
Drinking water at night before going to sleep is not very good for health.

ರಾತ್ರಿ ನೀರು ಕುಡಿದು ಮಲಗುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.

ರಾತ್ರಿ ಊಟ ಬೇಗ ಮುಗಿಸಬೇಕು. (ಅಂದರೆ ೭.೩೦ ಗಂಟೆ ಸುಮಾರಿಗೆ ಊಟ ಮಾಡಿ ಮುಗಿಸಬೇಕು) ಊಟ ಮಾಡಿದ ತಕ್ಷಣ ಮಲಗಬಾರದು. ಸುಮಾರು ಎರಡು ತಾಸುಗಳ ನಂತರ ನಿದ್ದೆ ಹೋಗಬಹುದು.
ಹಿರಿಯರು ಹೇಳಿದಂತೆ ಊಟದ ನಂತರ ನೂರು ಹೆಜ್ಜೆ ನಡೆಯಬೇಕು. ತಾವು ಊಟದ ಅರ್ಧಗಂಟೆಯ ನಂತರ ನೀರು ಕುಡಿಯುವುದರಿಂದ ಮಾಡಿದ ಊಟ ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಾಯ ವಾಗುತ್ತದೆ.
ರಾತ್ರಿಯಲ್ಲಿ ನೀರು ಕುಡಿದು ಮಲಗುವುದರಿಂದ ನಮ್ಮ ದೇಹದಲ್ಲಿರುವ ಕಿಡ್ನಿಗೆ ಹೆಚ್ಚಿನ ಕೆಲಸ ಕೊಟ್ಟಾಂತಾಗುತ್ತದೆ. ರಕ್ತವನ್ನು ಶುದ್ಧೀಕರಿಸಿ ದೇಹಕ್ಕೆ ಸರಬರಾಜು ಮಾಡಲು ಕಿಡ್ನಿ ಬಹಳಷ್ಟು ಶ್ರಮ ಪಡಬೇಕಾಗುತ್ತದೆ.
ದೇಹವು ನಿದ್ರಾವಸ್ಥೆಯಲ್ಲಿದ್ದಾಗ ನಮ್ಮ ಅಂಗಾಂಗ ಗಳು ವಿಶ್ರಾಂತಿ ಪಡೆಯಲು ಬಯಸುತ್ತೇವೆ.ಆದ್ದರಿಂದ ಬಹಳಷ್ಟು ಸಾವುಗಳು ಬಹು ಅಂಗ ವೈಫಲ್ಯದಿಂದ ಸಂಭವಿಸುತ್ತಿವೆ.
ನೀರು ನಮ್ಮ ದೇಹಕ್ಕೆ ಸಮಶೀತೋಷ್ಣ ಸ್ಟಿತಿಯಲ್ಲಿದಳು ಬೇಕಾದ ಮೂಲ ಭೌತಿಕ ಆಹಾರ.ನೀರು ಮೊತ್ತ ಮೊದಲಾಗಿ ದೇಹವನ್ನು ಜೀವಂತವಾಗಿಡಲು ಪ್ರಾಣ ವಾಯುವಿನಷ್ಟೇ ಅವಶ್ಯಕವಾದ ಮೂಲಧಾತು.
ದೇಹದ ತಾಪಮಾನ ಸುಸ್ಥಿತಿಯಲ್ಲಿಟ್ಟು ಕಾಪಾಡುತ್ತದೆ, ಜೀರ್ಣಕ್ರಿಯೆ ಸುಲಬವಾಗಿ ನಡೆಯಲು ಮತ್ತು ದೇಹದೊಳಗೆ ಸೇರಿಕೊಂಡಿರುವ ವಿಷಕಾರಿ ಕಲ್ಮಶಗಳನ್ನು ಹೊರ ದೂಡಲು ಸಹಕಾರಿ.ದಿನವೊಂದರಲ್ಲಿ ೩ ರಿಂದ ೪ ಲೀಟರ್ ನೀರನ್ನು ಕುಡಿಯುವುದು ಉತ್ತಮ ಆರೋಗ್ಯಕ್ಕೆ ಹಿತಕರ ಎಂದು ವೈದ್ಯಶಾಸ್ತ್ರ ಹಾಗೂ ಹಿರಿಯರ ಅನುಭವ ತಿಳಿಸುತ್ತದೆ.
ನಾವು ಕುಡಿದ ಶೇಕಡ ೧೦ ರಷ್ಟು ನೀರು ದೇಹದಲ್ಲಿ ಹೀರಲ್ಪಟ್ಟು ಉಳಿದ ಬಹು ಪಾಲನ್ನು ಮೂತ್ರಜನಕಾಂಗದ ಮೂಲಕ ವಿಸರ್ಜಿಸಲ್ಪಡುತ್ತದೆ.
ರಾತ್ರಿ ಅತಿಯಾಗಿ ನೀರು ಕುಡಿದರೆ ಮತ್ತು ಶೀಘ್ರವಾಗಿ ವಿಶ್ರಾಂತಿಗೆ ಜಾರಿದರೆ ನಮ್ಮ ಸುಖನಿದ್ದೆಗೆ ಭಂಗವಾಗಿ ಸತತ ಮೂತ್ರ ವಿಸರ್ಜನೆಗೆ ಪ್ರೇರೇಪಿಸುತ್ತದೆ.



