♠

-
The members of “Anubhava Sangama” do not find it appropriate that the term “Lingayat” is being used as the name of the religion.

-
ಲಿಂಗಾಯತ” ಎಂಬ ಪದ ಏಕೆ? ಧರ್ಮದ ಹೆಸರಾಗಿ ಬಳಸಲಾಗುತ್ತಿದೆ ಎಂಬುದು “ಅನುಭಾವ ಸಂಗಮ”ದವರಿಗೆ ಸರಿಕಾಣುತ್ತಿಲ್ಲ
ಈ “ಲಿಂಗಾಯತ” ಎಂಬ ಪದ ಏಕೆ? ಧರ್ಮದ ಹೆಸರಾಗಿ ಬಳಸಲಾಗುತ್ತಿದೆ ಎಂಬುದು “ಅನುಭಾವ ಸಂಗಮ”ದವರಿಗೆ ಸರಿಕಾಣುತ್ತಿಲ್ಲ ಹಾಗು ಅದು ಒಳ್ಳೆಯದಲ್ಲ.
ಅಪ್ಪ ಸಂಗನಬಸವಣ್ಣನವರ ವಚನದಲ್ಲಿ “ಲಿಂಗವಂತ” “ಲಿಂಗಿ” “ಲಿಂಗಾಂಗಿ” “ಲಿಂಗ ಸಂಗಿ” ಇತ್ಯಾದಿ ಪದಗಳಿವೆಯೆ ಹೊರತು “ಲಿಂಗಾಯತ” ಅಂತ ಎಲ್ಲಿಯೂ ಆ ಪದದ ಉಲ್ಲೇಖವಿಲ್ಲ ಹಾಗೂ ಯಾವುದೇ ಬಸವಾದಿ ಶರಣರು ಕೂಡಾ ಆ “ಲಿಂಗಾಯತ” ಪದವನ್ನು ಬಳಸಿಲ್ಲ ಮತ್ತು ಹೇಳಿಲ್ಲ.
ಲಿಂಗ ತತ್ವಗಳನ್ನು ನಾಡಿನಾದ್ಯಂತ ಪ್ರಚಾರ ಹಾಗೂ ಪ್ರಸಾರಗೈದ “ಬಸವ ಧರ್ಮ ಪೀಠ” ದಿಂದ “ಲಿಂಗಾಯತ” ಎಂಬ ಪದವು ಹೆಚ್ಚಿನ ಮಟ್ಟಿಗೆ ಚಾಲ್ತಿಗೆ ಬಂದಿದ್ದು, ಜನಸಾಮಾನ್ಯರ ತಲೆಯಲ್ಲಿ ಖಾಯಂ ಆಗಿ ಆ “ಲಿಂಗಾಯತ” ಪದ ನೆಲೆಸಿ, ಆ ರೂಢಿಯೆ ಇಂದು “ಲಿಂಗಾಯತ” ವೆಂದು ಧರ್ಮಕ್ಕೆ ಕರೆಯುತ್ತಿರುವುದು ಲಿಂಗವಂತರ ಅಧ್ಯಯನದ ಕೊರತೆಯೆಂದೆ ಹೇಳಬೇಕಿದೆ. ಇದರ ಬಗ್ಗೆ “ಅನುಭಾವ ಸಂಗಮ”ದವರಿಂದ “ವಚನ ಸಿದ್ಧಾಂತ” ಅಧ್ಯಯನದ ಮೂಲಕ ಸಾಕಷ್ಟು ವಿವರಣೆಯನ್ನು ಸುಮಾರು ದಶಕಗಳಿಂದ ಧರ್ಮದ ಹೆಸರನ್ನು “ಲಿಂಗ” ವೆಂದು ಹೆಸರಿಸಿ ಹಾಗೆ ಕರೆಯಬೇಕೆಂದು ಲಿಖಿತ ಹೇಳಿಕೆ ನೀಡಿದ್ದೆವೆ.
ದಯವಿಟ್ಟು ಆಲಿಸಿ “ಲಿಂಗ” ವೆಂಬ ಪದವು ಅಷ್ಟ ಆವರಣದಲ್ಲಿ, ಸಪ್ತ ಆಚಾರದಲ್ಲಿ ಹಾಗು ಷಟ್ ಸ್ಥಲದಲ್ಲಿ ಬಂದಿದ್ದು ಅಲ್ಲಿ “ಲಿಂಗಾಯತ” ಎಂಬ ಪದವಿಲ್ಲ ಮತ್ತು ಹಾಗಂತ ಬಳಸಿಲ್ಲ. ಅಂದರೆ ಮೂಲದ ಎಲ್ಲಾ ವಚನಗಳು ಆ “ಲಿಂಗ” ಎಂಬ ಪದದ ಸುತ್ತಲೇ ಗಿರಕಿ ಹೊಡೆಯುತ್ತಿರುವಾಗ “ಲಿಂಗಾಯತ” ಎಂಬ ಕ್ರಿಯಾ ಪದವನ್ನು ಬಳಸುವುದರಲ್ಲಿ ಯಾವ ಹಿತಾಸಕ್ತಿಯು ಬೇಡ ಎಂಬುದರ ಕಡೆಗೆ ನಾವೆಲ್ಲರೂ ಗಮನಹರಿಸಿ ಚಿಂತನೆ ಮಾಡಬೇಕಿದೆ. ಹೌದು “ವಚನ ಸಿದ್ಧಾಂತ”ವನ್ನು ಅಧ್ಯಯನಮಾಡಿದ ಅನೇಕ ಅನ್ಯರು ಆ ಪದವನ್ನು ಅನಿವಾರ್ಯ ಕಾರಣಗಳಿಂದ ಅಂದಿನ ಕಾಲದ ಜನರ ನಾಡಿಮೀಡಿತವನ್ನು ಕಂಡು “ಲಿಂಗಾಯತ” ಪದ ಬಳಸಿದ್ದು ನಿಜ. ಆದರೆ ಧರ್ಮದ ಹೆಸರು ಕ್ರಿಯಾ ಪದವಾಗಿರದೆ ಅದು ಆ ಸಿದ್ಧಾಂತದ ತಿರುಳಿನ ಸಾಮಾನ್ಯ ಪದವಾಗಿರಬೇಕು. ನೀವೆ ಯೋಚಿಸಿ ಈ ಲೋಕದ ಅನ್ಯ ಮತಗಳು ಯಾವ ಯಾವ ಪದವನ್ನು ಹೇಗೆ ಇಟ್ಟುಕೊಂಡು ತಮ್ಮ ತಮ್ಮ ಮತವನ್ನು ಹೆಸರಿಸಿದ್ದಾರೆ ಎಂಬುದರ ಕಡೆಗೆಯೂ ಈ ನಮ್ಮ ಧರ್ಮದ ಮುಖಂಡತ್ವವನ್ನು ವಹಿಸಿಕೊಂಡ ಮಠಾಧೀಶರಿಗೆ, ಬಲಾಢ್ಯರಿಗೆ ಹಾಗು ಧರ್ಮದ ಪಂಡಿತರೆಂದು ಹೇಳಿಕೊಳ್ಳುವವರಿಗೂ ಅರ್ಥವಾಗುತ್ತಿಲ್ಲ. ಇರಲಿ, ಬಹುಶಃ “ಲಿಂಗ” ಧರ್ಮವೆಂದು ಕರೆಯುವಲ್ಲಿ ಅವರು ಆ ಪದವನ್ನು ಗಂಡು ಹೆಣ್ಣಿನ ಜನನೇಂದ್ರಿಯ ಸೂಚಕ “ಅಂಗ” ಪದವೆಂದು ತಿಳಿದುಕೊಂಡಿರಬಹುದಾಗಿ, ಅದಕ್ಕೆಯೆ ಪುರ್ಲಿಂಗ, ಸ್ತ್ರೀಲಿಂಗ, ನಪುಸಕಲಿಂಗ, ಲಿಂಗ ಸಮಾನತೆ, ಲಿಂಗಭೇದ, ಲಿಂಗ ತಾರತಮ್ಯವೆಂದು ಹೀಗೆ ಆ “ಲಿಂಗ” ಪದವನ್ನು “ಅಂಗ”ವನ್ನು ಸೂಚಿಸಲು ಹಾಳುಮಾಡಿ ಹೋಲಿಸುತ್ತಿರುವ ಭಾಷಾಪಂಡಿತರ ಕಾರಣದಿಂದ ಹಾಗೆ ಲಿಂಗವಂತ ಜನರಿಗೆ “ಲಿಂಗ” ಧರ್ಮವೆಂದು ಹೇಳಲು ಮುಜುಗುರವಾಗುತ್ತಿರಬೇಕು! ಆದರೆ “ಲಿಂಗ” ವೆಂಬ ಪದದ ಅರ್ಥವನ್ನು ಚಿಕ್ಕಪ್ಪ ಚನ್ನಬಸವಣ್ಣ ಅವರು ಸ್ಪಷ್ಟವಾಗಿ ತಮ್ಮ ವಚನದಲ್ಲಿ ವ್ಯಾಖ್ಯಾನ ಮಾಡಿರುವುದನ್ನು ಅನೇಕ ಲಿಂಗವಂತರು ನೋಡಿಲ್ಲ ಮತ್ತು ಅದರ ಬಗ್ಗೆ ಗಮನಹರಿಸಿಲ್ಲ. ಆದುದರಿಂದ ಬಸವಾದಿ ಶರಣರು ತೋರಿದ “ವಚನ ಸಿದ್ಧಾಂತ” ಆಧಾರಿತ ಧರ್ಮಕ್ಕೆ ಈಗೆ ಕರೆಯುತ್ತಿರುವ “ಲಿಂಗಾಯತ” ಪದದ ಬದಲಾಗಿ ಅದರೊಂದಿಗಿನ “ಯತ” ವನ್ನು ಮೊಟಕುಗೊಳಿಸಿ “ಲಿಂಗ” ವೆಂದು ತಿದ್ದುಪಡಿ ಮಾಡಿ ಎಲ್ಲಾ ಆಯಾಮದ ಧರ್ಮ ಜಾಗೃತಿಗಾಗಿ ಮುಂದುವರೆಯುವ ಅವಶ್ಯಕತೆಯಿದೆ., ಶರಣಾರ್ಥಿ.
🙏🙏🙏
ಯಿಂದ,
ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ
ಪೀಠಾಧಿಪತಿ,
ಅಲ್ಲಮಪ್ರಭು ಅನುಭಾವ ಪೀಠ
ಪಶ್ಚಿಮ ಕರಾವಳಿ, ಭಾರತ ದೇಶ.
😀😀😀
ಶರಣ Kusuma Lokesh (7022002518) ಅಕ್ಕವರು ಹೇಳುತ್ತಾರೆ
👆👆👆
ಶರಣ ಬಂಧುಗಳಿಗೆ ಶರಣಾರ್ಥಿಗಳು ! ಬಸವಣ್ಣನವರ ತತ್ವಗಳಲ್ಲಿ ಲಿಂಗವನ್ನು ಆಯತ ಮಾಡಿಕೊಳ್ಳುವುದು ಅಂದರೆ ಧರಿಸಿಕೊಂಡು, ಸತ್ಯ ಶುದ್ಧ ಕಾಯಕದಿಂದ ನಿಜಾಚರಣೆಗಳನ್ನು, ರೂಢಿಸಿಕೊಂಡು ಬರುವವರು ಲಿಂಗಾಯತರೆ ಆಗಿರುವುದರಿಂದ ಲಿಂಗಾಯತ ಧರ್ಮ ಅಂತ ಕರೆಯುವುದು ಸೂಕ್ತ ಅನಿಸಿದೆ. ಜೈ ಬಸವ🙏
😀😀😀
ಉತ್ತರ:- ಅನುಭಾವ ಸಂಗಮದಿಂದ
👆👆👆
ಶರಣ Kusuma Lokesh (7022002518) ಅಕ್ಕವರೇ ಆಲಿಸಿ, ನಿಮ್ಮ ಮೇಲಿನ ಅಭಿಪ್ರಾಯದಂತೆ ಅನೇಕರು ಉತ್ತರಿಸಿದ್ದು, ವಚನ ಸಿದ್ಧಾಂತವು ಪ್ರತಿಯೊಂದು ಜೀವಾತ್ಮರನ್ನು ಲಿಂಗಭವಿ ಮತ್ತು ಲಿಂಗಭಕ್ತರೆಂದು ಭೇದವೆಣಿಸದೆ ವಿಂಗಡಿಸಿ ಲಿಂಗ ಭವಿಗಳು ಕರಲಿಂಗವನ್ನು ಗುರಕಾರುಣ್ಯದಿಂದ ಹಸ್ತಮಸ್ತಕ ಸಂಯೋಗದ ಮುಖಾಂತರ ಆ ಲಿಂಗಭವಿಯಲ್ಲಿರುವ ಅರೂಹುವನ್ನು ಕರಲಿಂಗವೆಂಬ ರೂಪದಲ್ಲಿ ಸಾಧನಾ ಮಾಡಲು ತೋರುತ್ತಾನೆ ಅರ್ಥಾತ ಕೊಡುವುದಿಲ್ಲ. ಆಗ ಲಿಂಗಭಕ್ತನು ತನ್ನ ಮುಂದಿನ ಸಾಧನೆಗಾಗಿ ಎಡಕರದ ಅಂಗೈಯಲ್ಲಿ ತದೇಕ ದೃಷ್ಟಿಯಿಂದ ನಿರೀಕ್ಷಿಸಲು ಇಷ್ಟಪಟ್ಟು ಇಟ್ಟುಕೊಂಡಾಗ ಅದು ಲಿಂಗ ಆಯತವಾಯಿತು. ಇದು ನಿತ್ಯವು ತನಗಿಷ್ಟವಾದಾಗ ಮಾಡುವ ಲಿಂಗ ಆಯತವಾಗಿದೆ. ನಂತರ ಲಿಂಗಭಕ್ತನು ಆಯತ ಮಾಡಿಕೊಂಡ ನಂತರ ತನ್ನ ಉಸಿರಾಟದ ಪ್ರಾಣದೊಂದಿಗೆ ಮಂತ್ರವನ್ನು ಉತ್ತರಿಸುತ್ತಾ ಮೂಲಾಧಾರದಿಂದ ಆಜ್ಞಾದವರೆಗೆ ಚಿಶಕ್ತಿಯನ್ನು ಆಯಾ ಚಕ್ರಗಳ ಮೂಲಕ ಎರಿಸುತ್ತಾ ನಂತರ ಇಳಿಸುತ್ತಾ ಇರುವುದಕ್ಕೆ ಲಿಂಗ ಸ್ವಾಯತದೊಳಗಿರುತ್ತಾನೆ. ತದನಂತರ ಆ ಲಿಂಗಭಕ್ತನು ತನ್ನ ಚಿಶಕ್ತಿಯನ್ನು ಮಸ್ತಕಕ್ಕೆ ಎರಿಸಿ ಅಲ್ಲಿಯೇ ಆನಂದಿಸುತ್ತಾ ಇರುವುದೇ ಲಿಂಗ ಸನ್ನಿಹೀತನಾಗಿ ತನಗೆ ತಾನೆ ದೇವನಾಗಿರುತ್ತಾನೆ. ಹೀಗೆ ಲಿಂಗ ಆಯತ , ಲಿಂಗ ಸ್ವಾಯತ ಹಾಗು ಲಿಂಗ ಸನ್ನಿಹಿತಗಳು ಲಿಂಗವಂತನ ಲಿಂಗಾಂಗ ಸಾಮರಸ್ಯದ ಕ್ರಿಯಾಹಂತಗಳಾಗಿವೆ. ಕರಲಿಂಗವು ಜನಸಾಮಾನ್ಯರ ಸಾಧನೆಗೆ ಸಹಕಾರಿಯಾದ ವೈಜ್ಞಾನಿಕ ಸಾಧನವೇ ಹೊರತು ಅದುವೇ ಅನಿವಾರ್ಯವಲ್ಲ. ಕರಲಿಂಗವೆಂಬ ಸಾಧನಾವಿಲ್ಲದಿದ್ದರೂ ಸಾಧನೆಮಾಡಿರುವ ಅನೇಕ ದೃಷ್ಟಾಂತಗಳು ಲೋಕದಲ್ಲಿ ಇವೆ. ಆದರೆ ಕರಲಿಂಗವೆಂಬ ಸಾಧನವು ಅತ್ಯಂತ ತ್ವರಿತಗತಿಯಲ್ಲಿ ಸಾಧಕನು ಸಾಧನಾಮಾರ್ಗದ ಎತ್ತರವನ್ನು ತಲುಪಲು ಸಾಧ್ಯ. ಒಟ್ಟಾರೆ “ಲಿಂಗಾಯತ” ಎಂಬ ಕ್ರಿಯೆಯು ಲಿಂಗಭಕ್ತನ ಆರಂಭಿಕ ಕ್ರಿಯೆಯಾಗಿದ್ದು ಲಿಂಗವನ್ನು ಆಯತಮಾಡಿಕೊಳ್ಳುವ ಅದು ಸಾಮಾನ್ಯ ವಚನ ಸಿದ್ಧಾಂತದಲ್ಲಿ ಬರುವ ಪದವಲ್ಲ. ಅದಲ್ಲದೆ ಲಿಂಗಾಯತವು ಲಿಂಗಭಕ್ತನ ವ್ಯಕ್ತಿವಾಚಕ ಪದವಾಗಿದೆ. ಹಾಗಾಗಿ ಅಂಥ ಪದಗಳನ್ನು ಧರ್ಮದ ಹೆಸರಿನ ಪದವಾಗಿ ಬಳಸಬಾರದು. ಧರ್ಮದ ಪದಗಳು ಯಾವುದೇ ಕ್ರಿಯೆಯನ್ನು ಬಿತ್ತರಿಸಬಾರದು, ಶರಣಾರ್ಥಿ.
😀😀😀
ಶರಣ Shailaja Babu (9113255502)ಅಕ್ಕವರು ಹೇಳುತ್ತಾರೆ
👆👆👆
ಓಂ ವಿಶ್ವ ಗುರುಬಸವ ಲಿಂಗಾಯ ನಮಃ ಅಣ್ಣನವರೇ ನೀವು ಹೇಳುವ ಚೆನ್ನ ಬಸವಣ್ಣನವರು ಹೇಳಿದ ಲಿಂಗ ಎನ್ನುವ ಪದಕ್ಕೆ ಎಷ್ಟು ಮಹತ್ವ
ಇದೆಯೋ ಅಷ್ಟೆ ಮಹತ್ವ ಆಚರಣೆಗೂ ಇದೆ. ಕರಣ ಹಸಿಗೆ
ಏಳುವಂತೆ ನವ ಲಿಂಗಗಳು ಈಗಾಗಲೇ ದೇಹದಲ್ಲಿ ಸೃಷ್ಠಿ ಗೊಂಡಿವೆ. ಅವುಗಳು ಇರುವ ಬಗ್ಗೆ ತಿಳುವಳಿಕೆ, ತಿಳಿಯುವ ವಿಧಾನ, ಅವುಗಳು ಇರುವಂತೆಯೇ ಇರುವ ಸ್ಥಿತಿ, ಅವುಗಳನ್ನು ಇಷ್ಟಲಿಂಗದ ಮೂಲಕ ಜಾಗೃತಿ ಮಾಡಿ ಅವುಗಳಿಂದ ಆಗುವ ಉಪಯೋಗ
ಅವುಗಳ ಅಸ್ತಿತ್ವದ ಮಹತ್ವಗಳ ಅರಿಯುವಿಕೆಯ ಜ್ಞಾನ ಸಂಪಾದನೆ ಗೆ. ವೈಜ್ಞಾನಿಕ ಭೂತತ್ವದ ಸಸ್ಯ ಸಂಪತ್ತನ್ನು ಬಳಸಿ ವಿಶ್ವವದ ಗೋಲ ರೂಪವನ್ನು ಆಯತ ಮಾಡಿ ಅಂಗೈಗೆ ಕೊಟ್ಟು ಅದರ ಉಪಯೋಗದ ಆಂತರಿಕ ಜಾಗೃತಿಯ ಜ್ಞಾವನ್ನು ಸಂರಕ್ಷಿಸಿ ಕೊಟ್ಟ ಶರಣರ ಸಾಹಿತ್ಯದೊಂದಿಗೆ ನಾವು ಲಿಂಗ ಆಯತ ಮಾಡಿಕೊಳ್ಳುವ ಕ್ರಿಯೆಯೇ ಲಿಂಗ +ಆಯತ ವಾಗಿ ನೋಡೋಣ ಅಂತ ಹೇಳುತ್ತಾ ನನ್ನ ಅನಿಸಿಕೆ
ಲಿಂಗಾಯತ ಧರ್ಮ ಸರಿಯಾದ ಪದವೆಂದು ಹೇಳಲು ಬಯಸುತ್ತೇನೆ.
😀😀😀
:- ಅನುಭಾವ ಸಂಗಮದಿಂದ
👆👆👆
ಶರಣ Shailaja Babu ಅಕ್ಕವರೇ ಆಲಿಸಿ, ಚಿಕ್ಕಪ್ಪ ಚನ್ನಬಸವಣ್ಣ ಅವರು ಲಿಂಗ ಎಂಬ ಪದವನ್ನು ಬಹುಸ್ಪಷ್ಟವಾಗಿ ವ್ಯಾಖ್ಯಾನಮಾಡಿದ್ದು “ಲಿಂಗಾಯತ” ಎಂಬ ಪದವನ್ನು ಯಾವುದೇ ಬಸವಾದಿ ಶರಣರು ವ್ಯಾಖ್ಯಾನಮಾಡಿಲ್ಲ. “ಲಿಂಗಾಯತ” ಪದವು ಸಂಧಿ ಪದವಾಗಿದ್ದು ಲಿಂಗವನ್ನು ಆಯತವೆಂಬ ಕ್ರಿಯೆಯೊಂದಿಗೆ ಸೇರಿದೆ. ಲಿಂಗಧಾರಣವಾದ ಲಿಂಗಭಕ್ತನು ಪ್ರತಿನಿತ್ಯ ಲಿಂಗದೊಂದಿಗೆ ಅನುಸಂಧಾನಗೈಯಲು “ಆಯತ” ಅಂದರೆ ಧಾರಣಮಾಡಿದ ಲಿಂಗವನ್ನು ಬಿಚ್ಚಿ ಎಡಕರದ ಅಂಗೈಯಲ್ಲಿ ಇಡುವುದು, ನಂತರ ಬರುವುದು “ಸ್ವಾಯತ” ಅಂದರೆ ಉಸಿರಾಟದೊಂದಿಗೆ ಮಂತ್ರವನ್ನು ನೆನಪಿಸಿಕೊಳ್ಳುತ್ತಾ ಮೂಲಾಧಾರದಿಂದ ಚಿಶಕ್ತಿಯನ್ನು ಆರೋಹಣ ಹಾಗು ಅವರೋಹಣಗೈಯುತ್ತಾ ಮೇಲಕ್ಕೆ ಎರಿಸಬೇಕು, ಅದಾದ ನಂತರ ಆತ ಕ್ರಿಯೆಯ ಅಂತಿಮ ಹಂತವೇ “ಸನ್ನಿಹಿತ”ವಾಗಿದ್ದು ಅದರಲ್ಲಿ ಮಸ್ತಕದ ಮಹಾ ಕುಂಡದಲ್ಲಿ ಸೃವಿಸುವ ಅಮೃತದೊಂದಿಗೆ ತನಗೆ ತಾನೆ ದೇವನಾಗುವಿಕೆ ಅರ್ಥಾತ್ ಸಾಮರಸ್ಯ ಹೊಂದುವ ಕ್ರಿಯೆಗೆ ಒಳಗಾಗಬೇಕು. ಅದು ಲಿಂಗಭಕ್ತನ ದಿನಚರಿಯಲ್ಲಿ ಬರುವ ವೇಳಾಪಟ್ಟಿಯಾಗಿದೆ. ಧರ್ಮದ ಹೆಸರು ಯಾವುದೇ ಕ್ರಿಯೆಯನ್ನು ತಿಳಿಸದೆ ಅದು ಆ ಸಿದ್ಧಾಂತದ ಸೂತ್ರದ ತಿರುಳಿನ ಸಾಮಾನ್ಯ ಪದವಾಗಿರಬೇಕು. ಇನ್ನು ನೀವು ಇಷ್ಟಲಿಂಗ ಎಂಬ ಪದವನ್ನು ಬಳಸಿದ್ದಿರಿ. ಕೊರಳಲ್ಲಿ ಕಟ್ಟಿಕೊಳ್ಳುವುದು ಇಷ್ಟಲಿಂಗವಲ್ಲ. ಅದು ಕರಲಿಂಗವಾಗಿದೆ. ಎಡಕರದ ಅಂಗೈಗೆ ಬಂದಾಗ ಸಾಧನ ಕರಲಿಂಗವು ಇಷ್ಟಲಿಂಗವಾಗಿ ನಂತರ ಉಸಿರಾಟದೊಂದಿಗೆ ಪ್ರಾಣಲಿಂಗವಾಗಿ ಆಮೇಲೆ ಮಸ್ತಕದ ತನ್ಮಯತೆಯಲ್ಲಿ ಭಾವಲಿಂಗವಾಗಿರುತ್ತದೆ. ಶರಣಾರ್ಥಿ.
😀😀😀
ಶರಣ ದಯಾನಂದ ದಯಾನಂದ ಅಣ್ಣಾವರು ಕೇಳುತ್ತಾರೆ
👆👆👆
Anubhava Sangama ಜನವಾಣಿಯಾಗಿ ಸಹಜದಿಂದಾ ಬಂದನೆಂದು ಅದು. ಇದನ್ನೇ ದೊಡ್ಡದಾಗಿ ಮಾಡಬಾರದು ಲಿಂಗಾಯತ ಧರ್ಮ ಅಂತಾ ಹೇಳಿದರೆ ಏನು ತೊಂದ್ರೆ? ಬರೀ ಲಂಗ ಎಂದರೆ, ಒಂಥರಾ ಕಡಿಮೇ ಭಾವ ಬರುತ್ತದೆ. ಅಪೂರ್ಣ ಅನಿಸಿಕೆ.
😀😀😀
ಉತ್ತರ:- ಅನುಭಾವ ಸಂಗಮದಿಂದ
👆👆👆
ಶರಣ ದಯಾನಂದ ದಯಾನಂದ ಅಣ್ಣಾವರೇ ಆಲಿಸಿ, ಸಹಜದಿಂದ ಬರುತ್ತವೆ ಎಂದು ಸಿದ್ಧಾಂತದಲ್ಲಿರದ ಪದಗಳನ್ನು ಧರ್ಮದ ಹೆಸರಾಗಿ ಹೆಸರಿಸಲಾಗದು. ಧರ್ಮದ ಹೆಸರುಗಳು ಆಯಾ ಧರ್ಮಸಿದ್ಧಾಂತದ ಸಾಮಾನ್ಯವಾದ ತಿರುಳಿನ ಪದವನ್ನು ಹೊಂದಿರಬೇಕು. ನೀವು ಕೇಳುವ “ಲಿಂಗಾಯತ” ಎಂಬ ಪದವು ವಚನ ಸಿದ್ಧಾಂತದ ಸಾಮಾನ್ಯ ಪದವಾಗಿರದೆ ಅದೊಂದು ಕ್ರಿಯೆಯನ್ನು ಸೂಚಿಸುವ ವ್ಯಕ್ತಿವಾಚಕ ಸಂಧಿಪದವಾಗಿದೆ. ವಚನ ಸಿದ್ಧಾಂತದ ಧರ್ಮಕ್ಕೆ “ಲಿಂಗ” ವೆಂದು ಕರೆದರೆ ಹೆಚ್ಚಿನ ಶಾಶ್ವತವಾದ ಮೌಲ್ಯ ಬರುತ್ತದೆ. ಹಾಂ ನಿಮ್ಮ ಅನಿಸಿಕೆ ಎನೆಂದರೆ “ಲಿಂಗ” ಅಂದರೆ ಅದನ್ನು ಜನನೇಂದ್ರಿಯ ಸೂಚಕ ಅಂಗ ಭಾಗಗಳಾದ ಯೋನಿ ಹಾಗು ಶಿಶ್ನಕ್ಕೆ ಹೋಲಿಸಿಕೊಳ್ಳುವ ಹಾಗೆ ತಿಳಿದುಕೊಂಡಿರುವುದರಿಂದ ಅನೇಕರು ಆ “ಲಿಂಗ” ವೆಂಬ ಪದದ ಉಚ್ಛಾರವು ಬೇಡವೆಂಬ ಹೈರಾಣದಲ್ಲಿದ್ದಾರೆ. ಭಾರತೀಯ ಭಾಷಾಪಂಡಿತರು “ಲಿಂಗ” ಪದದ ಬಗ್ಗೆ ಕೆಟ್ಟದಾಗಿ ಅಂಗ ಭಾಗಕ್ಕೆ ಬಳಸಿದ್ದು ಹಾಗೆ ನಿಮ್ಮಂಥವರ ವಿಚಾರಗಳು ಕೂಡಾ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದರಿಂದ ನಿಮಗೆ “ಲಿಂಗ” ವೆಂದು ಹೇಳಿಕೊಳ್ಳಲು ಮುಜುಗುರ ಆಗುತ್ತಿದೆ. ಒಂದುವೇಳೆ ಎಲ್ಲಾ ಲಿಂಗವಂತರುಗಳು ತಮ್ಮ ಧರ್ಮದ ಹೆಸರನ್ನು “ಲಿಂಗ” ಪದದಿಂದ ಮೈಚಳಿಬಿಟ್ಟು ಹೇಳಲು, ಆಗ ನೋಡಿ ಅದರ ಮಹತ್ವ ಕಂಡು ಇಡಿ ಜಗತ್ತೆ ಬೆರಗಾಗುತ್ತದೆ. ಇನ್ನೇಕೆ ತಂಡ, ಇಂದಿನಿಂದಲೆ ನೀವೆಲ್ಲರೂ ಧರ್ಮದ ಹೆಸರನ್ನು “ಲಿಂಗ” ಎಂದೆ ಕರೆಯಲು ಆರಂಭಿಸಿ.
😀😀😀
ಶರಣ ದಯಾನಂದ ದಯಾನಂದ ಅಣ್ಣಾವರು ಹೇಳುತ್ತಾರೆ
👆👆👆
Anubhava Sangama ಅದು ಜನವಾಣಿಯಲ್ಲಿ ಸಹಜವಾಗಿ “ಲಿಂಗ” ಎಂದಾಗ ಬಯಲು ಭಾವ ಬಂದು ಅದಕ್ಕೆ ಮತ್ತಷ್ಟು ಮಾತು ಅಂತ ಜೋಡಣೆಯಾಗಿದೆ.. ಈಗ ನೋಡಿ, ಸಂಗ ಎಂದರೆ, ಒಂದು ಥರಾ ಅಸಭ್ಯ ಅಥವಾ ಬಿಚ್ಮಗ್ಗೀ ಅಂತಾರಲ್ಲ ಆ ತೀರಾ ಸಂಗ ದ ಮುಂದೆ ಣ್ಣ ಪ್ಪಾ ಹಚ್ಚಿ ಗೌರವಿಸಿ ಭಾಷ್ಯೆ ಬರೆದಿರುವುದೇ. “ಲಿಂಗಾಯತ”
ಬಹಳ ಎಳೆಯಬೇಡಿ. ಧನ್ಯವಾದಗಳು 🌹
😀😀😀
ಉತ್ತರ:- ಅನುಭಾವ ಸಂಗಮದಿಂದ
👆👆👆
ಶರಣ ದಯಾನಂದ ದಯಾನಂದ ಅಣ್ಣಾವರೆ ಆಲಿಸಿ, ನಿಮ್ಮ ಮಾತನ್ನು ಗೌರವಿಸೋಣ. ಆದರೆ ಯಾವುದೇ ಧರ್ಮವಾಗಲಿ ಯಾ ಮತವಾಗಲಿ ಅದರ ಹೆಸರಿಗೆ ಹಾಗೆ ಮತ್ತೊಂದನ್ನು ಜೋಡಿಸಿಲಿಕ್ಕೆ ಆಗುವುದಿಲ್ಲ. ಯಾವಾಗಲೂ ಧರ್ಮ ಯಾ ಮತದ ಹೆಸರು ತಟಸ್ಥವಾದ ಸಾಮಾನ್ಯ ಪದವಾಗಿರಬೇಕು.
😀😀😀
ಶರಣ Ashok Loni (8660876826)
ಅಣ್ಣಾವರು ಹೇಳುತ್ತಾರೆ
👆👆👆
ಅನಗತ್ಯವಾದ ಹಾಗೂ ಗೊಂದಲವನ್ನುಂಟು ಮಾಡುವ ವಾದ ನಮಗೆ ಬೇಕಾಗಿಲ್ಲ.
😀😀😀
ಉತ್ತರ:- ಅನುಭಾವ ಸಂಗಮದಿಂದ
👆👆👆
ಶರಣ Ashok Loni (8660876826) ಅಣ್ಣಾವರೇ ಆಲಿಸಿ, “ಲಿಂಗ” ಎಂಬ ಪದದ ಬಗ್ಗೆ ವಚನ ಸಿದ್ಧಾಂತದಲ್ಲಿರುವ ವಚನವೇ ಆಧಾರವಾಗಿದ್ದರೂ ಆ ಪದ ನಿಮಗೆ ಅರ್ಥವಾಗದ್ದರಿಂದ ಹೀಗೆ ಹೇಳುತ್ತಿದ್ದಿರಿ. ವಿದ್ಯಾವಂತರಾದ ನೀವು ಒಂದಿಷ್ಟು ಬೇರೆ ಮತಗಳ ಹೆಸರುಗಳನ್ನು ಬೌದ್ಧಿಕತೆಯಿಂದ ಚಿಂತನೆ ಮಾಡುವುದು ಒಳಿತು. ಇದುವರೆಗೂ ಬಸವಾದಿ ಶರಣರ ವಚನ ಸಿದ್ಧಾಂತದ ಲಿಂಗ ಧರ್ಮದಲ್ಲಿ ಧರ್ಮದ ಹೆಸರಿನ ಕುರಿತು ನಿಮ್ಮಂಥವರೇ ಸೇರಿಕೊಂಡಿದ್ದು ವಿಚಾರಶಕ್ತಿಯನ್ನು ಕಳೆದುಕೊಂಡಿರುತ್ತಿರಿ. ಶರಣಾರ್ಥಿ
😀😀😀
ಶರಣ ಪ್ರೊ!! Sanjaya Makal (9845502640) ಅಣ್ಣಾವರು ಹೇಳುತ್ತಾರೆ
👆👆👆
ಲಿಂಗವನ್ನೆ ಹಾಸಿˌ ಲಿಂಗವನ್ನೆ ಹೊದ್ದು ˌ ಲಿಂಗವೆ ಉಸಿರಾಗಿˌ ಲಿಂಗಾವೆ ಪ್ರಾಣವಾಗಿ ಲಿಂಗದಲ್ಲಿಯೆ ಓಲಾಡುವವರಿಗೆˌ ಲಿಂಗವಲ್ಲದೆ ಮತ್ತೇನನ್ನು ಬಯಸದವರಿಗೆ ಲಿಂಗಾಯತರೆನ್ನುತ್ತಾರೆ. ಆಯತವೆಂದರೆ ಚೌಕಟ್ಟು . ಲಿಂಗವೆಂಬ ಆಯತವನ್ನು ಮೀರಿ ಹೋಗದವರಿಗೆ ಲಿಂಗಾಯತರೆನ್ನುತ್ತಾರೆ. ಸಾಧಕನು ಆ ಲಿಂಗವನ್ನೆ ಸ್ವಾಯತ ಮಾಡಿಕೊಳ್ಳುತ್ತಾನೆ. ಅಂದರೆ ಸ್ವತಃ ಸಾಧಕನು ಆ ಲಿಂಗಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವುದೆ ಸ್ವಾಯತ. ತನ್ನತಾನು ಅಳಿದು ಲಿಂಗವೆ ತಾನಾಗುವದೆ ಸನ್ನಿಹಿತ. ಶರಣರು ಶಬ್ದ ಸೂತಕಿಗಳಲ್ಲ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ. ಶಬ್ದಗಳು ಸ್ಥಾವರˌ ಆದರೆ ಅವುಗಳ ತತ್ವವೆಂಬ ಜಂಗಮ ಶಾಶ್ವತ. ಇಂದು ಲಿಂಗಾಯತವು ಬರಿ ಜನರಲ್ಲಿ ಜನಜನಿತವಾಗದೆˌ ಕಾನೂನಾತ್ಮಕವಾಗಿಯೂ ಮತ್ತು ಭಾವನಾತ್ಮಕವಾಗಿಯೂ ಜನತೆ ಒಪ್ಪಿಕ್ಕೊಂಡಿದೆ. ಇನ್ನು ಧರೆಹತ್ತಿ ಲಿಂಗಾಯತವಾದಾಗ ತದನ್ನು ಅಳಿಸಲು ಸಾಧ್ಯವೆ? ಶರಣು ಶರಣಾರ್ಥಿಗಳು.
😀😀😀
ಉತ್ತರ:- ಅನುಭಾವ ಸಂಗಮದಿಂದ
👆👆👆
ಶರಣ ಪ್ರೊ!! Sanjaya Makal (9845502640) ಅಣ್ಣಾವರೇ ಆಲಿಸಿ, ಅನುಭಾವ ಸಂಗಮದಿಂದ ರವಾನಿಸಿದ ಬಸವಾದಿ ಶರಣರ ವಚನ ಸಿದ್ಧಾಂತದಲ್ಲಿ ಬರುವ ಸಾಮಾನ್ಯ “ಲಿಂಗ” ಎಂಬ ಪದವು ಧರ್ಮದ ಹೆಸರಾಗಬೇಕೆಂಬ ನಿಲುವಿನ ಕುರಿತು ನೀವು ಆಕ್ಷೇಪಿಸಿ ನೀಡಿರುವ ಹೇಳಿಕೆಯಲ್ಲಿಯೇ ಅನುಭಾವ ಸಂಗಮದವರ ಸಮರ್ಥನೆಯನ್ನು ಮಾಡಿರುವುದು ನಿಮ್ಮ ಗಮನಕ್ಕೆ ಬಂದಿದಂತೆ ಕಾಣುತ್ತಿಲ್ಲ!
ನೀವೆ ಉಲ್ಲೇಖಿಸಿದಂತೆ, “ಲಿಂಗವನ್ನೆ ಹಾಸಿ, ಲಿಂಗವನ್ನೆ ಹೊದ್ದು, ಲಿಂಗವನ್ನೆ ಉಸಿರಾಗಿ, ಲಿಂಗವೇ ಪ್ರಾಣವಾಗಿ, ಲಿಂಗದಲ್ಲಿಯೇ ಓಲಾಡುವವರಿಗೆ…” ಈ ರೀತಿ “ಲಿಂಗ” ಎಂಬ ಮೂಲ ಪದದಲ್ಲಿಯೇ ಗಿರಕಿ ಹೊಡೆಯುತ್ತಾ, ಅದಕ್ಕೆ ಕ್ರಿಯಾತ್ಮಕವಾದ ಹಾಸಿ, ಹೊದ್ದು, ಉಸಿರು, ಓಲಾಡು “ಆಯತ” “ಸ್ವಾಯತ” “ಸನ್ನಿಹಿತ” ಇತ್ಯಾದಿ ಪದಗಳನ್ನು ಜೋಡಿಸಿದ್ದಿರಿ. ಬಸವಾದಿ ಶರಣರು ಕಲ್ಲಿನಲ್ಲಿ ಜನ್ಮವೆತ್ತದೆ ಜನನಿಯ ಗರ್ಭದಿಂದ ಜನ್ಮಪಡೆಯುವ ಪ್ರತಿಯೊಂದು ಜೀವಾತ್ಮರುಗಳು “ಲಿಂಗವಂತ”ರೆಂದೆ ಪರಿಗಣಿಸುತ್ತದೆ. ಅಂದರೆ ಈ ಲೋಕದ ಪ್ರತಿಯೊಂದು ಜೀವಾತ್ಮನು ಲಿಂಗವಂತನೆ ಆಗಿರುತ್ತಾನೆ/ಳೆ. ಇನ್ನು ನೀವು ಹೇಳುವ “ಲಿಂಗಾಯತ” ಪದದ ಕಡೆಗೆ ಬರೋಣ.
೦೧) “ಆಯತ”= ಜನಿಸಿದ ಸಾಧಕ ಜೀವಾತ್ಮನನ್ನು ಸಂಸ್ಕಾರಯುತನಾಗಲು ಗುರವಿನ ಕರುಣೆಯ ಕೃಪಾಕಟಾಕ್ಷಗೋಸ್ಕರ ಹಸ್ತಮಸ್ತಕ ಸ್ಪರ್ಶದೊಂದಿಗೆ ಅಂಗವನ್ನಾವರಿಸಿದ ಚಿತ್ಕಳೆಯನ್ನು ಆ ಗುರವು ಸಾಧಕನ ಅರೂಹಿಗೆ ತರುತ್ತಾ, ಆ ಅರೂಹುವಿನ ಕುರೂಹೆ ಕರಲಿಂಗವೆಂಬ ಸಾಧನವಾಗಿ ತೋರಿದ್ದನ್ನು ಸಾಧಕನು ಲಿಂಗಾಂಗ ಸಾಮರಸ್ಯಕ್ಕಾಗಿ ಆ ಕರಲಿಂಗವನ್ನು ತನ್ನ ಏಡಕರದ ಅಂಗೈಗೆ ಕರೆದುಕೊಳ್ಳುವುದೆ “ಆಯತ”ವಾಗಿದೆ. ಈ ರೀತಿ “ಆಯತ”ವಾದ ಕರಲಿಂಗವೆ ಅಂಗೈಯಲ್ಲಿ “ಇಷ್ಟಲಿಂಗ”ವಾಗಿದೆ. ಈ ಸಮಯದಲ್ಲಿ ಸಾಧಕನು ಇಷ್ಟಲಿಂಗಕ್ಕೆ ಮಜ್ಯನ ಮಾಡುವುದು, ವಿಭೂತಿ ಹಚ್ಚುವುದು, ಪತ್ರೆ ಪುಷ್ಪ ಇಡುವುದು ಇತ್ಯಾದಿ ಕ್ರಿಯೆಗಳನ್ನು ಅಂಗವನ್ನು ಭೌತಿಕವಾಗಿ ಪ್ರಫುಲ್ಲಗೊಳಿಸಿಕೊಳ್ಳಲು ಮಾಡಲಾಗುತ್ತದೆ. ಹಾಗಾಗಿ ಕೊರಳಲ್ಲಿ ಯಾ ಮತ್ತೆಲ್ಲಿಯಾದರೂ ಯೋಗ್ಯ ಸ್ಥಳಗಳಲ್ಲಿ ಕಟ್ಟಿರುವ ಕರಲಿಂಗವು ಇಷ್ಟಲಿಂಗವಲ್ಲ. ಕರಲಿಂಗವು ಎಡಕರದ ಅಂಗೈಗೆ ಬಂದಾಗ ಅದು “ಇಷ್ಟಲಿಂಗ”ವೆನಿಸುತ್ತದೆ. ಆದುದರಿಂದ ಇದು ಲಿಂಗಾಂಗ ಸಾಮರಸ್ಯದ ಪ್ರಥಮ “ಅಂಗ” ಅರ್ಥಾತ “ತನ” ಶುದ್ದಿಯ ಹಂತ.
೦೨) “ಸ್ವಾಯತ” = ಈ ಹಂತವು ಸಾಧಕನು ತನ್ನ ಮನವನ್ನು ಏಕಾಗ್ರತೆಗೊಳಿಸುವ ಸಲುವಾಗಿ ಏಡಕರದ ಅಂಗೈಯಲ್ಲಿರುವ ಇಷ್ಟಲಿಂಗವನ್ನು ಮೂಗಿನ ನೇರಕ್ಕೆ ತಂದು ಹತ್ತು ಅಂಗುಲ ದೂರಕ್ಕೆ ಎತ್ತರಿಸಿ, ಅರೆತೆರೆದ ಕಣ್ಣಿನಿಂದ ವೀಕ್ಷಿಸುತ್ತಾ ಪ್ರಾಣವಾಯುವಿನ ಎರಿಳಿತದೊಂದಿಗೆ ಷಟ್ಸ್ಥಲ ಪಥದಲ್ಲಿ ಸಾಗುತ್ತಾ ಮಾಡುವ ನೀರಿಕ್ಷಣೆಯೇ “ಸ್ವಾಯತ”ವಾಗಿದೆ. ಈ ಸ್ವಾಯತದಲ್ಲಿ ಸಾಧಕನ ಇಷ್ಟಲಿಂಗವು “ಪ್ರಾಣಲಿಂಗ”ವೆನಿಸಿಕೊಳ್ಳುತ್ತದೆ. ಅಂದರೆ ದೇಹಭಾವ ಅಳಿದು ಲಿಂಗಭಾವ ನೆಲೆಗೊಳ್ಳುತ್ತದೆ. ಇದು “ಮನ” ಶುದ್ದಿಯ ಹಂತ
೦೩) “ಸನ್ನಿಹಿತ”= ಈ ಹಂತದಲ್ಲಿ ಸಾಧಕನು ಷಟ್ ಸ್ಥಲವನ್ನು ದಾಟಿ ಲಿಂಗಾಂಗ ಸಾಮರಸ್ಯಕ್ಕಾಗಿ “ನಿರವಯ” “ನಿರಂಜನ” “ನಿಶೂನ್ಯ” ವನ್ನು ಪ್ರವೇಶಿಸಿ, ತಾನೆ “ಲಿಂಗ”ವಾಗುವ ಪ್ರಕ್ರಿಯೆ “ಸನ್ನಿಹಿತ”ವಾಗಿದೆ. ಇಲ್ಲಿ ಸಾಧಕನ ಕರಲಿಂಗವು ಸನ್ನಿಹಿತಗೊಂಡು “ಭಾವಲಿಂಗ”ವೆನಿಸುತ್ತದೆ. ಇದು “ಭಾವ” ಶುದ್ದಿಯ ಹಂತ.
ಹೀಗೆ ಈ ಎಲ್ಲಾ “ಆಯತ” “ಸ್ವಾಯತ” ಹಾಗು “ಸನ್ನಿಹಿತ” ಕ್ರಿಯೆಗಳು “ಲಿಂಗ” ದೊಂದಿಗೆ ಸೇರಿ, ಆರಂಭದಲ್ಲಿ “ಲಿಂಗ ಆಯತ” ನಂತರ “ಲಿಂಗ ಸ್ವಾಯತ” ಆ ಮೇಲೆ “ಲಿಂಗ ಸನ್ನಿಹಿತ” ಎಂಬ ಪ್ರಕ್ರಿಯೆಗಳೊಂದಿಗೆ ತಾನೆ ದೇವನಾಗುವುದೇ ಲಿಂಗವಂತನ ಬದುಕಿನ ಮುಖ್ಯ ಗುರಿಯಾಗಿದೆ. ನೀವು ಉಲ್ಲೇಖಿಸಿದಂತೆ “ಲಿಂಗಾಯತ” ಅದು ಸಂದಿ ಪದವಲ್ಲ. ಅದನ್ನು “ಲಿಂಗ” “ಆಯತ” ಎಂದು ಬಿಡಿಸಿ ಉಚ್ಛರಿಸಬೇಕು. ಲಿಂಗವೆಂಬ ಪವಿತ್ರ ಪದವನ್ನು ಭಾಷಾ ಪಂಡಿತರು ಕೆಡಿಸಿರುವುದನ್ನು ದಯವಿಟ್ಟು ಗಮನಿಸಿ ಹಾಗು ಬಸವಾದಿ ಶರಣರ ವಚನ ಸಿದ್ಧಾಂತ(ಸಾಹಿತ್ಯವಲ್ಲ)ದ ಧರ್ಮದ ಹೆಸರನ್ನು “ಲಿಂಗ” ವೆಂದೆ ಸಂಭೋದಿಸಲು ನಿಮ್ಮಂಥ ಜ್ಞಾನಿಗಳು ಕರೆಕೊಟ್ಟು ಧರ್ಮವನ್ನು ಸಂರಕ್ಷಿಸಬೇಕು, ಶರಣಾರ್ಥಿ.
😀😀😀
