ಗೃಹಲಕ್ಷ್ಮೀ ಯೋಜನೆ ಕುರಿತು ಲೇಖನಗಳ ಆಹ್ವಾನ

H.Mallikarjun
H.Mallikarjun - Kalyanasiri
1 Min Read

ಗೃಹಲಕ್ಷ್ಮೀ ಯೋಜನೆ ಕುರಿತು ಲೇಖನಗಳ ಆಹ್ವಾನ

ಜಾಹೀರಾತು

Call for articles on the Gruha Lakshmi scheme

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಡಾ.ವೆಂಕಟೇಶ ಬಾಬು ಮಾಹಿತಿ

ಪ್ರಥಮ, ದ್ವಿತೀಯ, ತೃತೀಯ ಲೇಖನಗಳಿಗೆ ಬಹುಮಾನ

ಗಂಗಾವತಿ : ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಯಶೋಗಾಥೆಗಳು, ಯೋಜನೆಯಿಂದ ಮಹಿಳೆಯರ ಜೀವನದಲ್ಲಿ ಉಂಟಾದ ಸಕಾರಾತ್ಮಕ ಬದಲಾವಣೆಗಳು ಹಾಗೂ ಸಾಮಾಜಿಕ- ಆರ್ಥಿಕ ಪರಿಣಾಮಗಳನ್ನು ದಾಖಲಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಾದ ಡಾ.ವೆಂಕಟೇಶ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯದಲ್ಲಿ ಜಾರಿ ಮಾಡಿ ಮೂರು ವರ್ಷಗಳು ಆಗುತ್ತಿದ್ದು, ಪ್ರತಿ ವರ್ಷ ಅಂದಾಜು 28 ಸಾವಿರ ಕೋಟಿಯಷ್ಟು ಹಣ ಹಾಕಲಾಗುತ್ತಿದೆ. ಮನೆ ಯಜಮಾನಿಯರಿಗೆ ಮಾಸಿಕ 2000 ರೂಪಾಯಿಯಂತೆ 31 ಕಂತುಗಳಲ್ಲಿ 62000 ರೂ. ಹಣ ವರ್ಗಾಯಿಸಲಾಗಿದೆ. ಈ ಯೋಜನೆಯಿಂದ ಸಮಾಜದಲ್ಲಿ ಆಗುತ್ತಿರುವ ಸಕರಾತ್ಮಕ ಬದಲಾವಣೆಗಳ ಕುರಿತು ಸಾರ್ವಜನಿಕರು. ವಿದ್ಯಾರ್ಥಿಗಳು, ಶಿಕ್ಷಕರು, ಲೇಖಕರು, ಬರಹಗಾರರು ಹಾಗೂ ಸಾರ್ವಜನಿಕರಿಂದ ತಮ್ಮ ಅನುಭವಗಳು, ಅಭಿಪ್ರಾಯಗಳು ಮತ್ತು ಯಶೋಗಾಥೆಗಳನ್ನು 1200 ಪದಗಳ ಮಿತಿಯಲ್ಲಿ ಲೇಖನ ರೂಪದಲ್ಲಿ ಸಲ್ಲಿಸಬಹುದಾಗಿದೆ.
ಆಸಕ್ತರು ತಮ್ಮ ಲೇಖನಗಳನ್ನು ಆಗಸ್ಟ್ 25 ರೊಳಗಾಗಿ ಇಮೇಲ್ ಐಡಿ kgsiagangavathitq@gmail.com ಕಳುಹಿಸಬೇಕು. ಆಯ್ಕೆಯಾಗುವ ಲೇಖನಗಳಿಗೆ ಪ್ರಥಮ ಬಹುಮಾನ 5,000/-, ದ್ವಿತೀಯ ಬಹುಮಾನ 3,000/-, ತೃತೀಯ ಬಹುಮಾನ 2,000 ರೂ. ಇರುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 96111 11343 ಗೆ ಸಂಪರ್ಕಿಸಬಹುದು.
ವಿಜೇತರಿಗೆ ಗ್ಯಾರಂಟಿ ಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಗವುದು
ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article