Made Gowda calls upon casteists to organize themselves to give them a chance in reservation.
ವರದಿ:ಬಂಗಾರಪ್ಪ ,ಸಿ .
ಹನೂರು :ಕಳೆದ ಕೆಲವು ವರ್ಷಗಳಿಂದ ಸರ್ಕಾರವು ನಮ್ಮನ್ನು ಅಲೆಮಾರಿಗಳಾಗಿ ಸೇರಿಸಿದಮೆಲೆ ನಮಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ ಅದ್ದರಿಂದ ನಮಗೆ ಒಳ ಮೀಸಲಾತಿಗಾಗಿ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟವನ್ನು ಮಾಡಬೇಕು ಎಂದು ಮಾದೇಗೌಡರು ಕರೆ ನೀಡಿದರು .
ಹನೂರು ಪಟ್ಟಣದ ಲ್ಯಾನ್ ಸೊಸೈಟಿಯಲ್ಲಿನ ಸಭಾಂಗಣದಲ್ಲಿ ಮಾತನಾಡಿದ ಅವರು ಸರ್ಕಾರದಿಂದ ಹಿಂದಿನಿಂದಲೂ
ನಮಗಿರುವ ಮೂರು ಪರ್ಶೆಂಟ್ ಮಿಸಲಾತಿಯನ್ನು ನಮಗೆ ನೀಡಲೆಬೇಕು, ಜೊತೆಯಲ್ಲಿ ನಮ್ಮ ಜನಾಂಗದವರು ಹೆಚ್ಚು ವಿಧ್ಯಾಭ್ಯಾಸ ಮಾಡಿದರೆ ಖಾಸಾಗಿ ಕಂಪನಿಯಲ್ಲಿಯು ಸಹ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ಎಂದು ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದರು.
ಇದೇ ಕಾರ್ಯಕ್ರಮದಲ್ಲಿ
ಮಾತನಾಡಿದ ಮತ್ತೋರ್ವ ಮುಖಾಂಡರಾದ ಚಂದ್ರಪ್ಪ ಮೀಸಲಾತಿಗಾಗಿ ಮುಂದುವರಿದ ಸಮುದಾಯಗಳು ಈಗಾಗಲೇ ಹೋರಾಟವನ್ನು ಮಾಡುತ್ತಿದ್ದು ಸರ್ಕಾರದ ಗಮನವನ್ನು ಸೆಳೆದಿವೆ , ನಮ್ಮಗಳ ಹಕ್ಕಿಗಾಗಿ ನಿರಂತರವಾಗಿ ಹೋರಾಟ ಮಾಡೋಣವೆಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಗಿರಿಜನ ಮುಖಂಡರುಗಳಾದ ಮಾದೇವ್ ತಾಲ್ಲೂಕು ಸಂಘದ ಅಧ್ಯಕ್ಷರಾದ ದೊಡ್ಡಸಿದ್ದೇಗೌಡ , ಮಹಾದೇವಸ್ವಾಮಿ .ಪುಟ್ಟಮಾದೆಗೌಡ , ಕರಿಯಪ್ಪ ,ರಾಜಪ್ಪ, ಸರ್ಕಲ್ ಸಂಘದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ,ಸೇರಿದಂತೆ ಇನ್ನಿತರರು ಹಾಜರಿದ್ದರು .