Humane driver operators,,,

ಕೊಪ್ಪಳ : ಇಂದಿನ ದಿನ ಮಾನಗಳಲ್ಲಿ ಏಷ್ಟೋ ಜನ ತಮ್ಮ ಮಕ್ಕಳ ಭವಿಷ್ಯದ ಕುರಿತು ಚಿಂತನೆ ಮಾಡಿದಿರುವ ಈ ಕಾಲ ಘಟ್ಟದಲ್ಲಿ ಇಲ್ಲೋಬ್ಬ ಸಾರಿಗೆ ನೌಕರರು ಮಕ್ಕಳ ಭವಿಷ್ಯದ ಕುರಿತು ಕಾಳಜಿ ವಹಿಸಿದ್ದು ಗಮನಾರ್ಹವಾಗಿದೆ.
ಹೌದು,, ಇದು ಕೊಪ್ಪಳ ಜಿಲ್ಲೆ ಕುಕನೂರು ಸಾರಿಗೆ ಘಟಕಕ್ಕೆ ಸೇರಿದ ಬಸ್ ಎಂದಿನಂತೆ ಬೆಳಗ್ಗೆ ಕುಕನೂರಿನಿಂದ ನಿಂಗಾಪೂರ, ತಳಕಲ್ ಮಾರ್ಗವಾಗಿ ಕೋಮಲಾಪೂರಕ್ಕೆ ಸಂಚರಿಸುವ ಬಸ್ ಮರಳಿ ಕುಕನೂರಿಗೆ ಬರುವ ಮಾರ್ಗ ಮಧ್ಯದ ತಳಬಾಳ ಸಮೀಪದ ರೈಲ್ವೆ ಗೇಟ್ ನಿಂದ ಮುಂದೆ ತಾಂತ್ರಿಕ ದೋಷದಿಂದ ದುರಸ್ಥಿಗೊಂಡಿತು.
ಈ ಬಸ್ ನಲ್ಲಿ ಪ್ರತಿ ನಿತ್ಯ ನೂರಾರು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುತ್ತಿದ್ದು ಇಂದು ಸಹ ವಿದ್ಯಾರ್ಥಿಗಳು ಪರೀಕ್ಷೆಗೆಂದು ಸಿದ್ದತೆಗೊಂಡು ಹೋಗುವ ಮಾರ್ಗ ಮಧ್ಯೆ ತಾಂತ್ರಿಕ ದೋಷದಿಂದ ಮುಂದೆ ಸಾಗದೇ ನಿಂತಿದ್ದರಿಂದ ವಿದ್ಯಾರ್ಥಿಗಳು ಫಜೀತಿಗೆ ಸಿಲುಕುವಂತಾಯಿತು.
ಇದನ್ನು ಮನಗಂಡ ಚಾಲಕ ಚನ್ನವೀರಯ್ಯ ಪೂಜಾರ ನಿರ್ವಾಹಕ ಶರಣಪ್ಪ ಚವ್ಹಾಣ ವಿದ್ಯಾರ್ಥಿಗಳ ಅಳಲನ್ನು ಆಲಿಸಿ ಶಾಲೆಯ ಪರೀಕ್ಷೆಗೆ ಕಳಿಸಬೇಕೆಂದು ನಿರ್ಧರಿಸಿ ಸಮಯಕ್ಕೆ ಸರಿಯಾಗಿ ಖಾಸಗಿ ವಾಹನ ಒಂದನ್ನು ಕರೆಯಿಸಿ ತಮ್ಮ ಕರ್ತವ್ಯ ಮುಗಿದ ನಂತರದಲ್ಲಿ ವಾಹನದ ಬಾಡಿಗೆ ಹಣವನ್ನು ನೀಡುತ್ತೇವೆ ಎಂದು ತಿಳಿಸಿ, ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಲು ನೆರವಾದರು, ಇದರಿಂದ ಪ್ರಯಾಣಿಕರ ಹಾಗೂ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಮಾತುಗಳು ವ್ಯಕ್ತವಾಗಿ ಮಾನವೀಯತೆ ಮೆರೆದದನ್ನು ಸ್ಮರಿಸಿದರು.