Application Invitation for Various Schemes.
ಸಿಂಧನೂರು /ಮಸ್ಕಿ 2024-25ನೇ ಸಾಲಿನ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯಮಹಿಳಾ ಅಭಿವೃದ್ಧಿ ನಿಗಮದಿಂದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ, ಉದ್ಯೋಗಿನಿ ಯೋಜನೆಯಡಿ ಸಹಾಯಧನ ಮತ್ತು ಬ್ಯಾಂಕಿನ ಮುಖಾಂತರ ಸಾಲವನ್ನು ಒದಗಿಸಿ ಕೊಟ್ಟು ಸ್ವಯಂ ಉದ್ಯೋಗಿಗಳಾಗಲು ಮಹಿಳಾ ಅಭಿವೃದ್ಧಿ ನಿಗಮದಡಿಯಲ್ಲಿ ಉದ್ಯೋಗಿನಿ ಯೋಜನೆ, ಚೇತನ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಯೋಜನೆಯಡಿ ಸೌಲಭ್ಯ ಆರ್ಜಿ ಸಲ್ಲಿಸುವ ಸೇವಾಸಿಂಧು ಪೋರ್ಟಲ್‌ನ https://sevasindhu.kar- nataka.gov.in ನಲ್ಲಿ ಹಾಗೂ ಗ್ರಾಮಒನ್,ಬೆಂಗಳೂರು ಒನ್, ಕರ್ನಾಟಕ ಒನ್‌ಗಳ ಮೂಲಕ ಆನ್‌ಲೈನ್ ಮೂಲಕ ಸೆಪ್ಟೆಂಬರ್ 21ರೂಳಗಾಗಿ
ಸಿಂಧನೂರು/ ಮಸ್ಕಿ, ತುರುವಿಹಾಳ ಯೋಜನಾ ವ್ಯಾಪ್ತಿಯಲ್ಲಿ ಬರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕಚೇರಿ, ರಾಯಚೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರು ಹಾಗೂ ಜಿಲ್ಲಾ ಅಭಿವೃದ್ಧಿ ನಿರೀಕ್ಷಕರು ಹಾಗೂ ರಾಯಚೂರು ಕಚೇರಿ ದೂರವಾಣಿ ಸಂಖ್ಯೆ: 9972033371 ಗೆ ಸಂಪರ್ಕಿಸಬಹುದು ಎಂದು ತುರ್ವಿಹಾಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಅಶೋಕ ಎಂ ಪಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.