Teacher Madhu Kumar Kulkarni is the only teacher who can transform the society
ಗಂಗಾವತಿ : ಸಮಾಜದಲ್ಲಿ ಉತ್ತಮ ಹಾಗೂ ಆದರ್ಶ ಪ್ರಜೆಗಳನ್ನು ರೂಪಿಸುವವರು ಶಿಕ್ಷಕರಾಗಿದ್ದು, ಇಡೀ ಸಮಾಜದಲ್ಲಿ ಉತ್ತಮ ಪರಿವರ್ತನೆ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಮಲ್ಲಾಪೂರ ಶಾಲೆಯ ಶಿಕ್ಷಕ ಮಧುಕುಮಾರ ಕುಲಕರ್ಣಿ ತಿಳಿಸಿದರು.
ತಂದೆ, ತಾಯಿ, ಗುರುಗಳು ಈ ಮೂವರಿಗಿಂತ ಮಿಗಿಲಾದ ವ್ಯಕ್ತಿಗಳಿಲ್ಲ. ಪ್ರತಿಯೊಬ್ಬರೂ ತಮ್ಮ ತಂದೆ, ತಾಯಿಯನ್ನು ಬಿಟ್ಟರೆ ಶಿಕ್ಷಕರಿಗೆ ಮಾತ್ರ ಪೂಜ್ಯಸ್ಥಾನ ನೀಡುತ್ತಾರೆ ಎಂದರು.
ಪ್ರತಿಯೊಬ್ಬ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಪಾಠವನ್ನು ಬೋಧಿಸುವ ಮೂಲಕ ಮೌಲ್ಯಯುತ ಶಿಕ್ಷಣವನ್ನು ನೀಡುವರು. ಗುರುವಿನ ಸ್ಥಾನಕ್ಕೆ ಅದರದ್ದೇ ಆದ ಮಹತ್ವವಿದೆ ಎಂದರು.
ಡಾ ರಾಧಾಕೃಷ್ಣನ್ ರವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ರಾಧಾಕೃಷ್ಣನ್ ರವರು ನಮ್ಮ ಜೊತೆ ಇಲ್ಲ. ಆದರೆ ಅವರು ಹಾಕಿಕೊಟ್ಟಿರುವಂತಹ ಮೌಲ್ಯಗಳು, ಆದರ್ಶ ಚಿಂತನೆಗಳು ನಮ್ಮ ಜೊತೆಗಿವೆ. ಶಿಕ್ಷಕರ ದಿನಾಚರಣೆ ಕಾರ್ಯಕ್ರಮವು ಕೇವಲ ಒಂದು ದಿನದ ಹಬ್ಬವಲ್ಲ. ಪ್ರತಿಯೊಬ್ಬ ಶಿಕ್ಷಕರು ಡಾ ರಾಧಾಕೃಷ್ಣನ್ ಅವರ ಆದರ್ಶ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ಶಿಕ್ಷಕರಾಗಬೇಕು ಅಂತಹ ಶಿಕ್ಷಕರಲ್ಲಿ ಆನೆಗೊಂದಿ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಶರಣಪ್ಪ ಕುಂಬಾರ ರವರಿಗೆ ಜಿಲ್ಲಾ ಅತ್ಯುತ್ತಮ ಪ್ರಶಸ್ತಿ ಲಭಿಸಿರುವದರಿಂದ ಸಂತಸ ತಂದಿದೆ ಎಂದು ಹರ್ಷ ವ್ಮಕ್ತಪಡಿಸಿದ್ದಾರೆ.
ಶಿಕ್ಷಕ ಎಂಬ ಮೂರು ಅಕ್ಷರಗಳುಳ್ಳ ಒಂದು ಪದವು ಇಡೀ ಲೋಕದ ವಿದ್ಯಾರ್ಥಿಗಳ ಜೀವನವನ್ನು ಬೆಳಗಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕೈ ಹಿಡಿದು ಎತ್ತುವ ಸಾಮರ್ಥ್ಯ ಇರುವುದು ಶಿಕ್ಷಕರಿಗೆ ಮಾತ್ರ ಎಂದರು.
ಅನ್ಯ ಕ್ಷೇತ್ರದಲ್ಲಿ ತಪ್ಪು ಮಾಡಿದರೆ ಅದನ್ನು ಪುಣ್ಯ ಕ್ಷೇತ್ರ ಹೋಗಿ ಪರಿಹರಿಸಿಕೊಳ್ಳಬಹುದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಇದ್ದುಕೊಂಡು ಶಿಕ್ಷಕರು ತಪ್ಪು ಮಾಡಿದರೆ ಆ ತಪ್ಪಿಗೆ ಯಾವ ಪುಣ್ಯ ಕ್ಷೇತ್ರಕ್ಕೂ ಹೋದರು ಕೂಡ ತೊಳೆದುಕೊಳ್ಳಲು ಸಾಧ್ಯವಿಲ್ಲ.
ಆದ್ದರಿಂದ ಶಿಕ್ಷಕ ವೃತ್ತಿಯು ಬಹಳ ಪವಿತ್ರ ಸ್ಥಾನ ಪಡೆದಿದ್ದು, ತಮ್ಮ ಕರ್ತವ್ಯದಲ್ಲಿ ಯಾವುದೇ ಲೋಪ ಎಸಗಬೇಡಿ ಎಂದು ಶುಭಕೋರಿದರು.