ಕಲ್ಮಠ ಮಹಿಳಾ ಕಾಲೇಜಿನಲ್ಲಿ ಮಹಿಳಾ ಕಲೋತ್ಸವ :

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Women's Art Festival at Kalmath Women's College:

ಕಲ್ಮಠ ಮಹಿಳಾ ಕಾಲೇಜಿನಲ್ಲಿ ಮಹಿಳಾ ಕಲೋತ್ಸವ :  

ಜಾಹೀರಾತು

            ಗಂಗಾವತಿ: ನಗರದ  ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವಸ್ವಾಮಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ವಿಶ್ವಚೇತನ ವಿದ್ಯಾರ್ಥಿನಿ ಒಕ್ಕೂಟದಿಂದ  ವಿದ್ಯಾರ್ಥಿನಿಯರಿಗಾಗಿ  ಮಹಿಳಾ ಕಲೋತ್ಸವ  ಎಂಬ ಸೃಜನಶೀಲ ಅಭಿವ್ಯಕ್ತಿ ಕಾರ್ಯಕ್ರಮ  ಹಮ್ಮಿಕೊಂಡಿತ್ತು, ಅದರ ನಿಮಿತ್ಯ ರಂಗೋಲಿ, ಮೆಹಂದಿ , ಕೇಶಾಲಂಕಾರ  ಕಲಾ ಸ್ಪರ್ಧೆಗಳು ನಡೆದವು.” ಭಾರತೀಯ ಪಾರಂಪರಿಕ ಶೈಲಿ ಮತ್ತು ವಿನ್ಯಾಸ ”  ಎನ್ನುವ  ವಿಷಯ ನೀಡಲಾಗಿತ್ತು.ಹಲವಾರು ವಿದ್ಯಾರ್ಥಿನಿಯರು ಸುಂದರವಾದ ಮುಕ್ತ ರಂಗೋಲಿ  ಮತ್ತು ಚುಕ್ಕಿ ರಂಗೋಲಿಗಳನ್ನು , ಭಾರತೀಯ ಶೈಲಿಯ ಮೆಹಂದಿಗಳನ್ನು ಮತ್ತು ವೈವಿಧ್ಯವಾದ

ಕೇಶವಿನ್ಯಾಸಗಳನ್ನು ಪ್ರಸ್ತುತ ಪಡಿಸಿದರು.ಆ ಮೂಲಕ ತಮ್ಮಲ್ಲಿದ್ದ ಸೃಜನಶೀಲ ಕಲೆಯನ್ನು ಅಭಿವ್ಯಕ್ತಿಸಿದರು ಈ ರಂಗೋಲಿ, ಮೆಹಂದಿ ಮತ್ತು ಕೇಶವಿನ್ಯಾಸಗಳು  ವೈವಿಧ್ಯತೆಯಿಂದ ಕೂಡಿದ್ದು ನೋಡುಗರ ಮನಸ್ಸನ್ನು ಸೆಳೆದವು. ಈ ಸ್ಪರ್ಧೆಯಲ್ಲಿ ಕುಮಾರಿ ದೀಪಿಕಾ ಮತ್ತು ಭೀಮಮ್ಮ ಪ್ರಥಮ ಸ್ಥಾನವನ್ನು ,ಸ್ವಾತಿ ಮತ್ತು ಸಂಗೀತ ದ್ವಿತೀಯ ಸ್ಥಾನವನ್ನು, ಚುಕ್ಕಿ ರಂಗೋಲಿಯಲ್ಲಿ ಉಮಾದೇವಿ ಸುಜಾತ ಪ್ರಥಮ ಸ್ಥಾನವನ್ನು, ಸುವರ್ಣ, ಶ್ರೀ ಲಕ್ಷ್ಮಿ ದ್ವಿತೀಯ ಸ್ಥಾನವನ್ನು ,ಗೀತಾ ,ನಂದಿನಿ ತೃತೀಯ ಸ್ಥಾನವನ್ನು ಪಡೆದರು.   ಮೆಹಂದಿ ಸ್ಪರ್ಧೆಯಲ್ಲಿ ಪ್ರಥಮಸ್ಥಾನವನ್ನು ಫಲಕ್ ನಾಜ್ ಮತ್ತು ಎಸ್ ಲಕ್ಷ್ಮಿ ಹಾಗೂ  ದ್ವಿತೀಯ ಸ್ಥಾನವನ್ನು ಆಲ್ಫಿಯಾ ಹಾಗೂ ಆಲಿಯಾ , ತೃತೀಯ ಸ್ಥಾನವನ್ನು ರೇಖಾ ಮತ್ತು ಆಫ್ರಿನ್  ಪಡೆದರು.‌ ಕೆಶಾಲಂಕಾರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ದುರ್ಗಮ್ಮ ಮತ್ತು  ಜುಲೇಖ ಹಾಗು ದ್ವಿತೀಯ ಸ್ಥಾನವನ್ನು ಭಾಗ್ಯಲಕ್ಷ್ಮಿ ಮತ್ತು ವೀಣಾ ಪಡೆದರು. ಈ ಸ್ಪರ್ಧೆಗಳಿಗೆ ಮಹಾವಿದ್ಯಾಲಯದ ಮಹಿಳಾ ಉಪನ್ಯಾಸಕಿಯರಾದ ಡಾ. ಶಾರದಾ ಪಾಟೀಲ್, ಡಾ. ವಾಣಿಶ್ರೀ ಪಾಟೀಲ್, ಡಾ. ಜರಿನಾ , ಶಾಂತಮ್ಮ ದಿನ್ನಿ, ವಿಜಯಲಕ್ಷ್ಮಿ ,ರಶ್ಮಿ, ಶಿವಮ್ಮ ಹಂಪಮ್ಮ ನಿರ್ಣಾಯಕ ರಾಗಿದ್ದರು.‌ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ, ಉಪಪ್ರಾಚಾರ್ಯ ಡಾ. ಕೆ.ಎಂ. ಬಸವರಾಜ್, ಪ್ರೊ.ಜಿ.ಬಸವರಾಜ್, ಡಾ. ಸುರೇಶಗೌಡ, ಪ್ರೊ. ರುದ್ರಗೌಡ ಮುಂತಾದವರು ಉಪಸ್ಥಿತರಿದ್ದರು

Total Views: 2
Share This Article