
Job fairs are helpful in getting a job.

ಐಶ್ವರ್ಯಾ ವಿಜ್ಞಾನ ಎಜುಕೇಶನಲ್ ಸೊಸೈಟಿಯ ಸಿದ್ದಪ್ಪ ಹಡಗಲಿ ಮತ್ತು ಉದಯರಾಜ್ ಅಭಿಮತ
ವಡ್ಡರಹಟ್ಟಿ ಉದ್ಯೋಗ ಮೇಳದಲ್ಲಿ 46 ಜನರ ನೋಂದಣಿ
ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಪಂ ಆವರಣದಲ್ಲಿ ಕೇದ್ರ ಮತ್ತು ರಾಜ್ಯ ಸರ್ಕಾರ, ಜಿ.ಪಂ.ಕೊಪ್ಪಳ, ತಾ.ಪಂ. ಗಂಗಾವತಿ, ವಡ್ಡರಹಟ್ಟಿ ಗ್ರಾ.ಪಂ. ಹಾಗೂ ಐಶ್ವರ್ಯಾ ವಿಜ್ಞಾನ ಎಜುಕೇಶನಲ್ ಸೊಸೈಟಿ ಅವರ ಸಹಯೋಗದಲ್ಲಿ ಯುವ-ಯುವತಿಯರಿಗೆ ಉದ್ಯೋಗ ಮೇಳ ಶುಕ್ರವಾರ ನಡೆಯಿತು.

ಐಶ್ವರ್ಯಾ ವಿಜ್ಞಾನ ಎಜುಕೇಶನಲ್ ಸೊಸೈಟಿಯ ಸಿದ್ದಪ್ಪ ಹಡಗಲಿ ಮತ್ತು ಉದಯರಾಜ್
ಅವರು ಮಾತಮಾಡಿ, ದೀನ್ ದಯಾಳ್ ಉಪಾಧ್ಯಯ ಗ್ರಾಮೀಣ ಕೌಶಲ ಯೋಜನೆಯಡಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಬದುಕು ಕಟ್ಟಿಕೊಳ್ಳಲು ಉದ್ಯೋಗ ಮೇಳಗಳು ಸಹಕಾರಿಯಾಗಿವೆ. ಯುವಕ-ಯುವತಿಯರು ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕಂತೆ ಖಾಸಗಿ ವಲಯದಲ್ಲಿ ನೌಕರಿ ಪಡೆದುಕೊಳ್ಳಬಹುದು. ಅದರಂತ ಅಗತ್ಯ ಕೌಶಲ್ಯಗಳನ್ನು ಹೊಂದಿರಬೇಕು. ಖಾಸಗಿ ಕಂಪನಿಗಳಲ್ಲಿ ಹುದ್ದೆಗಳ ನೇಮಕ ಮಾಡಿಕೊಳ್ಳುವ ವಿಧಾನಗಳು, ಅಗತ್ಯ ಕೌಶಲ್ಯಗಳ, ಕಂಪನಿಗಳ ಸಂದರ್ಶನ ಎದುರಿಸುವ ಕೌಶಲ್ಯಗಳನ್ನು ತರಬೇತಿಯಲ್ಲಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಗರ ಪ್ರದೇಶದಲ್ಲಿ ಕೆಲಸ ಮಾಡಲು ಹತ್ತಾರು ಅವಕಾಶಗಳು ಇರುತ್ತವೆ. ಇಂಥ ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಅಸಿಸ್ಟೆಂಟ್ ಹಾಗೂ ಬ್ಯಾಂಕ್ ಆಫೀಸ್ , ಅಸಿಸ್ಟೆಂಟ್ ಹಣಕಾಸು ಸೇವೆಗಳ ಹುದ್ದೆಗಳಿಗೆ ಉಚಿತ ಊಟ, ವೇತನ ಸಹಿತ ವಸತಿ ಸೌಲಭ್ಯವಿದ್ದು, ಮೇಳದಲ್ಲಿ ನೋಂದಾಯಿಸಿಕೊಂಡವರು ತರಬೇತಿಗೆ ಆಗಮಿಸುವಂತೆ ತಿಳಿಸಿದರು.
ಗ್ರಾಪಂ ಪಿಡಿಓ ಸುರೇಶ ಚಲವಾದಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದವರಿಗೆ ಸ್ಥಳೀಯವಾಗಿಯೇ ಉದ್ಯೋಗ ಮೇಳ ಆಯೋಜಿಸಿದ್ದು, ಅರ್ಹ ಅಭ್ಯರ್ಥಿಗಳು ದೀನ್ ದಯಾಳ್ ಉಪಾಧ್ಯಯ ಗ್ರಾಮೀಣ ಕೌಶಲ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು ಎಂದರು.
ವಡ್ಡರಹಟ್ಟಿ ಗ್ರಾ.ಪಂ. ವ್ಯಾಪ್ತಿಯ 50 ಕ್ಕೂ ಹೆಚ್ಚು ಅಭ್ಯರ್ಥಿಗಳು ಉದ್ಯೋಗ ಮೇಳಕ್ಕೆ ಆಗಮಿಸಿದ್ದರು. 46 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಏ. 5 ರಂದು ವಡ್ಡರಹಟ್ಟಿ ಗ್ರಾಪಂ ಕಾರ್ಯಾಲಯದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ.
ಈ ವೇಳೆ, ಗ್ರಾಪಂ ಉಪಾಧ್ಯಕ್ಷರಾದ ಟಿ.ಗೌಸ್ ಸಾಬ್,
ಗ್ರಾಪಂ ಸದಸ್ಯರಾದ ಮೇರಾಜ್ ದಳಪತಿ, ಫೀರ್ ಮಹ್ಮದ್ ಹೊನ್ನುರಬೀ, ಶಾಂತಮ್ಮ, ಸಂಗಪ್ಪ, ದುರಗೇಶ, ಕನಕರಾಯ, ಗ್ರಾಪಂ ಕಾರ್ಯದರ್ಶಿ ಈಶಪ್ಪ, ಗ್ರಾಪಂ ಸಿಬ್ಬಂದಿಗಳು, ಎನ್ ಆರ್ ಎಲ್ ಎಂ- ಸಂಜೀವಿನಿ ಯೋಜನೆ ಸ್ವಸಹಾಯ ಸಂಘದ ಮಹಿಳೆಯರು ಇದ್ದರು.




