Martyrs’ Day Independence for India through the weapon of peace: Banjar Nagaraj

ಕೊಟ್ಟೂರು :ಪಟ್ಟಣದ ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ ) ಹಾಗೂ ಎಸ್ ಜಿ ಕೆ ಡಿಫೆನ್ಸ್ ಅಕಾಡೆಮಿ ಸಹಯೋಗದಲ್ಲಿ ಹುತಾತ್ಮರ ದಿನಾಚರಣೆ ಗುರುವಾರ ಆಚರಿಸಲಾಯಿತು.
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಿಂದ ಕ್ಯಾಂಡಲ್ ದೀಪವನ್ನು ಹಚ್ಚಿಕೊಂಡು ದೇಶದ ಘೋಷಣೆ ಕೂಗುತ್ತಾ ಕಾಲ್ನಡಿಗೆ ಮೂಲಕ ಮಹಾತ್ಮ ಗಾಂಧೀಜಿ ವೃತ್ತದ ವರೆಗೆ ನಡೆಸಲಾಯಿತು. ನಂತರ ಮಹಾತ್ಮ ಗಾಂಧೀಜಿ ರವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ನಂತರ ಬಂಜಾರ್ ನಾಗರಾಜ್ ಮಾತನಾಡಿದರು ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಯವರ ಮರಣ ದಿನವನ್ನು ಭಾರತದಾದ್ಯಂತ ಈ ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ.
ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ ಪ್ರತಿ ಗಳಿಗೆಯನ್ನು ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ, ಮೋಹನದಾಸ ಕರಮಚಂದ ಗಾಂಧಿಯವರ ಸಹಸ್ರಾರು ಜನರು ಮತ್ತು ಅವರ ಕೆಲಸ ಮತ್ತು ಆಲೋಚನೆಗಳನ್ನು ಬೆಂಬಲಿಸಿದರು ಮತ್ತು ಅವರ ಹಾದಿಯಲ್ಲಿ ನಡೆದರು. ಎಂದರು
ಜನವರಿ 30 ರಂದು ಮಹಾತ್ಮ ಗಾಂಧಿಯವರ ಸ್ಮರಣೆಗಾಗಿ ಹುತಾತ್ಮರ ದಿನ ಅಥವಾ ಶಹೀದ್ ದಿವಸ್ ಎಂದು ಬರುತ್ತದೆ. ಜೊತೆಗೆ, ಭಗತ್ ಸಿಂಗ್, ಶಿವರಾಮ್ ರಾಜಗುರು ಮತ್ತು ಸುಖದೇವ್ ಥಾಪರ್ ಎಂಬ ಮೂವರು ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಗಲ್ಲಿಗೇರಿಸಿದ ಪ್ರಮುಖ ದಿನ ಮಾರ್ಚ್ 23.
ಎಂದು ನೆನಪಿಸಿಕೊಳ್ಳುವುದಿಲ್ಲ. ಜೊತೆಗೆ, ಜನವರಿ 30 ಮಹಾತ್ಮ ಗಾಂಧಿಯವರ ನೆನಪಿಗಾಗಿ ಹುತಾತ್ಮರ ದಿನ ಆಚರಿಸುತ್ತಾರೆ. ಎಸ್ ಜಿ ಕೆ ಡಿಫೆನ್ಸ್ ಅಕಾಡೆಮಿ ಗುರುಬಸವರಾಜ್ ಎಂದರು
ರಾಷ್ಟ್ರಪಿತ ಬಾಪು ಮತ್ತು ದೇಶದಾದ್ಯಂತ ಹುತಾತ್ಮರಾದ ಇತರ ಹುತಾತ್ಮರ ಸ್ಮರಣಾರ್ಥವಾಗಿ ಹಸಿರು ಹೊನಲು ತಂಡ ಬಿ ಆರ್ ವಿಕ್ರಂ ಬಂಜಾರ್ ನಾಗರಾಜ್ ಇತರರಿಂದ ‘ರಘುಪತಿ ರಾಘವ ‘ಭಜನೆಗಳು ಹಾಡುಗಳು ಪ್ರಾರ್ಥನೆಯನ್ನು ಸಹ ಹಾಡಿದರು.
ಈ ಸಂದರ್ಭದಲ್ಲಿ ಎಸ್ ಜಿ ಕೆ ಡಿಫೆನ್ಸ್ ಅಕಾಡೆಮಿ ಚೇರ್ಮನ್ ಹಾಗೂ ಹಾಲಿ ಯೋಧ ಹೆಚ್ ಕೊಟ್ರೇಶ್, ಹಳೆ ಕೊಟ್ಟೂರು ಸೇವಾ ಟ್ರಸ್ಟ (ರಿ) ಸಂಸ್ಥಾಪಕ ಹೆಚ್ ವಿಜಯ ಕುಮಾರ್,ಸುವೇಭ್ ವಲಿ ಕೆ, ಅನಿಲ್,
ಕರವೇ ತಾಲೂಕು ಅಧ್ಯಕ್ಷ ಎಂ. ಶ್ರೀನಿವಾಸ,ಎಪಿಎಂ ಸಿ ಸದಸ್ಯ ಚಿರಬಿ ಕೊಟ್ರೇಶ್, ಕೆಪಿಎಸ್ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಕೆ ಕೊಟ್ರೇಶ್, ಹೆಚ್ ದಾದಪೀರ್,ಹಳೆ ಕೊಟ್ಟೂರು ಸೇವಾ ಟ್ರಸ್ಟ್ ನಾ ತಾಲೂಕು ಅಧ್ಯಕ್ಷ ಮಹಮ್ಮದ್ ಗೌಸ್, ಉಪಾಧ್ಯಕ್ಷ ಹುಲಿಗೇಶ್, ಸುಭಾನ್, ಹಸಿರು ಹೊನಲು ಸೇವಾ ಸಂಸ್ಥೆ (ರಿ ) ಗುರುರಾಜ್, ಹೊನಲು ತಂಡದ ಸದಸ್ಯರಾದ ಬಿ ಆರ್ ವಿಕ್ರಂ ಕುಮಾರ್ ಮಂಡಕ್ಕಿ ಪ್ರಕಾಶ್, ಕವೇಂದ್ರ, ಅಜಯ್, ಹಳೆ ಕೊಟ್ಟೂರು ತಂಡದ ಸದಸ್ಯರಾದ ಪರಶುರಾಮ್ ಎಸ್, ಡಿ ಸಿದ್ದಪ್ಪ, ಕಬ್ಬಡಿ ಕಿರಣ್ ಕೋತಿ ರಾಜ್, ಅರುಣ್, ಇತರರು ಉಪಸ್ಥಿತರಿದ್ದರು.