
Authorities have forgotten their responsibility in the flooded Kaudalli village due to rain: MS Doddi Shivakumar alleges.
ಮಳೆಯಿಂದ ಜಲಾವೃತವಾದ ಕೌದಳ್ಳಿ ಗ್ರಾಮ ಜವಬ್ದಾರಿ ಮರೆತ ಅಧಿಕಾರಿಗಳು: ಎಮ್ ಎಸ್ ದೊಡ್ಡಿ ಶಿವಕುಮಾರ್ ಆರೋಪ.


ವರದಿ: ಬಂಗಾರಪ್ಪ .ಸಿ .
ಹನೂರು: ಗ್ರಾಮಗಳ ಆಡಳಿತದಲ್ಲಿ ಸರಿಯಾದ ಶ್ರಮವಹಿಸಿ ಕೆಲಸ ಮಾಡಿದರೆ ಎಲ್ಲಾ ಚರಂಡಿಗಳೆಲ್ಲ ಶುದ್ದವಾಗಿರುತ್ತದೆ ಅದ್ದರಿಂದ ನೀರು ಸರಾಗವಾಗಿ ಹರಿಯುತ್ತದೆ ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯವಾಗಿಲ್ಲ ಎಂದು ಚಾಮರಾಜನಗರ ಜಿಲ್ಲೆ ಪ್ರಚಾರ ಸಮಿತಿಯ ಸಂಯೋಜಕರಾದ ಶಿವಕುಮಾರ್ ಎಮ್ ಎಸ್ ದೊಡ್ಡಿರವರು ಆರೋಪಿಸಿದ್ದಾರೆ.
ನಂತರ ಮಾತನಾಡಿದ ಅವರು
ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮವು ಹಲವಾರು ಗ್ರಾಮಗಳಿಗೆ ಹಾದು ಹೋಗುವ ಮುಖ್ಯರಸ್ತೆಯಾಗಿದ್ದು ಮಾದಪ್ಪನ ಸನ್ನಿಧಿಯಲ್ಲಿಗೆ ನಿತ್ಯ ಸಾವಿರಾರು ವಾಹನಗಳು ಸಂಚಾರವಾಗುವುದರಿಂದ ಹಾಗೂ ಇಲ್ಲಿ ವಾಸಿಸುವ ಜನರಿಗೆ ಸೊಳ್ಳೆಗಳಿಂದ ಹರಡುವ ರೋಗಗಳಿಂದ ತಪ್ಪಿಸಿಕೊಳ್ಳವ ಕಾಲವಾಗಿದೆ ,ಇತ್ತ ಅಧಿಕಾರಿಗಳ ನಡೆಯಿಂದ ಸಾರ್ವಜನಿಕರು ಬೇಸತ್ತಿದ್ದಾರೆ ,ಕೂಡಲೆ ಅವರು ಕ್ರಮ ಜರುಗಿದಬೇಕಾಗಿ ಮೇಲಾಧಿಕಾರಿಗಳನ್ನು ಕೇಳಿಕೊಳ್ಳುತ್ತೆವೆಂದು ಶಿವಕುಮಾರು ತಿಳಿಸಿದರು.
