Breaking News

ಸೊಲ್ಲಾಪುರ ರೇಲ್ವೆಗಾಗಿ ಒತ್ತಾಯಿಸಿ,ಸಂಸದರಿಗೆ ಪತ್ರ.

Demand for Solapur Railway, letter to MP.

ಜಾಹೀರಾತು

ಗಂಗಾವತಿ: ಸೊಲ್ಲಾಪುರ-ಗದಗ ರೇಲ್ವೆ ಸಂಚಾರವನ್ನು ಗಂಗಾವತಿ ನಗರದವರೆಗೂ ವಿಸ್ತರಿಸುವಂತೆ ಕೊಪ್ಪಳದ ಸಂಸದರಿಗೆ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಪತ್ರ ಬರೆದು ಒತ್ತಾಯಿಸಿದೆ.

2019 ರಲ್ಲಿಯೇ ರೇಲ್ವೆ ಸಚಿವರಿಗೆ ಮತ್ತು ರೇಲ್ವೆ ಅಧಿಕಾರಿಗಳಿಗೆ ಪತ್ರ ಬರೆದು,ಸೊಲ್ಲಾಪುರ-ಗದಗ ಮತ್ತು ಮುಂಬೈ-ಗದಗ ಎರಡೂ ರೈಲುಗಳನ್ನೂ ಗಂಗಾವತಿ ನಗರದವರೆಗೂ ವಿಸ್ತರಿಸುವಂತೆ ಪತ್ರ ಬರೆಯಲಾಗಿತ್ತು , ಆದರೂ ಎರಡು ರೈಲುಗಳಲ್ಲಿ ಒಂದನ್ನೂ ಸಹ ಗಂಗಾವತಿಯವರೆಗೂ ವಿಸ್ತರಿಸಲಾಗಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅಸಮಧಾನ ವ್ಯಕ್ತ ಪಡಿಸಿದ್ದರು.

ಈ ವಿಷಯವಾಗಿ ಸಂಸದರಿಗೆ ಪುನಃ ಪತ್ರ ಬರೆದಿರುವ ಹೇರೂರ,ಸೊಲ್ಲಾಪುರ ರೇಲ್ವೆಯನ್ನು ಗಂಗಾವತಿ ನಗರದವರೆಗೂ ವಿಸ್ತರಿಸುವಂತೆ ಕೋರಿದ್ದಾರೆ.

ಕಾರಟಗಿ-ಹುಬ್ಬಳ್ಳಿ ರೈಲ್ವೇಯನ್ನು ಧಾರವಾಡ ನಗರದವರೆಗೂ ವಿಸ್ತರಿಸುವಂತೆ ಪತ್ರ ಬರೆದು ಕೋರಿದ್ದ ಅವರು,ಇದೇ ರೀತಿ ಕಾರಟಗಿ- ಗೋವಾ ರೇಲ್ವೆ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಪತ್ರದ ಪ್ರತಿಗಳನ್ನು ನೈರುತ್ಯ ವಲಯದ ರೇಲ್ವೆ ಜನರಲ್ ಮ್ಯಾನೇಜರ್, ಡಿವಿಜಿನಲ್ ಮ್ಯಾನೇಜರ್ ಮತ್ತು ಡೆಪ್ಯೂಟಿ ಡಿವಿಜಿನಲ್ ಮ್ಯಾನೇಜರ್ ಸೇರಿದಂತೆ ರಾಜ್ಯದ ಮುಖ್ಯ ಮಂತ್ರಿಗಳಿಗೂ ಕಳುಹಿಸಿದ್ದಾರೆ.

About Mallikarjun

Check Also

ಡಾ,ಗಂಗಾಮಾತಾಜಿ ನೇತೃತ್ವದಲ್ಲಿ ನಡೆಯುತ್ತಿರು 23ನೇ ಕಲ್ಯಾಣ ಪರ್ವಕ್ಕೆ 25 ಸಾವಿರ ರೊಟ್ಟಿ ತಯಾರಿ

Preparation of 25 thousand roti for 23rd Kalyana Parva is going on under the leadership …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.