Breaking News

ಬನ್ನಿಕೊಪ್ಪದಲ್ಲಿ ನವಜಾತ ಗಂಡು ಶಿಶು ಶವವಾಗಿ ಪತ್ತೆ,,

Newborn baby boy found dead in Bannikoppa

ಜಾಹೀರಾತು

ಕೊಪ್ಪಳ : ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ವಾಲ್ಮೀಕಿ ಸಮುದಾಯ ಭವನದ ಹತ್ತಿರದಲ್ಲಿ 7 ತಿಂಗಳ ನವಜಾತ ಶಿಶುವನ್ನು ಶುಕ್ರವಾರದಂದು ಬೆಳಗ್ಗೆ ಸುಮಾರು 7.20ರಿಂದ 8 ಗಂಟೆಯ ಒಳಗೆ ತಿಪ್ಪೆಯಲ್ಲಿ ಬಿಸಾಡಿ ಹೋಗಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಷಯವು ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ತಡವಾಗಿ ಬೆಳಕಿಗೆ ಬಂದಿದ್ದು, ನವಜಾತ ಶಿಶು ಗಂಡು ಮಗುವಾಗಿದ್ದು ಅನೈತಿಕತೆಯಿಂದ ಹುಟ್ಟಿದ ಮಗುವಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

ಈ ಕುರಿತಂತೆ ಕುಕನೂರು ಠಾಣೆಯ ಪೋಲಿಸ್ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿದರು ಎಂದು ತಿಳಿದು ಬಂದಿದ್ದು, ಬನ್ನಿಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸುರೇಶ ರಾಠೋಡ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಗಿದೆ.

About Mallikarjun

Check Also

ಸುವರ್ಣ ಸಾಧಕಿ ಪ್ರಶಸ್ತಿಗೆ ಭಾಜನರಾದ. ರೂಪರಾಣಿ ಲಕ್ಷ್ಮಣ್

Winner of the Golden Achievement Award. Rooprani Laxman. ಗಂಗಾವತಿ. ನಗರದ ಆರ್ಯವೈಶ್ಯ ಸಮಾಜದ ಅಧ್ಯಕ್ಷ ಶ್ರೀಮತಿ ರೂಪಾರಾಣಿ …

Leave a Reply

Your email address will not be published. Required fields are marked *