The true ideals of Basavadi Sharan should be conveyed to the next generation : Shivanna Indwadi
ಪಟ್ಟಣದ ವಿಶ್ವಚೇತನ ಸಂಸ್ಥೆಯ ಆವರಣದಲ್ಲಿ ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ಹೆಚ್ ಕೆ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದ್ದ ‘ವಚನ ಶ್ರಾವಣ’ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು, ಕನ್ನಡ ನಾಡಿನ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶರಣರ ಬದುಕೇ ನಮಗೆ ದಾರಿದೀಪ. ಅವರ ಬದುಕೇ ನಮಗೆ ಮಾರ್ಗದರ್ಶನ. ಶರಣರ ವಚನಗಳು ನಮ್ಮ ಕಿವಿಯ ಮೇಲೆ ಬೀಳುತ್ತಾ, ಪ್ರಭಾವ ಬೀರುತ್ತಾ, ನಮ್ಮ ಜೀವನವನ್ನು ಸರಿದಾರಿಗೆ ಕರೆದ್ಯೊಯುತ್ತವೆ. ಮನಸ್ಸು ಮಲೀನಗೊಂಡಿರುವ ಈ ಸಮಯದಲ್ಲಿ ನಾವು ಸುಂದರ ಸಮಾಜ ಕಟ್ಟಲು ವಚನಗಳ ಆಂದೋಲನ ನಡೆಸಬೇಕಿದೆ. ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಅನುಭಾವ ಸಾರವನ್ನು ಕಟ್ಟಿಕೊಟ್ಟವರು ನಮ್ಮ ಬಸವಾದಿ ಶರಣರು. ಆದರೆ, ಇತ್ತೀಚಿನ ದಿನಗಳಲ್ಲಿ ವಚನ ದರ್ಶನ ಎನ್ನುವ ವಿಕೃತ ಕೃತಿಗಳ ಮೂಲಕ ಬಸವಾದಿ ಶರಣರ ನಿಜವಾದ ವಚನಗಳನ್ನು ತಿರುಚಿ, ಬಲಪಂಥೀಯ ಮಾಡಲು ಕೆಲವು ವಿಕೃತ ಮನಸ್ಸುಗಳು ಹಪಹಪಿಸುತ್ತಿವೆ. ಇಂದಿನ ಯುವ ಪೀಳಿಗೆಯು ಅದನ್ನು ಒಪ್ಪದೆ ಖಂಡಿಸಬೇಕು. ಶರಣರ ನಿಜವಾದ ಆಶಯವನ್ನು ಅರಿಯಬೇಕು. ವಚನಗಳ ನಿಜಾರ್ಥ ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕು. ಶರಣರ ಮಾತುಗಳೆಂದರೆ ಅದು ಜ್ಯೋರ್ತಿಲಿಂಗ. ಶರಣರು ಸರ್ವಕಾಲಕ್ಕೂ ಶ್ರೇಷ್ಠರು. ಯಾವುದೇ ಭೇದ ಭಾವ ವಿಲ್ಲದೆ ಸಮ ಸಮಾಜದ ಕನಸನ್ನು ನೆನಸು ಮಾಡಿದವರು ಬಸವಾದಿ ಶರಣರು. ಶ್ರಮಿಕ ವರ್ಗದ ಜನರು ಕಟ್ಟಿದ ಕಲ್ಯಾಣ ಸಾಮ್ರಾಜ್ಯದ ನಿಜಕ್ಕೂ ಬಹಳ ಸುಂದರ. ಶರಣರ ಶ್ರೇಷ್ಠತೆಯು ಅವರ ನಡೆ ನುಡಿಯಲ್ಲಿದೆ. ನುಡಿದಂತೆ ನಡೆ, ನಡೆದಂತೆ ನುಡಿ ಅವರ ಜೀವನ. ಸಮಾಜದ ಸ್ವಾಸ್ಥ್ಯ ಕಾಪಾಡಲು, ಸತ್ಯ ಶುದ್ಧ ಜೀವನ ನಡೆಸಲು ಬಸವಾದಿ ಶರಣರು ನಮಗೆ ಕೊಟ್ಟ ವಚನ ಸಾಹಿತ್ಯವು, ಸಾಮಾಜಿಕ ಜೀವನದಲ್ಲಿ ನಮ್ಮನ್ನು ಯೋಗ್ಯ ಮನುಷ್ಯನನ್ನಾಗಿ ಮಾಡಲು ಬಹಳ ಉಪಯುಕ್ತವಾಗಿದೆ. ಶರಣರ ವಚನ ಸಾಹಿತ್ಯ ಅಜ್ಞಾನದಿಂದ ಜ್ಞಾನದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಈ ನಿಟ್ಟಿನಲ್ಲಿ ಇಂತಹ ಉಪನ್ಯಾಸಗಳು ವಿಶೇಷವಾಗಿ ಯುವಜನರಿಗೆ ಜೀವನದ ಮೌಲ್ಯ, ಮಾರ್ಗದರ್ಶನ ಸಿಗುವಂತೆ ಮಾಡುತ್ತವೆ. ಜಗತ್ತಿನ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಕೊಟ್ಟಂತಹ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರವೇ ವಚನ ಸಾಹಿತ್ಯ ಎಂದು ಸ್ವತಃ ಬೇಂದ್ರೆಯವರ ತಿಳಿಸಿದ್ದಾರೆ. ಜಗತ್ತಿಗೆ ವಚನಗಳು ಆಂದೋಲನದ ಸ್ವರೂಪದಲ್ಲಿ ಬಂದವು. ಇಂದಿಗೂ ಅವುಗಳು ಬಹಳ ಪ್ರಸ್ತುತವಾಗಿವೆ. ಅದ್ದರಿಂದ ವಚನ ಸಾಹಿತ್ಯ ಅಧ್ಯಯನ ಇಂದಿನ ಅವಶ್ಯಕ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ವಚನವನ್ನು ಉಲ್ಲೇಖಿಸಿ ಅಂಧಕಾರದ ಅಳಿದಾಗ ಮಾತ್ರ ಸುಜ್ಞಾನ ಬರಲು ಸಾಧ್ಯ, ಇದರಿಂದ ಅಂತರಂಗದ ವಿಕಾಸವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಮಾತನಾಡಿ, ದಿನಕ್ಕೊಂದು ವಚನಗಳನ್ನು ಓದುವುದರಿಂದ ಕಂಡಿತ ನಾವು ಉನ್ನತವಾದ ಸ್ಥಾನವನ್ನು ಏರುತ್ತೇವೆ, ನಾವೆಲ್ಲರೂ ಇಂದಿನಿಂದ ವಚನಗಳನ್ನು ಅಧ್ಯಯನ ಮಾಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ ಎಸ್ ಬಿ ಪ್ರತಿಷ್ಠಾನದ ಎಸ್ ಶಶಿಕುಮಾರ್ ಮಾತನಾಡಿ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಇತರೆ ನೂರಾರು ಸಮಸ್ಯೆಗಳು ನಮಗೆ ಕಾಡುತ್ತಿವೆ, ಯಾರೂ ನೆಮ್ಮದಿಯಾಗಿ ಬದುಕುತ್ತಿಲ್ಲ. ನಾವು ನೆಮ್ಮದಿಯಿಂದ ಇರಲು ಬಸವಾದಿ ಶರಣರು ಹನ್ನೆರಡನೆಯ ಶತಮಾನದಲ್ಲಿಯೇ ಉತ್ತರವನ್ನು ವಚನಗಳ ಮೂಲಕ ನಮಗೆ ನೀಡಿದ್ದಾರೆ, ನಾವು ಅವುಗಳನ್ನು ಅರ್ಥೈಸಿಕೊಂಡು ಬದುಕುವುದನ್ನು ಕಲಿಯಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮ ನಿಮಿತ್ತ ಸಂಸ್ಥೆಯಲ್ಲಿ ನಡೆದ ವಚನ ವಾಚನ, ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜೊತೆಗೆ ಸಂಸ್ಥೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ವಚನ ಓದನ್ನು ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಸುಗಮ ಸಂಗೀತಗಾರರಾದ ಕೆ ಶಿವನಂಜು ಸಂಗೀತ ಸುಧೆಯನ್ನು ಹರಿಸಿ, ನೆರೆದಿದ್ದ ಎಲ್ಲರನ್ನೂ ಸಂಗೀತದ ಅಲೆಯಲ್ಲಿ ತೇಲಿಸಿದರು.
ಕಾರ್ಯಕ್ರಮದಲ್ಲಿ ರಾಜೇಶ, ಭಾಸ್ಕರನ್, ಅಕ್ಬರ್, ಜಗದೀಶ, ರಾಜಶೇಖರ, ಲೋಕೇಶ, ಚೇತನ, ಮೋಹನ, ನಂದಿನಿ, ಕವಿತಾ, ವಿನುತಾ, ನಿರ್ಮಲಾ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿದ್ದರು.