Breaking News

ಕೊಪ್ಪಳದಲ್ಲಿ ಜು.೬ರಂದು ಚುಸಾಪ ವತಿಯಿಂದ ಉಪನ್ಯಾಸ ಹಾಗೂ7ನೆಯ ಜಿಲ್ಲಾ ಮಟ್ಟದ ಕವಿಗೋಷ್ಠಿ! 

Lecture and 7th district-level poetry conference by Chusapa on July 6th in Koppal!




 ಕೊಪ್ಪಳ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ  ಜುಲೈ ೬ರಂದು  ಮುಂಜಾನೆ 10.30 ಕೆ ಕೊಪ್ಪಳದ     ವಿ ಹೆಚ್ ಎಂ ಲಾ ಅಸೋಶಿಯಟ್ಸ್ ಮತ್ತು ಬಾಳಪ್ಪ ಎಸ್ ವೀರಾಪುರ ವಕೀಲರ ಆಫೀಸ್, ಶರ್ಮಾ ಬಿಲ್ಡಿಂಗ್ ,ಗಂಜ್ ಸರ್ಕಲ್ ಹತ್ತಿರ, ವಿಕಾಸ್ ಬ್ಯಾಂಕ್ ಮೇಲೆಗಡೆ* *ಎರಡನೇಯ ಮಹಡಿ ಯಲ್ಲಿ ನಡೆಯಲಿದೆ. ನಿವೃತ್ತ ಪ್ರಾಂಶುಪಾಲರಾದ ಸಿ.ವಿ.ಜಡಿಯವರ ಅವರು ಜಾನಪದ ಸಾಹಿತ್ಯ ದಲ್ಲಿ  ಹಾಸ್ಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.  ಹಿರಿಯ ಸಾಹಿತಿ ವೀರಣ್ಣ ಹುರಕಡ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ,   ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ಮಹಾಂತೇಶ್ ಮಲ್ಲನಗೌಡರ, ಉಪನ್ಯಾಸಕಿ ಡಾ. ಭಾಗ್ಯಜ್ಯೋತಿ , ಹಿರೇ ಸಿಂದೋಗಿ ಶಿಕ್ಷಕ ಸಾಹಿತಿ ಯಲ್ಲಪ್ಪ ಹರನಾಳಗಿ, ತಾಳಕೇರಿಯ ಯುವ  ಸಾಹಿತಿ ರಾಘು ಹಳ್ಳಿ, ವಕೀಲರು ಸಾಹಿತಿಗಳಾದ ವಿಜಯ ಅಮೃತರಾಜ್ ಹಾಗೂ ಬಾಳಪ್ಪ ವೀರಾಪುರ ಭಾಗವಹಿಸಲಿದ್ದಾರೆ.ನಂತರ ನಡೆಯುವ 

ಜಾಹೀರಾತು

 “ಕವಿ ಸಂಗಮ ” ಚುಟುಕು – ಕವಿಗೋಷ್ಠಿ ಯಲ್ಲಿ  ಕವಿಗಳಾದ  ನಟರಾಜ ಸವಡಿ,  ಎ. ಪಿ. ಅಂಗಡಿ.,ಶ್ರೀಮತಿ ಸುಮಂಗಲ, ಹೆಚ್. ಪ್ರದೀಪ್ ಕುಮಾರ ಹದ್ದಣ್ಣವರ್. ರವಿ ಹಿರೇಮನಿ, ಶ್ರೀನಿವಾಸ ಚಿತ್ರಗಾರ.  ಬಾಳಪ್ಪ ವೀರಾಪುರ. , ಶಿ. ಕಾ. ಬಡಿಗೇರ. ವಸಂತಕುಮಾರ ಗುಡಿ,  ಶಿವ ಪ್ರಸಾದ್ ಹಾದಿಮನಿ,  ಶ್ರೀಮತಿ ಪುಷ್ಪ ಲತಾ ಯೋಳಭಾವಿ, ಶ್ರೀಮತಿ ಶಾರದಾ ಸಿಂಗ್,ರಜಪೂತ, ಶ್ರೀಮತಿ ನಾಗರತ್ನ ಬನ್ನಿಕೊಪ್ಪ,   ಪೂಜಾ ವಣಗೇರಿ ಮೊದಲಾದವರು ಕವಿತೆ ವಾಚಿಸಲಿದ್ದಾರೆ ಸಾಹಿತ್ಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ಪ್ರದಾನ ಕಾಯ ೯ದಶಿ೯ ಡಾ.ಮಹಾಂತೇಶ್ ನೆಲಾಗಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯಿಂದ ಎಐಡಿಎಸ್‌ಓ ಕೊಪ್ಪಳ ಜಿಲ್ಲಾ  ಸಮಿತಿಯು  ತೀವ್ರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.

The AIDSSO Koppal District Committee has expressed deep shock and outrage over the recent incident …

Leave a Reply

Your email address will not be published. Required fields are marked *