Breaking News

ಅಕ್ರಮವಾಗಿ ಹೊಲಕ್ಕೆ ನುಗ್ಗಿ ನಿರಂತರ ಮರಳು ಲೂಟಿ : ಎಸ್‍ಪಿಗೆ ದೂರು

Illegal entry into the field and continuous looting of sand: Complaint to SP


ಕೊಪ್ಪಳ : ತಾಲೂಕಿನ ಸೀಮಾದಲ್ಲಿ ಬರುವ ತಮ್ಮ ಹೊಲಕ್ಕೆ ನುಗ್ಗಿ ನಿರಂತರವಾಗಿ ದಬ್ಬಾಳಿಕೆ ಮೂಲಕ ತಮ್ಮ ಪಿತ್ರಾರ್ಜಿತ ಆಸ್ತಿ ನರೇಗಲ್ ಸೀಮಾದ ಸರ್ವೆ ನಂ. 9999 ರಲ್ಲಿ ಇರುವ ಬೆಲೆ ಬಾಳುವ ಮರಳನ್ನು ಅಕ್ರಮವಾಗಿ ಸಾಗಿಸಿದ್ದು, ಎಷ್ಟೇ ವಿನಂತಿಸಿಕೊಂಡರೂ ದೌರ್ಜನ್ಯ ಮಾಡಿದ್ದು, ಕೊನೆಗೆ ನಾಯಕ ಸಮುದಾಯದ ಮುಖಂಡರ ಮೂಲಕ ಎಸ್.ಪಿ. ಗೆ ದೂರು ಸಲ್ಲಿಸಿರುವದಾಗಿ ಶಕುಂತಲಮ್ಮ ಚಂದ್ರಶೇಖರ್ ಬನ್ನಿಕೊಪ್ಪ ಮತ್ತು ನಾಗರತ್ನಮ್ಮ ಅಂಚಾಳಪ್ಪ ತಳವಾರ ಆರೋಪಿಸಿದ್ದಾರೆ.
ನಗರದ ಎಸ್.ಪಿ. ಕಛೇರಿಗೆ ತೆರಳಿ ವಾಲ್ಮೀಕಿ ನಾಯಕ ಸಮುದಾಯದ ಧರ್ಮದರ್ಶಿ ರಾಮಣ್ಣ ಕಲ್ಲನವರ ನೇತೃತ್ವದಲ್ಲಿ ತೆರಳಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಶೋಧಾ ಒಂಟಗೋಡಿ ಮತ್ತು ಉಪ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಂಕ್ರಪ್ಪ ಸುಬೇದಾರ್ ಅವರನ್ನು ಭೇಟಿ ಮಾಡಿ ಆರೋಪಿಗಳಾದ ಚಂದ್ರು ಇಟ್ಟಮಗಿ ಮತ್ತು ದೇವಪ್ಪ ಕುಟಗನಹಳ್ಳಿ, ಉಡಚಪ್ಪ ಟಣಕನ್‍ಕಲ್ ಅವರ ಮೇಲೆ ಕ್ರಮ ಜರುಗಿಸುವಂತೆ ವಿನಂತಿಸಿದ್ದು, ಯಾವುದೇ ಕಾರಣಕ್ಕೂ ತಮ್ಮ ಹೊಲಕ್ಕೆ ಪ್ರವೇಶ ನಿರ್ಭಂಧಿಸಬೇಕು ಎಂದು ವಿನಂತಿಸಿದ್ದಾರೆ.
ಹೊಲದಲ್ಲಿ ಇರುವ ಮರಳಿನಲ್ಲಿ ಈಗಾಗಲೇ ಅರ್ಧದಷ್ಟು ತೆಗೆದುಕೊಂಡಿದ್ದು, ಎಷ್ಟೇ ಪ್ರಯತ್ನಪಟ್ಟರೂ ಅವರು ಕೇಳುತ್ತಿಲ್ಲ. ಮೇಲಾಗಿ ತಮ್ಮ ಮೇಲೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿದ್ದು, ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣಿ ತಡೆಯಬೇಕು ಎಂದೂ ಸಹ ಅವರು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ವಕೀಲರಾದ ವೀರಭದ್ರಪ್ಪ ನಾಯಕ, ಮುಖಂಡರುಗಳಾದ ಚಂದ್ರಶೇಖರ್ ಬನ್ನಿಕೊಪ್ಪ, ಶಿವಮೂರ್ತಿ ಗುತ್ತೂರ, ಬಸವರಾಜ ಶಹಪೂರ, ಹನುಂತಪ್ಪ ಗುದಗಿ, ವಿರುಪಾಕ್ಷಗೌಡ್ರ, ಗ್ರಾ. ಪಂ. ಅಧ್ಯಕ್ಷ ರಾಮಣ್ಣ ಬೆಳವಿನಾಳ, ಚಿನ್ನಪ್ಪ ನಾಯಕ, ಅವಿನಾಳಪ್ಪ ಶಹಾಪೂರ, ರಮೇಶ ಚೌಡಕಿ, ನಿಂಗಪ್ಪ ನಾಯಕ, ವೀರೇಶ ನಾಯಕ, ಸುರೇಶ ಹಲವಾಗಲಿ ಇತರರು ಇದ್ದರು.

ಜಾಹೀರಾತು

About Mallikarjun

Check Also

ಸಾವಳಗಿ ಗ್ರಾಮದಲ್ಲಿ ಕೂಸಿನ ಮನೆ ಯೋಜನೆ ಆಟಕ್ಕುಂಟು ಲೇಕ್ಕಕಿಲ್ಲ !?

In Savalgi village, the milking house project will be played!? ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ಸಾವಳಗಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.