ಮೂಡಲಗಿಯ ಬಟ್ಟೆ ಅಂಗಡಿ ಉದ್ಘಾಟನೆ ವೇಳೆ ನಡೆದ ಗಲಾಟೆ

H.Mallikarjun
H.Mallikarjun - Kalyanasiri
1 Min Read
Commotion during the inauguration of a clothing store in Moodalagi

ಮೂಡಲಗಿಯ ಬಟ್ಟೆ ಅಂಗಡಿ ಉದ್ಘಾಟನೆ ವೇಳೆ ನಡೆದ ಗಲಾಟೆ

ಜಾಹೀರಾತು

ಮೂಡಲಗಿ : ಬಟ್ಟೆ ಅಂಗಡಿ ಉದ್ಘಾಟನೆ ನಿಮಿತ್ತವಾಗಿ ರವಿವಾರ ಬೆಳಗ್ಗೆ 10ರಿಂದ 11 ಘಂಟೆವರೆಗೆ 1ರೂಗೆ ಒಂದು ಟೀ ಶರ್ಟ್ ಆಫರ್ ಘೋಷಣೆ ಮಾಡಿದ ಹಿನ್ನೆಲೆ ಮುಗಿದ ಯುವಕರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿರುವ ಘಟನೆ ರವಿವಾರ ಬೆಳಗ್ಗೆ ಜರುಗಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರವಿವಾರದಂದು ಮೆಜೆಸ್ಟಿಕ್ ಬಟ್ಟೆ ಅಂಗಡಿ ಉದ್ಘಾಟನೆ ವೇಳೆ 1ರೂಗೆ ಟೀ ಶರ್ಟ್ ಆಫರ್ ನೀಡಿದ ಹಿನ್ನೆಲೆ ಟೀ ಶರ್ಟ್ ಖರೀದಿಗಾಗಿ ಏಕಾಏಕಿ ಮುಗಿಬಿದ್ದ ಯುವಕರು ನುಗ್ಗಾಟ ತಳ್ಳಾಟದಿಂದ ಅಂಗಡಿ ಉದ್ಘಾಟನೆಗೆ ಮಾಡಿರುವ ಅಲಂಕಾರವನ್ನು ಹಾಳು ಮಾಡಿ ಪಕ್ಕದಲ್ಲಿರುವ ಹೋಟೆಲ್ ಗ್ಲಾಸ್ ಕೂಡ ಒಡೆದು ಹೋಗಿದ್ದು ಈ ಘಟನೆ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಯುವಕರನ್ನು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿರುವ ಪ್ರಸಂಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.


  1. ಮೂಡಲಗಿ, ಸಂಗೊಳ್ಳಿ ರಾಯಣ್ಣ ವೃತ್ತ, ಬೆಳಗಾವಿ ಜಿಲ್ಲೆ
  2. ಏನಾಯ್ತು: “1 ರೂಪಾಯಿಗೆ 1 ಟೀ ಶರ್ಟ್” ಆಫರ್ ಕೇಳಿ ಯುವಕರು ಏಕಾಏಕಿ ಮುಗಿಬಿದ್ದರು
    1. ಪರಿಣಾಮ: ಅಂಗಡಿ ಅಲಂಕಾರ ಹಾಳು, ಪಕ್ಕದ ಹೋಟೆಲ್ ಗ್ಲಾಸ್ ಒಡೆದರು
  3. ಪೊಲೀಸ್ ಕ್ರಮ: ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.
  4. “1 ರೂಪಾಯಿ ಟೀ ಶರ್ಟ್ ಆಫರ್: ಮೂಡಲಗಿಯಲ್ಲಿ ಮುಗಿಬಿದ್ದ ಯುವಕರು, ಲಾಠಿ ಪ್ರಹಾರ”
  5. “ಮೆಜೆಸ್ಟಿಕ್ ಬಟ್ಟೆ ಅಂಗಡಿ ಉದ್ಘಾಟನೆಯಲ್ಲಿ ಗಲಾಟೆ: ಅಲಂಕಾರ-ಹೋಟೆಲ್ ಗ್ಲಾಸ್ ಹಾನಿ”
  6. “10 ರಿಂದ 11 ರವರೆಗೆ 1 ರೂ ಟೀ ಶರ್ಟ್: ಮೂಡಲಗಿಯಲ್ಲಿ ನೂಕು ನುಗ್ಗಲು”

Total Views: 0
Share This Article