Breaking News

ಗಂಭೀರವಾಗಿ ಗಾಯಾಗೊಂಡಿರುವ ವಿದ್ಯಾರ್ಥಿಗಳ ಸಂಪೂರ್ಣವಾದ ಚಿಕಿತ್ಸ ವೆಚ್ಚವನ್ನು ಸರಕಾರವೇ ಭರಿಸಲಿದೆ : ಡಾ.ಶರಣಪ್ರಕಾಶ ಪಾಟೀಲ್

Government will bear the entire medical expenses of seriously injured students: Dr. Sharanprakash Patil

ಜಾಹೀರಾತು

ಮಾನ್ವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ ಇಂದು ಬೆಳಿಗ್ಗೆ ರಾಯಚೂರಿನ ರಿಮ್ಸ್ಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುರ್ಡಿ ಗ್ರಾಮದ ಗಾಯಾಳು ವಿದ್ಯಾರ್ಥಿಗಳ ಆರೋಗ್ಯವನ್ನು ವಿಚರಿಸಿ ಅಗತ್ಯವಾದ ಚಿಕಿತ್ಸೆ ನೀಡುವುದಕ್ಕೆ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದು ಗಾಯಾಳುಗಳ ಸಂಪೂರ್ಣವಾದ ಚಿಕಿತ್ಸ ವೆಚ್ಚವನ್ನು ಸರಕಾರವೇ ಭರಿಸಲಿದೆ ಹಾಗು ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳಿಗೆ ೩ ಲಕ್ಷ ಪರಿಹಾರವನ್ನು ನೀಡುವುದಕ್ಕೆ ಏರ್ಪಡು ಮಾಡಲಾಗಿದೆ. ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡ ಕುರ್ಡಿ ಗ್ರಾಮದ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಕುಟುಂಬದವರಿಗೆ ಸರಕಾರದ ವತಿಯಿಂದ ಸಾಂತ್ವನ ಹೇಳಿ ಪರಿಹಾರವನ್ನು ವಿತರಿಸಲಾಗಿದೆ ಹಾಗೂ ಇಂತಹ ಘಟನೆಗಳು ಜಿಲ್ಲೇಯಲ್ಲಿ ಮರುಕಳಿಸದಂತೆ ಜಿಲ್ಲೆಯಲ್ಲಿ ಬಸ್‌ಗಳನ್ನು ಹೊಂದಿರುವ ಎಲ್ಲಾ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರ ಸಭೆಯನ್ನು ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೆಶನ ನೀಡಲಾಗಿದೆ. ಘಟನೆಗೆ ಸಂಭಂದಿಸಿದಂತೆ ಸ್ಥಳದ ವ್ಯಾಪ್ತಿಯಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಂಪೂರ್ಣವಾದ ತನಿಖೆಯನ್ನು ನಡೆಸಿ ವರದಿಯನ್ನು ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಸಂಪೂರ್ಣವಾಗಿ ಹದಗೆಟಿರುವುದರಿಂದ ೧೬೦೦ ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ರಸ್ತೆ ನಿರ್ಮಾಣವಾಗುವ ಸಂದರ್ಭದಲ್ಲಿಯೇ ಈ ಘಟನೆ ನಡೆದಿದ್ದು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲೂಕಿನಲ್ಲಿ ಅಕ್ರಮ ಅರಳು ಸಾಗಣೆಕೆಗೆ ಅವಕಾಶ ಇಲ್ಲ ಪರವಾನಿಗೆ ಹೊಂದಿರುವವರು ಮಾತ್ರ ಮರಳು ಸಾಗಣಿಕೆ ಮಾಡಬೇಕು ಉಳಿದವುಗಳನ್ನು ಮುಚ್ಚಬೇಕು ಅಕ್ರಮ ಮರಳು ಗಾರಿಕೆಗೆ ಜಿಲ್ಲೆಯಲ್ಲಿ ಅವಕಾಶ ನೀಡುವುದಿಲ್ಲ ಈ ಕುರಿತು ಸಂಭAದಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಅದೇಶವನ್ನು ನೀಡಲಾಗಿದೆ ಎಂದು ತಿಳಿಸಿದರು.
ಶಾಸಕ ಹಂಪಯ್ಯನಾಯಕ, ಮುಖಂಡರಾದ ರವಿಬೋಸರಾಜು ಇದ್ದರು.

About Mallikarjun

Check Also

ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

Preparatory meeting on the occasion of Sri Shankaracharya Jayanthotsava. ಗಂಗಾವತಿ. ನಗರದ ತಹಸಿಲ್. ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.