ಅರಣ್ಯದ ಮೇಲೆ ಮನುಷ್ಯನ ಹಸ್ತಕ್ಷೇಪ ಮಾಡಿದಷ್ಟು ಪರಿಸರಕ್ಕೆ ಹಾನಿಕಾರಕ ಡಿಸಿ ಎಫ್ ಭಾಸ್ಕರ್

ಅರಣ್ಯದ ಮೇಲೆ ಮನುಷ್ಯನ ಹಸ್ತಕ್ಷೇಪ ಮಾಡಿದಷ್ಟ ಪರಿಸರಕ್ಕೆ ಹಾನಿಕಾರಕ ಡಿಸಿ ಎಫ್ ಭಾಸ್ಕರ್ .
ವರದಿ : ಬಂಗಾರಪ್ಪ .ಸಿ.
ಹನೂರು : ನಮ್ಮ ಇಲಾಖೆಯು ಹಲವಾರು ಸವಾಲುಗಳ ಜೊತೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಜವಾಬ್ಧಾರಿ ನಮ್ಮ ಮೇಲಿದೆ ಅದರ ಮುಂದಿನ ಕಾರ್ಯವು ಮಾದ್ಯಮದವರ ಕಾರ್ಯವು ಪ್ರಮುಖವಾಗಿದೆ ಎಂದು
ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ರವರು ತಿಳಿಸಿದರು.

ಹನೂರು ಪಟ್ಟಣದ ಲ್ಯಾನ್ ಸೊಸೈಟಿಯಲ್ಲಿ ಮಲೆ ಮಹದೇಶ್ವರ ವನ್ಯ ಜೀವಿಧಾಮದಿಂದ ಅಯೋಜಿಸಿದ ಪತ್ರಕರ್ತರ ಕಾರ್ಯಗಾರದಲ್ಲಿ ಮಾತನಾಡಿದ ಅವರು
ಮಲೆ ಮಹದೇಶ್ವರ ವನ್ಯಜೀವಿಧಾಮವು ಜನವಸತಿ ಪ್ರದೇಶವನ್ನು ಒಳಗೊಂಡ ವನ್ಯಜೀವಿಧಾಮವಾಗಿದೆ. ಜೊತೆಗೆ, ಅಂತಾರಾಜ್ಯ ಗಡಿಯನ್ನು ಹಂಚಿಕೊಂಡಿದೆ. ಸುಮಾರು 18 ಗ್ರಾಮಗಳಿಂದ ಸೇರಿದ ದಟ್ಟಾರಣ್ಯದಲ್ಲಿದೆ ಕಳೆದ ಹಲವು ತಿಂಗಳ ಚರ್ಚೆಯ ನಂತರ ಜಿಲ್ಲಾ ವರದಿಗಾರರು ಹಾಗೂ ಹನೂರು ತಾಲೂಕಿನ ವರದಿಗಾರರು ಸಹಯೋಗದಲ್ಲಿ ಕಾರ್ಯಗಾರ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ , ನಾವು ಅಧಿಕಾರ ವಹಿಸಿಕೊಂಡ ಸಮಯದಲ್ಲಿ ರಾಷ್ಟ್ರೀಯ ಪ್ರಾಣಿ ಹುಲಿಗಳ ಮಾರಣಹೋಮವು ನಡೆದು ಹೋಗಿತ್ತು . ನಂತರ ಚಿರತೆಗಳಿಂದ ಮಾದಪ್ಪನ ಭಕ್ತರನ್ನು ದಾಳಿ ಮಾಡಿದ ರೀತಿಯಲ್ಲಿ ೭೬ ಕಿಲೊ ಗಡಿ ಪ್ರದೇಶದಲ್ಲಿ ಕೂಡಿರುವ ಪ್ರದೇಶವಾಗಿದೆ, ಈ ಪದರದೇಶವು ಹೆಚ್ಗು ಸೂಕ್ಷ್ಮವಾಗಿರುವ ಪ್ರದೇಶವಾಗಿದೆ ,ಪ್ರಾಣಿಗಳು ಕಾಡನ್ನೆ ಹೆಚ್ಚಾಗಿ ಆಶ್ರಯಿಸಿವೆ . ನಮ್ಮಲ್ಲಿ ಹುಲಿ ಸಂರಕ್ಷಿತ ಪ್ರದೇಶ ಮಾಡಲು ಅವಕಾಶ ಇರಿವುದರಿಂದ ಬಾರಿ ಪ್ರಮಾಣದಲ್ಲಿ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಯಿತು . ಇತ್ತಿಚಿನ ದಿನಗಳಲ್ಲಿ
ಪ್ರಾಣಿಗಳ ಸಂಖ್ಯೆಯು ಜಾಸ್ತಿಯಾಗಿದೆ ಎನ್ನಬಹುದು , ಒಟ್ಟಾರೆ ಪ್ರಾಣಿಗಳನ್ನು ನೋಡುವುದಾದರೆ ಕಾಡಿನಲ್ಲಿ ಯಾವ ಪ್ರಾಣಿಯು ಹೆಚ್ಚು ಪ್ರಭಾವ ವಿರುತ್ತದೊ ಅದರ ಸಂತತಿಯೆ ಮುಂದುವರಿಯುತ್ತದೆ , ಮನುಷ್ಯನಿಗೆ ತನ್ನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಸರ್ಕಾರವಿದೆ , ಆದರೆ ಕಾಡಿನೊಳಗೆ ಪ್ರಾಣಿಗಳಗೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಪ್ರಾಣಿಗಳ ಸಂತತಿ ಹೆಚ್ಚಿಸಲು ಅವುಗಳ ಮೇಲೆ ನೀಗವಹಿಸಲು ಸಾರ್ವಜನಿಕರ ಪಾತ್ರ ಮತ್ತು ವರದಿಗಾರರ ಪಾತ್ರ ಬಹುಮುಖ್ಯವಾಗಿದೆ, ಸರ್ಕಾರದ ಎಲ್ಲಾ ಇಲಾಖೆಯು ಸಾರ್ವಜನುಕರಿಗೆ ಸಹಾಯ ಮಾಡುತ್ತದೆ ನಮ್ಮ ಇಲಾಖೆಯು ಯಾವುದೆ ರೀತಿಯಲ್ಲಿ ಸಹಾಯವಿರುವುದಿಲ್ಲ ಎಂದರು,
ವನ್ಯಜೀವಿ ತಜ್ಞರಾದ ಸಂಜಯ್ ಗುಬ್ಬಿ ಮಾತನಾಡಿ ಮೇಕೆದಾಟು ಯೋಜನೆ ಸ್ಥಳ ಬದಲಾಗಬೇಕು ಇಲ್ಲದಿದ್ದರೇ 12 ಸಾವಿರ ಚ ಅಡಿಯಷ್ಟು ಕಾಡು ಮುಳುಗಲಿದೆ, ವನ್ಯಜೀವಿಧಾಮವು ಪತ್ರಕರ್ತರಿಗೆ ಏರ್ಪಡಿಸಿದ್ದ ವನ್ಯಜೀವಿ ಸಂರಕ್ಷಣೆ ಮತ್ತು ವನ್ಯ ಪ್ರಾಣಿಗಳ ನಡವಳಿಕೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮೇಕೆದಾಟು ಯೋಜನೆ ಈಗಿರುವ ಪ್ರದೇಶದಲ್ಲೇ ಆದರೇ 5-6 ಲಕ್ಷ ಮರಗಳು ನಾಶವಾಗಲಿದೆ. ಮೇಕೆದಾಟು ಯೋಜನೆಯನ್ನು ಶಿವನಸಮುದ್ರದಲ್ಲಿ ಮಾಡಿದರೆ ಪರಿಸರ ಉಳಿಯಲಿದೆ ಎಂದರು.
ಈಗಾಗಲೇ ರಾಮನಗರ, ಮಳವಳ್ಳಿ ಭಾಗದಲ್ಲಿ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಿದೆ, ಆಣೆಕಟ್ಟು ಕಟ್ಟಿದರೇ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗಲಿದೆ, ಪ್ರಾಣಿಗಳ ಆವಾಸ ಸ್ಥಾನ ಬದಲಾಗಿ ಸಮಸ್ಯೆ ಸೃಷ್ಟಿಯಾಗಲಿದೆ ,
ಪರಿಸರ ವ್ಯವಸ್ಥೆ ಕ್ಲಿಷ್ಟಕರ ವ್ಯವಸ್ಥೆ ಎಷ್ಟೇ ವರ್ಷಗಳಾದರೂ ಅರಿಯಲು ಸಾಧ್ಯವಿಲ್ಲ. ಆಹಾರದ ಒಂದು ಕೊಂಡಿ ಕಳಚಿದರೂ ಜೈವಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ,
ಅರಣ್ಯ ಮತ್ತು ಪರಿಸರ ವ್ಯವಸ್ಥೆ ಮೇಲೆ ಮಾನವನ ಹಸ್ತಕ್ಷೇಪ ನಿಲ್ಲಿಸಿದಷ್ಟೂ ಪರಿಸರ ವ್ಯವಸ್ಥೆ ಸುಸ್ಥಿರವಾಗಿರಲಿದೆ, ಅರಣ್ಯೀಕರಣದ ಹೆಸರಿನಲ್ಲಿ ನಾವು ಮಾಡುವ ಕಾರ್ಯ ವಿಧಾನ ನಕಾರಾತ್ಮಕವಾಗಿ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ
ದಿನದಿಂದ ದಿನಕ್ಕೆ ಚಿರತೆ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು ನೈಸರ್ಗಿಕ ಬೇಟೆ ಪ್ರಾಣಿಗಳು ಕಡಿಮೆಯಾದ ಹಿನ್ನೆಲೆ ಜಾನುವಾರುಗಳ ಮೇಲೆ ಚಿರತೆ ದಾಳಿ ಹೆಚ್ಚಾಗಿದೆ. ಚಿರತೆಗಳನ್ನು ಸೆರೆ ಹಿಡಿದು ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಕ್ಕೆ ಬಿಟ್ಟಿರುವುದು ಕೂಡ ಪ್ರಮುಖ ಕಾರಣ ಎಂದರು.
ಕಾವೇರಿ ಉಪವಿಭಾಗದ ಸಂರಕ್ಷಣಾ ಅಧಿಕಾರಿ ಗಳಾದ ಜಗನ್ನಾಥ್ ಮಾತನಾಡಿ ಪ್ರಾಣಿಗಳ ಬಗ್ಗೆ ಮಾತನಾಡುವ ಪರಿಸರವಾದಿಗಳು ವಿರಳವಾಗಿದ್ದಾರೆ ಅಂತಹ ವರಲ್ಲಿ ನಮ್ಮಲ್ಲಿರುವ ಹಲವಾರು ಜನರು ಪ್ರಾಣಿಗಳ ಸಂರಕ್ಷಣಾ ಮಾಡುವ ಕೆಲಸ ಮಾಡುತ್ತೆವಿ, ಅದೇ ರೀತಿಯಲ್ಲಿ ಕಾವೇರಿಯ ನದಿ ತೀರದ ಮೇಲೆ ಮಣ್ಣಿನಲ್ಲಿ ಉತ್ತಮ ಗುಣವಿದೆ ಅದು ನದಿಗೆ ಕೊಚ್ಚಿ ಹೋಗುತ್ತದೆ,ನಾನು ಅದನ್ನು ಮನಗಂಡು,ಅಧಿಕಾರಿಗಳಿಗೆ ತಿಳಿ ಹೆಳುವ ಕೆಲಸ ಮಾಡಿದ್ದೆನೆ . ಪ್ರಪಂಚದಲ್ಲಿ ಅತಿ ಹೆಚ್ಚು ದಾಳಿ ನಡೆದಿರುವುದು ಮಣ್ಣಿಗೆ ,ನೀರಿಗೆ ,ಹಾಗೂ ಗಾಳಿಗಾಗಿ ನಡೆದಿದೆ. ಮುಂದಿನ ಪೀಳಿಗೆಗೆ ಭೂಮಿಯ ಫಲವತ್ತಾದ ಅಂಶಗಳನ್ನು ಕೊಂಡೊಯ್ಯಲು ಸಹಾಯ ಮಾಡಬೇಕು,ಇಂತಹ ಹಲವಾರು ವಿಷಯಗಳನ್ನು ವಾಸ್ತವವಾಗಿ ಜನರ ಮುಂದಿಟ್ಟು ತಿಳಿ ಹೇಳೋಣ ನಂತರ ಪ್ರಾಣಿ ಮತ್ತು ವನ್ಯ ಸಂರಕ್ಷಣಾ ಕಾರ್ಯ ಮಾಡಲು ನಾವು ನೀವು ಸೇರಿದಂತೆ ಎಲ್ಲಾರು ಸಹಕರಿಸೋಣ ವೆಂದರು.
ಇದೇ ಸಂದರ್ಭದಲ್ಲಿ ಅಧಿಕಾರಿಗಳಾದ ಮಹೇಶ್ , ಗೀರಿಶ್ ,ಸೇರಿದಂತೆ ಜಿಲ್ಲೆಯ ಅನೇಕ ಪತ್ರಕರ್ತರು ಹಾಜರಿದ್ದರು .

