Breaking News

ಸೀಳು ತುಟಿ, ಅಂಗ ಶಾಪವಲ್ಲ ಡಾ.ವಸ್ತ್ರದ್

Cleft lip, limb is not a curse Dr. Vastrad

ಜಾಹೀರಾತು
IMG 20240926 WA0255

ಗಂಗಾವತಿ:26 ಸೀಳುತುಟಿ ಮತ್ತು ಸೀಳು ಅಂಗಗಳು ಮಕ್ಕಳಿಗೆ ಒಂದು ಶಾಪವಲ್ಲ ಅದನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಬಹುದಾಗಿದೆ ಎಂದು ಡಾ.ರಾಜಶೇಖರ್ ವಸ್ತ್ರದ್ ಹೇಳಿದ್ದಾರೆ.

ನಗರದ ಗಂಗಾವತಿ ಉಪವಿಭಾಗ  ಆಸ್ಪತ್ರೆಯಲ್ಲಿ ಇಂಗಾ ಹೆಲ್ತ್ ಫೌಂಡೇಶನ್ ಮತ್ತು ಆರ್,ಬಿ.ಎಸ್.ಕೆ, ಆಪರೇಷನ್ ಸ್ಮೈಲ್ ಇಂಡಿಯಾ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸೀಳುತುಟಿ ಮತ್ತು ಸೀಳು ಅಂಗಗಳನ್ನು ಗುರುತಿಸುವ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೀಳು ತುಟಿಗೆ ಮಗು ಹುಟ್ಟಿದ 5 ತಿಂಗಳಿನಲ್ಲಿ ಚಿಕಿತ್ಸೆ ಕೊಡಿಸಿದರೆ ಮಗು ಎಲ್ಲರಂತೆ ಇರಬಹುದು. ಸಂಘ ಸಂಸ್ಥೆಗಳು ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸುವ ಮೂಲಕ ಉಚಿತ ಚಿಕಿತ್ಸಾ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಸೀಳು ತುಟಿ ಸೀಳು ಅಂಗಳ ಮತ್ತು ಎಲ್ಲಾ ತರಹದ ತಲೆ ಬುರುಡೆಯ ಜನ್ಮ ವಿರೂಪಗಳಿಗೆ ಹುಟ್ಟಿದ ಮಗುವಿನಿಂದ 18 ವರ್ಷದ ವಯಸ್ಸಿನವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಸೇವೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಚೇತನಾ,ಡಾ.ರಾಧಿಕಾ ಎ.ಜೆ.ಡಾ ಕೀರ್ತಿರಾಣಿ ಬಿ,ಡಾ.ರೇಖಾ ಕೆ,ಡಾ.ಶ್ರೀದೇವಿ ಕೆ,ಡಾ.ಕಾವ್ಯ ಬಿ,ಡಾ.ಸಂತೋಷ ಡಿ ,ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರು ಇದ್ದರು

About Mallikarjun

Check Also

whatsapp image 2025 11 15 at 6.04.03 pm

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ

ಮಕ್ಕಳ ದಿನಾಚರಣೆ ಅಂಗವಾಗಿ ವೇಷಭೂಷಣದಿಂದ ಗಮನ ಸೆಳೆದ ಸರ್ಕಾರಿ ಶಾಲೆ ಹೊಸಳ್ಳಿ Government School Hosalli attracts attention with …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.