Breaking News

ಕನ್ನಡ ಪತ್ರಿಕೋದ್ಯಮ ಬೆಳವಣಿಗೆಗೆ ಇಲಾಖೆ ಮತ್ತು ಅಕಾಡೆಮಿ ಪೂರಕ ಯೋಜನೆ ಹೇಮಂತ್ ನಿಂಬಾಳ್ಕರ್

Hemant Nimbalkar Department and Academy Supplemental Scheme for the Development of Kannada Journalism

ಜಾಹೀರಾತು


ಬೆಂಗಳೂರು: ಕನ್ನಡ ಪತ್ರಿಕೋದ್ಯಮದ ಬೆಳವಣಿಗೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಪೂರಕವಾಗಿ ಕೆಲಸ ಮಾಡಲಿದ್ದು ಪತ್ರಿಕೋದ್ಯಮ ಬೋಧಿಸುವ ವಿವಿಗಳು ಕಾಲೇಜುಗಳು ಸಹಕರಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಕರ್ ಮನವಿ ಮಾಡಿದರು.
ಅವರು ಬೆಂಗಳೂರಿನ ವಾರ್ತಾ ಸೌಧದ

ಸಭಾಂಗಣದಲ್ಲಿ ಆಯೋಜಿಸಿದ್ದ ಮಾಧ್ಯಮ ಶಿಕ್ಷಣ ಮಂಥನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕನ್ನಡ ಪತ್ರಿಕೋದ್ಯಮಕ್ಕೆ ತನ್ನದೇ ಆದಂತಹ ಇತಿಹಾಸ ಇದ್ದು ಜಾಗತಿಕ ಮಟ್ಟಕ್ಕೆ ತಕ್ಕಂತೆ ಮಾಧ್ಯಮ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ಬೋಧಿಸುವ ಕಾಲೇಜು ವಿಶ್ವವಿದ್ಯಾಲಯಗಳು ಮೇಲ್ದರ್ಜೆಗೇರಿಸಿ ಪಠ್ಯಕ್ರಮಗಳನ್ನು ಮಾಡಬೇಕಿದೆ ಪತ್ರಿಕೋದ್ಯಮ ಕಲಿತ ವಿದ್ಯಾರ್ಥಿಗಳು ಪತ್ರಿಕೋದ್ಯಮ ಅಲ್ಲದೆ ಐಟಿಬಿಟಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವಂಥ ಆಗಬೇಕು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕೊಡುಗೆ ನೀಡುವ ಕಾರ್ಯ ಮಾಡಲು ಇಲಾಖೆ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲು ಈ ಸಭೆಯಲ್ಲಿ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ. ಬಾಷೆ ಪರಿಸರ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತಂತೆ ಪತ್ರಿಕೋದ್ಯಮ ಬೆಳಕು ಚೆಲ್ಲಬೇಕು. ಯುವ ಪತ್ರಕರ್ತರಿಗೆ ಪತ್ರಿಕೋದ್ಯಮದ ಮಹತ್ವವನ್ನು ಪತ್ರಿಕೋದ್ಯಮ ಬೋಧಿಸುವವರು ಮನವರಿಕೆ ಮಾಡಬೇಕು.ಪ್ರಸ್ತುತ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಇಲಾಖೆ ಮತ್ತು ಅಕಾಡೆಮಿ ಕೌಶಲ್ಯಾಭಿವೃದ್ಧಿ ಹಾಗು ಅಗತ್ಯ ಪಠ್ಯ ಒದಗಿಸುವ ಕಾರ್ಯ ಮಾಡಲಾಗುತ್ತದೆ. ಪರಿಸರ ಮತ್ತು ಅಭಿವೃದ್ಧಿ ಪತ್ರಕರ್ದ್ಯಮಕ್ಕೆ ಹೆಚ್ಚಿನ ಹೊತ್ತು ನೀಡಲಾಗುತ್ತದೆ ಎಂದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ರಾಡಿ ಆಯೇಷಾ ಖಾನಂ ಮಾತನಾಡಿ, ಕನ್ನಡ ಪತ್ರಿಕೆ ಉದ್ಯಮ ಭಾರತದ ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಸ್ಥಾನವನ್ನು ಪಡೆದಿದೆ .
ಯುವ ಪತ್ರಕರ್ತರಿಗೆ ಅಗತ್ಯ ಕೌಶಲ್ಯಗಳನ್ನು ನೀಡುವ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆ ಮತ್ತು ಅಕಾಡೆಮಿ ಕಾರ್ಯ ಮಾಡಲಿದೆ ಎಂದರು.
ಸಭೆಯಲ್ಲಿ ಮಾಧ್ಯಮ ಅಕಾಡೆಮಿ ಸದಸ್ಯರಾದ ಕೆ ನಿಂಗಜ್ಜ, ಕೆ ವೆಂಕಟೇಶ್ ,ಕಾರ್ಯದರ್ಶಿ ರೂಪ ,ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಡೊಳ್ಳಿನ ವಿವಿಧ ವಿಶ್ವವಿದ್ಯಾಲಯ ಪತ್ರಿಕೋದ್ಯಮದ ಮುಖ್ಯಸ್ಥರು ಪತ್ರಿಕೋದ್ಯಮ ಕಾಲೇಜಿನ ಮುಖ್ಯಸ್ಥರುಗಳು ಸಭೆಯಲ್ಲಿ ಪಾಲ್ಗೊಂಡು ಅಮೂಲ್ಯ ಸಲಹೆಗಳನ್ನು ನೀಡಿದರು

About Mallikarjun

Check Also

ಹದಿನೈದು ದಿನವಾದರೂ ಬರದ ಕಸ ವಿಲೇವಾರಿ ವಾಹನ,,! ಸಾರ್ವಜನಿಕರ ಗೋಳು ಕೇಳುವವರು ಯಾರು ??

The garbage disposal vehicle hasn't arrived for fifteen days! Who listens to the public's complaints? …

Leave a Reply

Your email address will not be published. Required fields are marked *