Breaking News

ಪೌರ ಕಾರ್ಮಿಕರ ಮಹಾ ಸಂಘದಿಂದಪೌರಕಾರ್ಮಿಕ ದಿನ ದಿನಾಚರಣೆ

Civil Workers’ Day celebration by the Civil Workers Maha Sangh


ಬೆಂಗಳೂರು; ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಮಹಾ ಸಂಘದಿಂದ ನಗರದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ “ಪೌರ ಕಾರ್ಮಿಕರ ದಿನ” ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪೌರಕಾರ್ಮಿಕರು, ಮೇಲ್ವಿಚಾರಕರು, ಚಾಲಕರು, ಕ್ಲೀನರ್‌ ಗಳು , ಲೋಡ್‌ ಮಾಡುವ ಸಿಬ್ಬಂದಿಯೊಂದಿಗೆ ಮಹಾಸಂಘದ ಅಧ್ಯಕ್ಷ ಮೈಸೂರು ನಾರಾಯಣ ಅವರ ೭೦ ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ರಿಜ್ಞಾನ್ ಅರ್ಷದ್, ಸರ್ಕಾರದ ಗ್ಯಾರೆಂಟಿ ಯೋಜನೆಗಳಿಂದ ಶ್ರಮಿಕ ವರ್ಗಗಗಳಿಗೆ ಅನುಕೂಲವಾಗುತ್ತಿದೆ. ಬಿಜೆಪಿಯವರು ಯಾರಪ್ಪನ ಹಣದಿಂದ ಉಚಿತ ಯೋಜನೆಗಳನ್ನು ಜಾರಿ ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಅಂಬಾನಿ, ಅದಾನಿಗೆ ಸೇರಿದ ಲಕ್ಷಾಂತರ ಕೋಟಿ ರೂ ಸಾಲ ಮನ್ನಾ ಮಾಡಿದ್ದು ಯಾರಪ್ಪನ ಹಣದಿಂದ ಎಂದು ನಾವು ಮರು ಪ್ರಶ್ನಿಸುತ್ತಿದ್ದೇವೆ. ಸಮಾಜದಲ್ಲಿ ಮೇಲು – ಕೀಳು ಎಂಬ ಒಡಕು ಸೃಷ್ಟಿಸುತ್ತಿರುವವರಿಗೆ ಸಂವಿಧಾನ ಉತ್ತರ ನೀಡಿದ್ದು, ಈ ದೇಶದಲ್ಲಿ ಪ್ರತಿಯೊಬ್ಬರೂ ಸಮಾನರು ಎಂದು ಹೇಳಿದರು.

ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಪೌರಕಾರ್ಮಿಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ನಮ್ಮದು ತಾಯಿ ಹೃದಯ ಇರುವ ಸರ್ಕಾರವಾಗಿದ್ದು, ಮಹಿಳೆಯರಿಗೆ ಹೆಚ್ಚಿನ ಶಕ್ತಿ ನೀಡಿದೆ. ಮಹಿಳೆಯರ ಖಾತೆಗೆ ಹಣ, ಉಚಿತ ವಿದ್ಯುತ್‌, ಆಹಾರ ಧಾನ್ಯಗಳನ್ನು ಒದಗಿಸಿ ಶ್ರಮಿಕ ವರ್ಗವನ್ನು ಸಬಲೀಕರಣಗೊಳಿಸುತ್ತಿದೆ. ಮನುಷ್ಯ ಮನುಷ್ಯನಾಗಿ ಘನತೆ, ಗೌರವದಿಂದ ಬದಕಲು ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ರಿಜ್ಞಾನ್‌ ಅರ್ಷದ್‌ ಹೇಳಿದರು.

ಈ ಕಾರ್ಯಕ್ರಮದಲ್ಲಿ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಜನೇಯುಲು, ಕಾರ್ಯಧ್ಯಕ್ಷ ಹೆಬ್ಬಾಳ ನಾಗರಾಜ, ಬೆಂಗಳೂರು ನಗರ ಅಧ್ಯಕ್ಷ ಸುರೇಶ್ ಬಾಬು, ಉಪಾಧ್ಯಕ್ಷ ಎಂ.ಜಿ. ಶ್ರೀನಿವಾಸ ಡಿ ಸುಧಾಕರ ಹಾಗೂ ಸಂಘದ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

About Mallikarjun

Check Also

ಅಶೋಕಸ್ವಾಮಿ ಹೇರೂರಭೇಟಿ:ಕಾಂಗ್ರೆಸ್ಸಿಗರಿಂದಮತಯಾಚನೆ.

ಗಂಗಾವತಿ:ರಾಜ್ಯ ವಾಣಿಜೋಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.