Breaking News

ವಕ್ಕ್ ಬೋರ್ಡ್ ತಿದ್ದುಪಡಿ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ತಿಪಟೂರಿನಲ್ಲಿ ಪ್ರತಿಭಟನೆ .

Protest against the central government in Tiptur against the Waqf Board amendment.

ತಿಪಟೂರು:ಕೇಂದ್ರ ಸರ್ಕಾರದ ವಕ್ಪ್ ಬೋರ್ಡ್ ತಿದ್ದುಪಡಿ ವಿರೋಧಿಸಿ,ಹಾಗೂ ವಕ್ಪ್ ಬೋರ್ಡ್ ಕಾನೂನುಗಳನ್ನ ಯಾಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ತಿಪಟೂರು ನಗರದ ಗಾಂಧೀನಗರ ಮದೀನ ಮಸೀದಿ ಅವರಣದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.

ಜಾಹೀರಾತು

ಮದೀನ ಮಸೀದಿ ಉಪಾಧ್ಯಕ್ಷ ಸೈಫುಲ್ಲ ಎಂ‌.ಮಾತನಾಡಿ ಕೇಂದ್ರ ಸರ್ಕಾರ ವಕ್ಪ್ ಬೋರ್ಡ್ ಕಾನೂನು ತಿದ್ದುಪಡಿ ಮಾಡಲು ಹೊರಟಿರುವುದು.
ಪೂರ್ವಾಗ್ರಹದಿಂದ ಕೂಡಿದೆ.ವಕ್ಪ್ ಕಾನೂನುಗಳು ಪ್ರವಾದಿ ಮಹಮದ್ ಪೈಗಂಬರ್ ರವರ ಕಾಲದಿಂದಲೂ ಆಚರಣೆಯಲ್ಲಿವೆ.ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ,ದೇವರ ಹೆಸರಿನಲ್ಲಿ ಚರಸ್ಥಿರಾಸ್ತಿ ದಾನವಾಗಿ ನೀಡಿದರೆ, ಆಸ್ವತ್ತು,ವಕ್ಪ್ ಸ್ಪತ್ತಾಗುತ್ತದೆ, ಯಾವುದೇ, ವ್ಯಕ್ತಿ ಅದನ್ನ ಬಳಸಿಕೊಳ್ಳಲು ಅವಕಾಶ ಇರುವುದಿಲ್ಲ,ಈ ಸ್ವತ್ತು ದೇವರ ಸ್ವತ್ತು ಎಂದು ಬಾವಿಸಲಾಗುತ್ತಿದು,ಕೇಂದ್ರ ಸರ್ಕಾರ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ವಕ್ಪ್ ಕಾನೂನಿಗೆ ತಿದ್ದುಪಡಿ ಮಾಡಲು ಹೊರಟಿರುವುದು ಸರಿಯಲ್ಲ,ವಕ್ಪ್ ತಿದ್ದುಪಡಿ ಮೂಲಕ ಮುಸ್ಲೀಂ ಸಮುದಾಯಕ್ಕೆ ತೊಂದರೆ ನೀಡಲು ಹೊರಟಿದೆ.ಭಾರತೀಯ ಮುಸ್ಲೀಂ ವಯುಕ್ತಿಕ ಕಾನೂನು ಮಂಡಳಿ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಲಾಗುತ್ತಿದ್ದು.ನಮ್ಮ ದೇಶದ ಕಾನೂನು .ಸಂವಿಧಾನ ಹಾಗೂ ಸುಪ್ರಿಂ ಕೋರ್ಟ್ ಮೇಲೆ ನಂಬಿಕೆ ಇದೆ. ಸುಪ್ರಿಂ ಕೋರ್ಟ್ ತೀರ್ಮಾನಕ್ಕೆ ಬದ್ದವಾಗಿರುತ್ತೇವೆ.ಸುಪ್ರಿಂ ಕೋರ್ಟ್ ನಲ್ಲಿ ಅಲ್ಲಾಹ್ ಆಶೀರ್ವಾದದಿಂದ ನಮ್ಮ ಪರವಾಗಿ ನ್ಯಾಯದೊರೆಯಲಿದೆ.ಎಂದು ತಿಳಿಸಿದರು

ಮುತ್ತಾವಲಿ ಮಹಮದ್ ದಸ್ತಗಿರ್ ಮಾತನಾಡಿ ಕೇಂದ್ರ ಸರ್ಕಾರ ವಕ್ಪ್ ತಿದ್ದುಪಡಿಯ ಮೂಲಕ ಮುಸ್ಲೀಂ ಸಮುದಾಯದ ಮೇಲೆ ತೊಂದರೆ ನೀಡುತ್ತಿದೆ.ಹಿಂದಿನಿಂದಲೂ ನಡೆದುಕೊಂಡು ಕಾನೂನುಗಳನ್ನ ಯಥಾವತ್ತಾಗಿ ಮುಂದುವರಿಸಬೇಕು. ಕೇಂದ್ರ ಸರ್ಕಾರದ ಟ್ರಸ್ಟ್ ರಚನೆಗೆ ನಮ್ಮ ವಿರೋಧವಿಲ್ಲ, ಆದರೆ ಮುಸಲ್ಮಾನರ ವಯುಕ್ತಿಕ ಟ್ರಸ್ಟ್ ಗೆ ಅನ್ಯಧರ್ಮಿಯರನ್ನ ಸದಸ್ಯರನ್ನಾಗಿ ನೇಮಕ ಮಾಡಲುವಹೊರಟಿರುವುದು ಸರಿಯಲ್ಲ. ಅನ್ಯಧರ್ಮಿಯರ ನೇಮಕಕ್ಕೆ ಮುಸ್ಲಿಂ ಸಮುದಾಯದ ವಿರೋಧವಿದೆ.ಕೇಂದ್ರ ಸರ್ಕಾರ ವಕ್ಪ್ ತಿದ್ದುಪಡಿ ವಾಪಾಸ್ ಪಡೆದು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು

ಪ್ರತಿಭಟನೆಯಲ್ಲಿ ಮುಸ್ಲಿಂ ಮುಖಂಡರಾದ ಮುನ್ನಾವರ್ ಪಾಷಾ,
ಮಹಮದ್ .ಪರ್ವೀಜ್. ಮುನ್ನಾವರ್ ಯೂನಿಸ್ ಮುಂತ್ತಾದವರು ಉಪಸ್ಥಿತರಿದರು
ವರದಿ:ಮಂಜು ಗುರುಗದಹಳ್ಳಿ

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *