ಶಿಕ್ಷಕರ ಸೇವಾ ಅವಧಿ ಅತ್ಯಮೂಲ್ಯ : ಬಳ್ಳಾರಿ

H.Mallikarjun
H.Mallikarjun - Kalyanasiri
1 Min Read

Teacher’s tenure is most valuable : Bellary

ಜಾಹೀರಾತು

ಕುಕನೂರು : ತಮ್ಮ ಸೇವಾವಧಿಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ತರಬೇತಿ ನೀಡುವ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಜೀವನ ಕಟ್ಟಿಕೊಳ್ಳುವಲ್ಲಿ ಎಸ್.ಬಿ ಚಂಗಳಿಯವರ ಪಾತ್ರ ಪ್ರಮುಖವಾಗಿದೆ ಎಂದು ಕುಕನೂರ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಚನ್ನಬಸಪ್ಪ ಬಳ್ಳಾರಿ ಹೇಳಿದರು.

ಅವರು ಕುಕನೂರು ಪಟ್ಟಣದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮುಂಡರಗಿ ಸರಕಾರಿ ತರಬೇತಿ ಸಂಸ್ಥೆಯಿಂದ ನಿವೃತ್ತಿ ಹೊಂದಿದ ಪ್ರಾಚಾರ್ಯ ಎಸ್.ಬಿ ಚಂಗಳಿಯವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ , ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ಬೋಧಿಸುತ್ತಾ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದರು.

ವಿದ್ಯಾರ್ಥಿಗಳು ಇಂತಾ ಅಪರೂಪದ ತರಬೇತಿದಾರರಿಂದ ಜ್ಞಾನ ಪ್ರೋತ್ಸಾಹ, ಸ್ಪೂರ್ತಿಗೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಂಗಳೂರು ಸಂಸ್ಥೆಯ ಪ್ರಚಾರ್ಯ ಶರಣಪ್ಪ, ಕಿರಿಯ ತರಬೇತಿ ಅಧಿಕಾರಿ ಮಂಜಪ್ಪ ಮಯೂರ ತಳವಾರ ಇನ್ನಿತರರು ವೇದಿಕೆಯಲ್ಲಿ ಹಾಜರಿದ್ದರು. ಶಿವಲೀಲಾ ನಿರೂಪಿಸಿ ವಂದಿಸಿದರು.

Total Views: 0
Share This Article