Govinda Karajola of Parliament should give internal reservation to the state government
ಕಾನ ಹೊಸಹಳ್ಳಿ: ಹೊಸಹಳ್ಳಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 50ರ ಬಳಿ ಇರುವಗಾಣಿಗರ ಸಮುದಾಯ ಭವನದ ಮುಂಭಾಗದಲ್ಲಿ ಚಿತ್ರದುರ್ಗದ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ಇವರು ಚಿತ್ರದುರ್ಗ ಮಾರ್ಗದಿಂದ ಸಂಚರಿಸುವ ಮಾರ್ಗದ ಮಧ್ಯ ಕಾನ ಹೊಸಹಳ್ಳಿ ಹೋಬಳಿ ವ್ಯಾಪ್ತಿಯ ದಲಿತ ಮುಖಂಡರು ಭೇಟಿಯಾಗಿ ಒಳ ಮೀಸಲಾತಿ ಬಗ್ಗೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಅವರು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅಗತ್ಯ ಇದೆ. ಈ ಸಂಬಂಧ ಬೊಮ್ಮಾಯಿ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಅಡೆತಡೆಗಳೆಲ್ಲ ನಿವಾರಣೆಯಾಗಿವೆ. ಈಗಿನ ಸರ್ಕಾರ ಮುತುವರ್ಜಿ ವಹಿಸಿ ಒಳಮೀಸಲಾತಿ ನೀಡಬೇಕು. ದಲಿತ ಸಮುದಾಯದವರು ಸಾವಿರ ಸಂಖ್ಯೆಯಲ್ಲಿ ಒಳ ಮೀಸಲಿನ ಅನುಷ್ಠಾನಕ್ಕೆ ಶೀಘ್ರದಲ್ಲೇ ಸಮಾವೇಶ ನಡೆಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎನ್ ರವಿಕುಮಾರ್ ವಿಧಾನಪರಿಷತ್ ಸದಸ್ಯರು, ಚಿತ್ರದುರ್ಗ ದಲಿತ ಮುಖಂಡ ಮುರಾರ್ಜಿ ಡಿ ಓ, ಡಿಎಸ್ಎಸ್ ತಾಲೂಕ ಅಧ್ಯಕ್ಷ ಟಿ ಗಂಗಾಧರ್, ಗ್ರಾ.ಪಂ ಸದಸ್ಯ ಹೊನ್ನೂರ ಸ್ವಾಮಿ, ಕಾನಾಮಡುಗು ಎಚ್ ದುರುಗಪ್ಪ, ಡಿಎಸ್ಎಸ್ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯ ಕಾನಮಡುಗು ದುರುಗಪ್ಪ, ಸಂಘಟನಾ ಸಂಚಾಲಕ ಎನ್. ಪಕೀರಪ್ಪ ಕಾನಮಡಗು, ನಡವಲುಮನೆ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ಹೇಮಣ್ಣ, ನೀರಗುಂಟೆ ತಿಪ್ಪೇಶ್, ಮಾದಿಗ ದಂಡೋರ ಸಂಘದ ಹೋಬಳಿ ಅಧ್ಯಕ್ಷ ಎಂ ಬಸವರಾಜ್, ಸಣ್ಣ ನಾಗರಾಜ, ಮಂಜುನಾಥ, ದುರುಗೇಶ್, ಯಂಬಳಿ ಸಿದ್ದಪ್ಪ, ಕರಿಬಸಪ್ಪ ಸೇರಿದಂತೆ ದಲಿತ ಸಮುದಾಯದ ಮುಖಂಡರು, ಗ್ರಾ.ಪಂ ಸದಸ್ಯರು, ಯುವಕರು ಇತರರು ಇದ್ದರು.