All parties should not create anxiety among voters regarding the SIR – Magalamani.
ಎಲ್ಲಾ ಪಕ್ಷಗಳು ಎಸ್ ಐ ಆರ್ ಬಗ್ಗೆ ಮತದಾರರಲ್ಲಿ ಆತಂಕ ಸೃಷ್ಟಿ ಬೇಡ -ಮ್ಯಾಗಳಮನಿ.

ಗಂಗಾವತಿ ,5:ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಸ್ಕರಣೆ (ಎಸ್ ಐ ಆರ್ )ಕುರಿತು ಕಾಂಗ್ರೆಸ್ ಹಾಗೂ ಬಿ ಜೆ ಪಿ -ಜೆ ಡಿ ಎಸ್ ಪಕ್ಷಗಳು ಆರೋಪ -ಪ್ರತ್ಯಾರೋಪ ಮಾಡಿ ಮತದಾರರಲ್ಲಿ ಆತಂಕ ಸೃಷ್ಟಿ ಮಾಡದಿರಲೆಂದು ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಆಗ್ರಹಿಸಿದ್ದಾರೆ. ಅವರು ರವಿವಾರ ಮಾಧ್ಯಮದ ಮೂಲಕ ಹೇಳಿಕೆ ನೀಡಿ ಎಸ್ ಐ ಆರ್ ಕುರಿತು ಜನರಲ್ಲಿ ವಿಶ್ವಾಸ ಮೂಡಿಸಿ ಅರ್ಹ ಮತದಾರರು ಪಟ್ಟಿಯಿಂದ ಹೊರಗೆ ಉಳಿಯದಂತೆ ಹಾಗೂ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಟ್ಟಿಗಳಲ್ಲಿ ಇರದಂತೆ ಮತ್ತು ಮತದಾರರ ಪಟ್ಟಿ ಪಾರದರ್ಶಕ ನಡೆಯಲು ಚುನಾವಣೆ ಆಯೋಗಕ್ಕೆ ಸಲಹೆ, ಸಹಕಾರ ನೀಡಬೇಕು. ಅದರ ಬದಲಾಗಿ ಚುನಾವಣೆಗಾಗಿ ರಾಜಕೀಯ ಮಾಡಬಾರದು. ಅರ್ಹ ಮತದಾರ ಪಟ್ಟಿಯಿಂದ ಹೊರಗುಳಿದಾಗ ಅವರ ಪರವಾಗಿ ಹೋರಾಟ ಮಾಡಿ ನ್ಯಾಯ ಕೊಡಿಸಲಿ. ಇನ್ನೂ ಪ್ರಾರಂಭ ಹಂತದಲ್ಲಿಯೇ ಕೆಸರಾಟ ಹಾಗೂ ಹಗ್ಗ ಜಗ್ಗಾಟ ಮಾಡುವದು ನೋಡಿದರೆ ಎಲ್ಲಾ ಪಕ್ಷಗಳು ಪೂರ್ವ ಯೋಜಿತ ಉದ್ದೇಶದಿಂದ ರಾಜಕೀಯ ದುರುದ್ದೇಶ ಇಟ್ಟು ಕೊಂಡು ಕಾಳಗ ನಡೆಸುತ್ತಿವೆ ಎಂದು ಮ್ಯಾಗಳಮನಿ ಆರೋಪಿಸಿದ್ದಾರೆ. ಚುನಾವಣೆ ಆಯೋಗ ಕೂಡ ಈ ನಿಟ್ಟಿನಲ್ಲಿ ಯಾವುದೇ ಪಕ್ಷದ ಒತ್ತಡಕ್ಕೆ ಒಳಗಾಗದೆ ಎಚ್ಚರಿಕೆವಹಿಸಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನಾತ್ಮಕವಾಗಿ ನೀಡಿರುವ ಮತದಾನದ ಹಕ್ಕಿನಿಂದ ಯಾರೂ ಹೊರಗೆ ಉಳಿಯದಂತೆ ಕ್ರಮವಹಿಸುವುದು ಆಯೋಗದ ಮಹತ್ವದ ಜವಾಬ್ದಾರಿಯಾಗಿದೆ ಎಂದು ಮ್ಯಾಗಳಮನಿ ತಿಳಿಸಿದ್ದಾರೆ.


