Breaking News

ಕರ್ನಾಟಕ ಪತ್ರಕರ್ತರ ಸಂಘವು ದಾನಿಗಳ ಸಹಾಯದಿಂದಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ನೀಡುತ್ತಿರುವುದು ಶ್ಲಾಘನೀಯವಾದುದ್ದು : ಉದ್ಯಮಿ ರಂಗಸ್ವಾಮಿ.

Karnataka Journalists Association with the help of donors Giving free note books to government school children is commendable: Businessman Rangaswamy.

ಜಾಹೀರಾತು


ವರದಿ : ಬಂಗಾರಪ್ಪ .ಸಿ .
ಹನೂರು :ಶಾಲಾ ಮಕ್ಕಳು ತಮ್ಮ ಬಾಲ್ಯದಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದರೆ ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಹುದ್ದೆಗೆರಲು ಸಹಕಾರಿಯಾಗುತ್ತದೆ ಎಂದು ಉದ್ಯಮಿ ಪೊನ್ನಾಚಿ ರಂಗಸ್ವಾಮಿ ತಿಳಿಸಿದರು.
ಕರ್ನಾಟಕ ಪತ್ರಕರ್ತರ ಸಂಘ ಹನೂರು ಘಟಕದ ವತಿಯಿಂದ ಹಾಗೂ ಧಾನಿಗಳ ಸಹಯೋಗದೋಂದಿಗೆ ಭದ್ರಯ್ಯನಹಳ್ಳಿಯಲ್ಲಿನ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ ,ಪೆನ್ಸಿಲ್ ಗಳ ವಿತರಣೆ ಕಾರ್ಯ ಮಾಡಿ ಮತನಾಡಿದ ಉದ್ಯಮಿ ರಂಗಸ್ವಾಮಿ ಪ್ರತಿಯೋಬ್ಬ ಮನುಷ್ಯನು ತಾನು ಬೆಳೆದೆಂತೆಲ್ಲ ಇನ್ನೋಬ್ಬರಿಗೆ ಮಾದರಿಯಾಗಬೇಕು,ಗುಡ್ಡಗಾಡು ಪ್ರದೇಶದಲ್ಲಿನ ಗ್ರಾಮಗಳ ಮಕ್ಕಳಿಗೆ ಸಹಾಯ ಮಾಡುವ ಮನೋಭಾವವನ್ನು ನಾವೆಲ್ಲರೂ ಬೆಳಿಸಿಕೊಳ್ಳಬೇಕು ,ಹೆಚ್ಚಿನ ವಿದ್ಯಾಬ್ಯಾಸ ಮಾಡಿದ ಯುವಕರು ಇದೇ ರೀತಿಯಲ್ಲಿ ತಮ್ಮ ತಮ್ಮ ಊರುಗಳಲ್ಲಿನ ಶಾಲಾ ಮಕ್ಕಳಿಗೆ ಪಾಠ ಪ್ರವಚನಕ್ಕೆ ಸಂಭಂದಿಸಿದ ಲೇಖನ ಸಾಮಾಗ್ರಿಗಳನ್ನು ನೀಡಬೇಕು ಅದನ್ನು ಕರ್ನಾಟಕ ಪತ್ರಕರ್ತರ ಸಂಘ ಹನೂರು ಘಟಕದವರು ಮಾಡುತ್ತಿದ್ದು ಅವರ ಜೊತೆಯಲ್ಲಿ ನಾವು ಸೇರಿಕೊಂಡು ಮುಂದಿನ ದಿನಗಳಲ್ಲಿ ಸಹಾಯ ಕಾರ್ಯ ಮಾಡೋಣವೆಂದು ಅಭಯ ನೀಡಿದರು.
ನೋಟ್ ಬುಕ್ ವಿತರಣೆ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ ರಾಮಪುರ ಪೋಲಿಸ್ ಠಾಣೆಯ ಪಿಎಸ್ ಐ ಗಳಾದ ಈಶ್ವರ್ ಮಾತನಾಡಿ ನಮ್ಮ ದೇಶಕ್ಕೆ ಶಾಂತಿಯುತವಾಗಿ ಸ್ವಾತಂತ್ರ್ಯ ತೆಗೆದುಕೊಳ್ಳಬೇಕಾದರೆ ಅದಕ್ಕೆ ಕಾರಣ ಮಹಾತ್ಮ ಗಾಂಧಿಜಿಯವರು ಕಾರಣ ಅಂತಹವರ ಜಯಂತಿಯನ್ನು ಅಚರಣೆಯನ್ನು ನಾವು ಆಚರಿಸುತ್ತಿರುವುದು ನಮ್ಮೇಲ್ಲರ ಸೌಭಾಗ್ಯವೆ ಸರಿ ಈ ದಿನ ಕರ್ನಾಟಕ ಪತ್ರಕರ್ತರ ಸಂಘದ ಪತ್ರಕರ್ತರುಗಳು ಮಾಡುತ್ತಿರುವ ಶಾಲಾ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ನೀಡುತ್ತಿರುವ ಕಾರ್ಯಕ್ಕೆ ಶ್ಲಾಘನೀಯ ವ್ಯಕ್ತಪಡಿಸಿದರು.
ಕ ಪ ಸಂಘ ಹನೂರು ಘಟಕದ ಅಧ್ಯಕ್ಷರಾದ ಬಂಗಾರಪ್ಪ ಮಾತನಾಡಿ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು ಸದಾ ಒಂದಿಲ್ಲೊಂದು ರೀತಿಯಲ್ಲಿ ಸಾರ್ವಜನಿಕ ಸೇವೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಧಾನಿಗಳ ಸಹಾಯದಿಂದ ಇನ್ನು ಹೆಚ್ಚಿನ ಶಾಲಾ ಮಕ್ಕಳಿಗೆ ಸಹಾಯ ಮಾಡಲಾಗುವುದು ಎಂದರು .
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಬೆಂಗಳೂರಿನ ಪಟ್ಟಣಗೆರೆ ರಾಜರಾಜೇಶ್ವರಿ ನಗರದ ಶಿವಕುಮಾರ್ ಪಿ ಎಮ್ ,ರೈತ ಸಂಘದ ಮುಖಂಡರುಗಳಾದ ಅಮ್ಜಾದ್ ಖಾನ್ ,ಚಂಗಡಿ ಕರಿಯಪ್ಪ , ವಿನೋದ್ ,ನಟರಾಜು ,ರವಿಚಂದ್ರ ,ಶ್ರೀರಂಗಶೆಟ್ರು ,ಸಧ್ಭಾವ ಟ್ರಸ್ಟ್ ಅಧ್ಯಕ್ಷರಾದ ಗಂಗಣ್ಣ ,ಶಿವಕುಮಾರ್ ,ಕೌದಳ್ಳಿ ಗೊವಿಂದು ,ಕು, ಹೊಸೂರು ಗ್ರಾಪ ಅಧ್ಯಕ್ಷರಾದ ರಾಜಮ್ಮ ,ಗ್ರಾ ಪ ಸದಸ್ಯರಾದ ಶಿವು ,ವೆಂಕಟಚಲ,ಶಾಲಾ ಮುಖ್ಯ ಶಿಕ್ಷಕರಾದ ಮುತ್ತುರಾಜ್ ,ಕ ಪ ಸಂಘದ ಕಾರ್ಯದರ್ಶಿ ಬಸವರಾಜು, ಖಜಾಂಚಿ ಚೇತನ್ ಕುಮಾರ್ ,ಸದಸ್ಯರುಗಳಾದ ಅಜೀತ್ ಸೇರಿದಂತೆ ಇನ್ನಿತರರು ಹಾಜರಿದ್ದರು .

About Mallikarjun

Check Also

ತೆಲಗಿ ಮಾದರಿಯಲ್ಲಿ ಮತ್ತೊಂದು ಭಾರೀ ನಕಲಿ ಛಾಪಾ ಕಾಗದ ಹಗರಣ

Another massive fake printing paper scam on the Telugu model ಕಾನೂನು ಬಾಹಿರ ಫ್ರಾಂಕಿಂಗ್ ಮೂಲಕ ಸರ್ಕಾರದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.