ವರದಿ : ಬಂಗಾರಪ್ಪ .ಸಿ.
ಹನೂರು : ದೇಶದಲ್ಲಿಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಮಹಿಳೋದಯ ಮಹಿಳಾ ಒಕ್ಕೂಟ ವತಿಯಿಂದ ಮಹಿಳೆಯರು ಹನೂರು ಪಟ್ಟಣದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನೆಡೆಸಿದರು.
ಹನೂರು ಪೋಲಿಸ್ ಠಾಣೆಯಿಂದ ಪ್ರಾರಂಭಿಸಿ ಖಾಸಗಿ ಬಸ್ನಿಲ್ದಾಣವನ್ನು ಸುತ್ತುವರೆದು ನಂತರ
ಮೆರವಣಿಗೆ ಮೂಲಕ ಹನೂರು ತಾಲೂಕು ಆಡಳಿತ ಕಚೇರಿ ಮುಂಭಾಗ ತಲುಪಿ ಹನೂರು ತಹಸೀಲ್ದಾರ್ ಗುರುಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಪ್ರತಿಭಟನಕಾರರು ಮಾತನಾಡಿ, ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ಆಗುತ್ತಿದೆ. ಕೇಂದ್ರ, ರಾಜ್ಯ ಸರಕಾರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗದ ಮೂಲಕ ಮಹಿಳೆಯರ ರಕ್ಷಣೆಗಾಗಿ ಹಲವಾರು ಕಾರ್ಯಗಳ ಮೂಲಕ ಯೋಜನೆ ರೂಪಿಸಿದರೂ ಕಾರ್ಯ ನಿರ್ವಹಣೆಯಲ್ಲಿ ವಿಫಲತೆ ನೋಡುತ್ತಿದ್ದೇವೆ . ಕೊಲ್ಕತ್ತಾದಲ್ಲಿ ಆ.9ರಂದು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣ ನಾಗರರೀಕ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.
ತಹಶಿಲ್ದಾರರ ಸಮ್ಮುಖದಲ್ಲಿ
ಇದೆ ವೇಳೆ ಹಲವಾರು ಮಹಿಳೋದಯ ಮಹಿಳಾ ಒಕ್ಕೂಟದಿಂದ ಬೇಡಿಕೆ ಹಾಗೂ ಹಕ್ಕೊತ್ತಾಯ ಮಂಡಿಸಿದರು.
ಪ್ರತಿಭಟನೆಯಲ್ಲಿ ಓಡಿಪಿ ಸಂಸ್ಥೆಯ ಸಿಬ್ಬಂದಿಗಳಾದ ಸಾಗರ್, ಪ್ರವೀಣ್ ಕುಮಾರ್, ರಾಮಕೃಷ್ಣ, ಮಹೇಶ್, ಮೋಕ್ಷಮೆರಿ, ಲಿಲ್ಲಿ ಸೆಲ್ವಿ ಕುಮಾರಿ, ಪಾಕ್ಯಮೇರಿ, ಅಂಥೋನಿಯಮ್ಮಳ್, ಪಾಸ್ಕಮೇರಿ ಸೇರಿದಂತೆ ಓಡಿಪಿ ಮಹಿಳಾ ಒಕ್ಕೂಟದ ಹಲವಾರು ಮಹಿಳೆಯರು ಪಾಲ್ಗೊಂಡಿದ್ದರು.