Breaking News

ಪ್ರತಿಯೊಬ್ಬರು ಒಗ್ಗೂಡಿಕೊಂಡು ಸಮಾಜಮುನ್ನಡೆಸಬೇಕು-ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್

Everyone should unite and advance the society – Former Minister Pramod Madhwaraj

ಜಾಹೀರಾತು

ಗಂಗಾವತಿ: ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಕಂಡುಕೊಳ್ಳಬೇಕಾದರೆ ಪ್ರತಿಯೊಬ್ಬರು ಕೂಡ ಒಗ್ಗೂಡಿಕೊಂಡು ಸಮಾಜದ ಸೇವೆಯನ್ನು ಸಲ್ಲಿಸಲು ಮುನ್ನಡೆಯಬೇಕು ಎಂದು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಹೇಳಿದರು.

ನಗರದ ಖಾಸಾಗಿ ಹೋಟೆಲ್‌ನಲ್ಲಿ ಗಂಗಾಮತ ಸಮಾಜದ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಕೊಪ್ಪಳ ಜಿಲ್ಲಾ ಮಟ್ಟದ ಮುಖಂಡರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ರಾಮಾಯಣ, ಮಹಾಭಾರತ ಸೇರಿದಂತೆ ಬಸವಣ್ಣನ ಕಾಲದಿಂದಲೂ ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಸಮಾಜ ಎಂದರೇ ಗಂಗಾಮತ ಸಮಾಜವಾಗಿದೆ. ಇಷ್ಟೇಲ್ಲ ಐತಿಹಾಸಿಕ ಹಿನ್ನಲೆಯನ್ನು ಹೊಂದಿದ್ದರು ಸಹ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಇನ್ನೂ ಸಹ ಬದಲಾವಣೆಯನ್ನು ಕಂಡುಕೊAಡಿಲ್ಲ. ಬಡತನ, ನಿರುದ್ಯೋಗ, ಅನಕ್ಷರತೆ ಸಮಾಜವನ್ನು ಕಾಡುತ್ತಿವೆ. ರಾಜ್ಯದಲ್ಲಿ ಲಕ್ಷಾಂತರ ಜನ ಗಂಗಾಮತಸ್ಥರು ಇದ್ದಾರೆ. ಅವರನ್ನು ೩೭ ಒಳಪಂಗಡಗಳಿAದ ಗುರುತಿಸಿ ಕರೆಯಲಾಗುತ್ತಿದೆ. ಹಿಂದುಳಿದ ಸಮಾಜ ಎಂದು ಕರೆಸಿಕೊಂಡಿರುವ ಗಂಗಾಮತ ಸಮಾಜಕ್ಕೆ ಎಸ್ಟಿ ಮೀಸಲಾತಿಯನ್ನು ನೀಡಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಇನ್ನೂ ಸಹ ಮೀಸಲಾತಿ ದೊರೆಯುತ್ತಿಲ್ಲ. ಕಾರಣ ರಾಜ್ಯದಲ್ಲಿ, ಕೇಂದ್ರದಲ್ಲಿ ಬಲವಾಗಿ ಮೀಸಲಾತಿ ಕೇಳುವ ರಾಜಕೀಯ ಶಕ್ತಿ ನಮ್ಮಲ್ಲಿ ಇಲ್ಲ. ರಾಜ್ಯದಲ್ಲಿ ಇಬ್ಬರು ಶಾಸಕರು ಇದ್ದರೆ ಕೇಂದ್ರದಲ್ಲಿ ಒಬ್ಬರು ಕೂಡ ಇಲ್ಲ. ಚುನಾವಣೆಯಲ್ಲಿ ನಿರ್ಣಾಯಕ ಮತಗಳಾಗಿರುವ ನಾವುಗಳು ಇನ್ನೊಬ್ಬರಿಗೆ ಮತ ನೀಡುತ್ತಿದ್ದೆವೆ. ನಮ್ಮ ಸಮಾಜದವರನ್ನು ಗುರುತಿಸಿ, ಮತ ನೀಡಿ ಗೆಲ್ಲಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ರಾಜ್ಯದಲ್ಲಿ, ಕೇಂದ್ರದಲ್ಲಿ ನಮ್ಮ ಸಮಾಜದ ನಾಯಕರು ಇದ್ದರೆ ಮೀಸಲಾತಿಯ ನಮ್ಮ ಕೂಗು ಗಟ್ಟಿಯಾಗುತ್ತದೆ. ಸರಕಾರಕ್ಕೆ ನಮ್ಮ ಸಮಾಜದಿಂದ ಶಾಸಕರನ್ನು, ಸಚಿವರನ್ನು, ಸಂಸದರನ್ನು ನೀಡುವ ಕೊಡುಗೆ ಇಲ್ಲ. ಹಾಗಾಗಿ ಸರಕಾರದಿಂದ ನಮ್ಮ ಸಮಾಜಕ್ಕೆ ಮೀಸಲಾತಿಯ ಕೊಡುಗೆ ಇನ್ನೂ ದೊರೆಯುತ್ತಿಲ್ಲ. ನಾವೆಲ್ಲರೂ ಒಂದಾಗಬೇಕು. ಪಕ್ಷಾತೀತವಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು. ಮುಂದಿನ ಯುವ ಜನಾಂಗದ ದೃಷ್ಠಿಯಲ್ಲಿ ಹಿಟ್ಟುಕೊಂಡು ಸಮಾಜಕ್ಕೆ ಬೇಕಾಗಿರುವ ಮೀಸಲಾತಿಯನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಹೇಳಿದರು.

ಮುಖಂಡರಾದ ವಿರುಪಾಕ್ಷಪ್ಪ ಮುದ್ಲಾಪೂರ ಮಾತನಾಡಿ, ಸಮಾಜದ ಸ್ಥಿತಿಗತಿಗಳನ್ನು ತಿಳಿದುಕೊಂಡು ಮುನ್ನಡೆಯುವವರು ನಿಜವಾದ ನಾಯಕನಾಗಲು ಸಾಧ್ಯವಾಗುತ್ತದೆ. ಎಸ್ಟಿ ಮೀಸಲಾತಿಯನ್ನು ನೀಡಬೇಕು ಎಂದು ಕೂಗು ಕೇಳಿ ಬರುತ್ತಿದೆ. ಆದರೆ ಅದು ಹೋರಾಟದ ಮೂಲಕ ನಡೆಯುತ್ತಿಲ್ಲ. ನಾವುಗಳು ಹೋರಾಟದ ಹಾದಿಯನ್ನು ತುಳಿಯಬೇಕಾಗಿದೆ. ಹೋರಾಟಕ್ಕೆ ಇಳಿಯದಿದ್ದರೆ ಮೀಸಲಾತಿ ದೊರೆಯುವುದು ಕಷ್ಟವಾಗುತ್ತದೆ. ನಾನು ಎನ್ನುವ ಮನೋಭಾವದಿಂದ ಸಂಘಟನೆಯಲ್ಲಿ ತೊಡಗಿಕೊಳ್ಳದೆ ನಾವು ಎನ್ನುವ ಮನೋಭಾವದಲ್ಲಿ ಸಮಾಜ ಸಂಘಟನೆಯಲ್ಲಿ ತೊಡಗಿಕೊಂಡು ಪ್ರತಿಯೊಬ್ಬರು ಸಮಾಜಕ್ಕೆ ದುಡಿಯಬೇಕು ಎಂದು ಹೇಳಿದರು.

ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಸೋಮಣ್ಣ ಬಾರಕೇರ, ಮುಖಂಡರಾದ ರಾಜಶೇಖರಪ್ಪ ಮುಸ್ಟೂರು, ಯಮನಪ್ಪ ಕಬ್ಬೇರ, ಯಂಕಪ್ಪ ಕಬ್ಬೇರ್, ವೆಂಕಟೇಶ ಬಾರಕೇರ್, ಈ.ಧನರಾಜ್, ಯಂಕೋಬಪ್ಪ, ಬುಡ್ಡಪ್ಪ ಬಾರಕೇರ, ರಾಮಣ್ಣ ಸುಣಗಾರ, ಹನುಮೇಶ ಭಟಾರಿ, ಪರಶುರಾಮ ಮಡ್ಡೇರ್, ಶಿವಕುಮಾರ ಅರಿಕೇರಿ, ಹರೀಶ್ ಬಾರಕೇರ, ಕನಕಪ್ಪ ಸುಣಗಾರ ಹಾಗೂ ಇತರರಿದ್ದರು.


About Mallikarjun

Check Also

76 ಮೈಲ್ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅನ್ನದಾತರ ಹೋರಾಟ ಒಣಗುವ ಸ್ಥಿತಿಯಲ್ಲಿರುವ ಜೋಳ ಬೆಳೆ ಉಳಿಸಿಕೊಡಿ ಎಂದ ರೈತರು.

The farmers have demanded that the 76-mile canal be drained of water, and the farmers …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.