಳ್ಳೆಯ ಆಡಳಿತ ನಡೆಸುವ ವ್ಯಕ್ತಿಗಳಾಗಿದ್ದು ಕಾಂಗ್ರೆಸ್ ಕೈಗೊಂಬೆಯಾಗಿರುವುದು ಸರಿಯಲ್ಲಾ, ವಿನಯ್ ಸೋಮಯ್ಯನವರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.

ಯಾದಗಿರಿಯಲ್ಲಿ ಪೋಲಿಸ್ ಇಲಾಖೆ ಅಧಿಕಾರಿ ಲಂಚ, ಪ್ರಕರಣಗಳು ನಡೆದರು ಕಾಂಗ್ರೆಸ್ ವಿಫಲವಾಗಿದೆ.

ಅಲದೇ ನಮ್ಮ ಜಿಲ್ಲೆಯಲ್ಲಿ ಮೊನ್ನೆ ಗಂಗಾವತಿ ತಾಲೂಕಿನ ಸಾಣಾಪೂರದಲ್ಲಿ ವಿಕೃತ ಕಾಮುಕರು ವಿದೇಶಿ ಮಹಿಳೆಯ ಮೇಲೆ ಅಟ್ಟಹಾಸ ಮೆರೆದು ಅತ್ಯಾಚಾರಗಳಂತಹ ಪೈಶ್ಯಾಚಿಕ ಕೃತ್ಯಗಳು ನಡೆಯುತ್ತಿದ್ದು, ಇವುಗಳಿಗೆ ಕಡಿವಾಣ ಹಾಕುವಲ್ಲಿ ಪೋಲಿಸ್ ಇಲಾಖೆ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಪೋಲಿಸ್ ಇಲಾಖೆ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಒಟ್ಟಾರೇ ರಾಜ್ಯದಲ್ಲಿ ಪೋಲಿಸ್ ಇಲಾಖೆ ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಯತ್ನಾಳ ಅವರನ್ನು ಪಕ್ಷ ಉಚ್ಚಾಟನೆ ಮಾಡಿದ್ದು ಸರಿಯಾದ ಕ್ರಮವೇ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಾಲಪ್ಪ ಆಚಾರ್ ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ ಆದರೆ ಯತ್ನಾಳ ಒಬ್ಬ ಒಳ್ಳೆಯ ವ್ಯಕ್ತಿ, ಹಿಂದುತ್ವ ಪರ ಒಲವು ಕಾಳಜಿ ಇರುವ ವ್ಯಕ್ತಿಯಾಗಿದ್ದಾರೆ. ಒಬ್ಬ ಒಳ್ಳೆಯ ಜನಪ್ರತಿ ನಿಧಿಯು ಕೂಡಾ ಆಗಿದ್ದಾರೆ ಎಂದರು.

ಈ ವೇಳೆ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿಯ ಶುಭಾಶಯಗಳನ್ನು ತಿಳಿಸಿದ ಅವರು ಮಹನೀಯರ ತತ್ವಾದರ್ಶದಂತೆ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ನೀವು ಮುನ್ನೆಡೆಯಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ, ಸಿದ್ದು ಉಳ್ಳಾಗಡ್ಡಿ, ಕರಬಸಯ್ಯ ಬಿನ್ನಾಳ, ನಗರ ಘಟಕ ಅಧ್ಯಕ್ಷ ಬಸವರಾಜ ಹಾಳಕೇರಿ, ಬಿಜೆಪಿ ಮುಖಂಡರಾದ ಸಿ. ಎಚ್ ಪೋಲಿಸ್ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಬಸನಗೌಡ ತೊಂಡಿಹಾಳ, ಶಿವಕುಮಾರ ನಾಗಲಾಪೂರಮಠ,
ಕಾರ್ಯಕರ್ತರಾದ ಜಗದೀಶ ಸೂಡಿ, ಮಂಹಾತೇಶ ಹೂಗಾರ, ಶಂಭುಲಿಂಗಪ್ಪ ಜೋಳದ, ಕನಕಪ್ಪ ಬ್ಯಾಡರ್, ಮಲ್ಲು ಚೌದರಿ, ಜಗನ್ನಾಥ ಭೋವಿ ಇನ್ನಿತರರು ಇದ್ದರು.

About Mallikarjun

Check Also

ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಚಿಂತನೆಯಿದೆ: ನೂತನ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಆಶಯ

There is a plan to develop Maharishi Valmiki University on a large scale: New Vice …

Leave a Reply

Your email address will not be published. Required fields are marked *