
Vishwaguru Basavanna was the one who shed the light of knowledge and sowed the seeds of revolution

ಜ್ಞಾನದ ಬೆಳಕು ಚೆಲ್ಲಿ, ಕ್ರಾಂತಿಯ ಬೀಜ ಬಿತ್ತಿದವರು ವಿಶ್ವಗುರು ಬಸವಣ್ಣ.

ಕೊಪ್ಪಳ: ಮೂಢ ನಂಬಿಕೆ, ಮಡಿ ಮೈಲಿಗೆ, ಮೇಲು ಕೀಲು, ಲಿಂಗ ಅಸಮಾನತೆ ಜಾತಿ ವ್ಯವಸ್ಥೆ ಸೇರಿದಂತೆ ಸಮಾಜದಲ್ಲಿದ್ದ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ಹಲವಾರು ಸಾಮಾಜಿಕ ಸುಧಾರಣೆಗಳನ್ನು ತಂದವರು ಬಸವಣ್ಣನವರು. ದಯವೇ ಧರ್ಮದ ಮೂಲವಯ್ಯ ಎನ್ನುತ್ತಾ ಮನುಕುಲಕ್ಕೆ ಮಾನವೀಯತೆಯ ಸಂದೇಶವನ್ನು ಸಾರಿದವರು. ವಚನಗಳ ಮೂಲಕವೇ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಈ ಮಹಾನ್ ಬಸವಣ್ಣನನವರಾಗಿದ್ದಾರೆ ಎಂದು ಹಿರಿಯ ಪರ್ತಕರ್ತರು ಶರಣ ಚಿಂತಕರಾದ ಜಿ.ಎಸ್ ಗೋನಾಳ್ ಹೇಳಿದರು. ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜಿನಲ್ಲಿ ದಿನಾಂಕ ೦೯.೦೫.೨೦೨೬ರಂದು ಬೆಳಗ್ಗೆ ೯;೦೦ಗಂಟೆಗೆ ಆಯೋಜಿಸಿದ ವಿಶ್ವಗುರು ಬಸವಣ್ಣನವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಜ್ಞಾನದ ಬೆಳಕು ಚೆಲ್ಲಿ ಕ್ರಾಂತಿಯ ಬೀಜ ಬಿತ್ತಿದವರು ವಿಶ್ವಗುರು ಬಸವಣ್ಣ. ಪ್ರಸಿದ್ಧ ಸಂತರಾಗಿದ್ದ ಇವರು ರಾಜನೀತಿಜ್ಞರಾಗಿ, ಸಮಾಜ ಸುಧಾರಕರಾಗಿ, ತಮ್ಮ ವಿಚಾರಧಾರೆಗಳ ಮೂಲಕ ಸಮಾಜದಲ್ಲಿನ ಅಂಕುಡೊAಕುಗಳನ್ನು ತಿದ್ದಿ ತೀಡಿ ಮನುಕುಲಕ್ಕೆ ದಾರಿದೀಪವನ್ನು ತೋರಿದರು. ಮನುಕುಲಕ್ಕೆ ಸಮಾನತೆಯ ಪಾಠ ಕಲಿಸಿಕೊಟ್ಟ ಅವರ ವಿಚಾರ ಇಂದಿಗೂ ನಮಗೆಲ್ಲರ ಬದುಕಿಗೆ ಬದುಕಿಗೆ ದಾರಿದೀಪವಾಗಿವೆ. ಇಂತಹ ಶ್ರೇಷ್ಠರ ತತ್ವ ಸಿದ್ಧಾಂತಗಳನ್ನು ಅರ್ಥೈಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಬದುಕು ನಮ್ಮದಾಗುತ್ತದೆ ಎಂದರು.
ಮಹಾವಿದ್ಯಾಲಯ ಉಪಪ್ರಾಚಾರ್ಯರಾದ ಡಾ. ಕರಿಬಸವೇಶ್ವರ ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ಪ್ರಾಧ್ಯಾಪಕರಾದ ಶರಣಬಸಪ್ಪ ಬಿಳಿಯಲೆ, ಪ್ರಾಧ್ಯಾಪಕರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜ ದಂಡೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಧ್ಯಾಪಕ ಡಾ. ಶಿವಪ್ಪ ಸ್ವಾಗತಿಸಿದರು, ಡಾ. ಸುಮಲತಾ ಬಿ.ಎಂ ನಿರೂಪಿಸಿದರು, ಕು.ಅನುಷಾ ಹಿರೇಮಠ ಪ್ರಾರ್ಥಿಸಿದರು ಪ್ರಾಧ್ಯಾಪಕರು ಹಾಗೂ ವಿದ್ಯಾಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಂದು ಮಹಾವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
