runner-up in yoga competition; to the district level
ಗಂಗಾವತಿ: ನಗರದ ಲಿಟಲ್ ಆರ್ಟ್ಸ್ ಶಾಲೆಯ 6ನೇ ತರಗತಿಯ
ವಿದ್ಯಾರ್ಥಿನಿ ಕುಮಾರಿ ನಿಹಾರಿಕಾ ಶಿಕ್ಷಣ ಇಲಾಖೆ ಏರ್ಪಡಿಸಿದ ಹಿರಿಯ ಪ್ರಾಥಮಿಕ ಶಾಲೆಗಳ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾಳೆ. ವಿದ್ಯಾರ್ಥಿನಿಗೆ ಮತ್ತು ದೈಹಿಕ ಶಿಕ್ಷಕರುಗಳಾದ ಸೋಮಶೇಖರ ಮತ್ತು ಛತ್ರಪ್ಪ ಇವರುಗಳಿಗೆ ಶಾಲೆಯ ಕಾರ್ಯದರ್ಶಿಗಳಾದ ಜಗನ್ನಾಥ ಆಲಂಪಲ್ಲಿ ರವರು ಶುಭಾಶಯಗಳನ್ನು ತಿಳಿಸಿ ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಬರಲಿ ಎಂದು ಹಾರೈಸಿದರು.