Awareness about tuberculosis is essential: Sharanappa Bajentri

ಕ್ಷಯ ರೋಗ ಕುರಿತು ಜಾಗೃತಿ ಅಗತ್ಯ : ಶರಣಪ್ಪ ಬಜೇಂತ್ರಿ
ಗಂಗಾವತಿ,ಆಗಸ್ಟ್ 10:ಕ್ಷಯ ರೋಗ ಒಬ್ಬರಿಂದ ಒಬ್ಬರಿಗೆ ಬರುತ್ತದೆ. ಇದರ ಕುರಿತು ಸಮುದಾಯದಲ್ಲಿ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಗಂಗಾವತಿಯ ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಶರಣಪ್ಪ ಬಜೇಂತ್ರಿ ತಿಳಿಸಿದರು.

ನಗರದ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜುಲ್ಲಿ ಸೋಮವಾರ ದಂಡು ಐಕ್ಯೂಎಸಿ ಮತ್ತು
ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಕೊಪ್ಪಳ, ಕರ್ನಾಟಕ ಏಡ್ಸ್ ಪ್ರೈವೇನ್ಸ್ ಸೊಸೈಟಿ, ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೊಬಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ -2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಅರೋಗ್ಯ ಶಿಕ್ಷಣ ಮಾಹಿತಿ ನೀಡಬೇಕು. ಕ್ಷಯ ರೋಗಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಇದೆ. ಇದನ್ನು ಉಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷಯ ರೋಗ ಅರೋಗ್ಯ ಸಂದರ್ಶಕ ಮಲ್ಲಿಕಾರ್ಜುನ ಅವರು ಮಾತನಾಡುತ್ತ ಕ್ಷಯ ರೋಗವು (ಟಿಬಿ) ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುವ ಗಂಭೀರ ಸೋಂಕು. ಇದು ಹೆಚ್ಚಾಗಿ ಶ್ವಾಸ ಕೋಶವನ್ನು ಬಾಧಿಸುತ್ತದೆ. ಸೋಂಕಿತರು ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಇತರರಿಗೆ ಹರಡುತ್ತದೆ. ಸರಿಯಾದ ಔಷಧೋಪಚಾರದಿಂದ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಶಿವಾನಂದ ಅವರು ಮಾತನಾಡುತ್ತ ಕ್ಷಯ ರೋಗದ ಲಕ್ಷಣಗಳು
ಮೂರು ವಾರಗಳಿಗೂ ಹೆಚ್ಚು ಕಾಲ ನಿರಂತರ ಕೆಮ್ಮು
ಕೆಮ್ಮುವಾಗ ರಕ್ತ ಅಥವಾ ಕಫ ಬೀಳುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಗೋಪಾಲ ಅವರು ಮಾತನಾಡುತ್ತ ಎಲ್ಲರೂ ಸೇರಿ ಕ್ಷಯ ರೋಗವನ್ನು ತಡೆಘಟ್ಟಬಹುದು.
ಎದೆ ನೋವು ಮತ್ತು ಉಸಿರಾಟದ ತೊಂದರೆ
ತೂಕ ಮತ್ತು ಹಸಿವು ಕಡಿಮೆಯಾಗುವುದು
ಸಂಜೆ ವೇಳೆ ಜ್ವರ ಹಾಗೂ ರಾತ್ರಿ ವಿಪರೀತ ಬೆವರವುದು.
ರೋಗಿ ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಗಾಳಿಯಲ್ಲಿರುವ ಕಣಗಳ ಮೂಲಕ ಹರಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಹುಸೇನ್ ಬಾಷಾ ಅವರು ಮಾತನಾಡುತ್ತ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೋಂಕು ತಗಲುವ ಸಂಭವ ಹೆಚ್ಚು.
ಮಧುಮೇಹ ಅಥವಾ ಹೆಚ್.ಐ.ವಿ ಇರುವವರ ಮೇಲೆ ಇದು ಬೇಗ ಪ್ರಭಾವ ಬೀರುತ್ತದೆ.
ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆ
6 ತಿಂಗಳ ಅವಧಿಯ ನಿರ್ದಿಷ್ಟ ಪ್ರತಿಜೀವಕ ಔಷಧಿಗಳ ಮೂಲಕ ಇದನ್ನು ಗುಣಪಡಿಸಬಹುದು.
ರೋಗ ಲಕ್ಷಣ ಕಂಡುಬಂದ ಕೂಡಲೇ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಶಿವರಾಜ್ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು.
ಐಕ್ಯೂ ಎ ಸಿ ಸಂಚಾಲಕರಾದ
ಡಾ ಮಂಜುನಾಥ್ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅರೋಗ್ಯ ಇಲಾಖೆಯ ಶ್ರೀನಿವಾಸಲು, ಸಂತೋಷ್
ಭಾಗ್ಯಶ್ರೀ ಕಾಲೇಜಿನ ಉಪನ್ಯಾಸಕರಾದ ಡಾ. ನರಸಿಂಹ, ಭೂಮಿಕಾ, ಡಾ. ಗಿರೀಶ್ ಕುಮಾರ, ಡಾ. ಸೃಷ್ಟಿ, ಸಲೀಮ್ ಹಾಗೂ ಇತರರು ಉಪಸ್ಥಿತರಿದ್ದರು.
