Unveiling of T.S. Karibasayya’s statue at the Kanteerava Studios premises.


ಕಂಠೀರವ ಸ್ಟುಡಿಯೋಸ್ ಆವರಣದಲ್ಲಿ ಟಿ.ಎಸ್. ಕರಿಬಸಯ್ಯ ಪುತ್ಥಳಿ ಅನಾವಣ
ಬೆಂಗಳೂರು,:ಬೆಂಗಳೂರಿನ ಕಂಠೀರವ ಸ್ಟುಡಿಯೋ ಸ್ಥಾಪನೆಯ ರೂವಾರಿ ತಿಪಟೂರಿನ ಟಿ.ಎಸ್ ಕರಿಬಸಯ್ಯ ಅವರ ಕೊಡುಗೆಯನ್ನು ಪರಿಗಣಿಸಿ ಸ್ಟುಡಿಯೋ ಆವರಣದಲ್ಲಿ ಸಿದ್ಧವಾಗಿರುವ ಟಿ.ಎಸ್ ಕರಿಬಸಯ್ಯ ಪುತ್ಥಳಿಯನ್ನು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಆಯುಕ್ತರಾದ ಅನುಚೇತ್ ಮತ್ತು ಕರಿಬಸವಯ್ಯ ಕುಟುಂಬ ಸದಸ್ಯರು ಅನಾವರಣಗೊಳಿಸಿದರು.
ಪುತ್ಥಳಿಯನ್ನು ಅನಾವರಣಗೊಳಿಸಬೇಕು ಎಂದು ಕಲಾ ಕಂಠೀರವ ದಿ. ಟಿ.ಎಸ್. ಕರಿಬಸಯ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ,ಟ್ರಸ್ಟ್ ಉಪಾಧ್ಯಕ್ಷ ತಿಪಟೂರು ದಯಾನಂದ್ ಸಾಗರ್ ರವರ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದರು.
ಕಂಠೀರವ ಸ್ಟುಡಿಯೋ ಸ್ಥಾಪನೆಯಾಗಿ 60 ವರ್ಷ ತುಂಬಿದೆ. ಜೊತೆಗೆ ಕರಿ ಬಸವಯ್ಯ ಅವರಿಗೆ 115 ವರ್ಷ ತುಂಬಿದ್ದು, ಅವರ ಜನ್ಮ ಶತಮಾನೋತ್ಸವನ್ನು ಸಹ ಆಚರಿಸಬೇಕು. ಕರಿಬಸಯ್ಯ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವಂತಾಗಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕಂಠೀರವ ಸ್ಟುಡಿಯೋ ವಜ್ರ ಮಹೋತ್ಸವ ಆಚರಿಸಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತಿತರ ಅಂಗ ಸಂಸ್ಥೆಗಳು ಒಗ್ಗೂಡಿ ವಜ್ರ ಮಹೋತ್ಸವ ಆಚರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಕನ್ನಡ ಚಿತ್ರ ರಂಗಕ್ಕೆ ಕರಿಬಸಯ್ಯ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಹೆಸರು ಇಂದು ಮರೆಯಾಗುತ್ತಿದ್ದು, ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಸರಕಾರ ಹಾಗೂ ಕನ್ನಡ ಚಿತ್ರರಂಗ ಅದ್ಧೂರಿ ಯಿಂದ ಆಚರಿಸಬೇಕು. ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಹೆಸರು ಗಳಿಸಿದೆ. ಅಂತಯೇ ರಂಗ ಭೂಮಿ ಹಾಗೂ ಚಿತ್ರರಂಗಕ್ಕೆ ನಗರದ ಟಿ.ಎಸ್.ಕರಿಬಸಯ್ಯ ಕೊಡುಗೆ ಅಪಾರವಾಗಿದೆ.
ಕನ್ನಡ ಚಿತ್ರರಂಗ ಆರಂಭವಾದ ದಿನದಿಂದಲೂ 1966ರವರೆಗೆ ಕನ್ನಡ ಚಿತ್ರರಂಗದ ಸಿನಿಮಾಗಳ ಚಿತ್ರಿಕರಣಕ್ಕೆ ಮದರಾಸಿಗೆ ತೆರಳಬೇಕಿತ್ತು, ಆ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಸುಸಜ್ಜಿತ ಸ್ಟುಡಿಯೋಗಳು ಇರಲಿಲ್ಲ. ಇಂತಹ ಸ್ಥಿತಿಯನ್ನು ಮನಗಂಡ ಕಲಾರಾಧಕ ಟಿ.ಎಸ್ ಕರಿಬಸಯ್ಯ ಅವರು ಗುಬ್ಬಿವೀರಣ್ಣನವರ ಜತೆಗೂಡಿ 1966 ರಲ್ಲಿ ಬೆಂಗಳೂರಿನಲ್ಲಿ ಕಂಠೀರವ ಸ್ಟುಡಿಯೊ ಸ್ಥಾಪಿಸಿ ಚಿತ್ರರಂಗದ ಅನೇಕ ಕಲಾವಿದರಿಗೆ ನಿರ್ದೇಶಕರಿಗೆ, ನಿರ್ಮಾಪಕರಿಗೆ, ಆಶ್ರಯದಾತರಾಗಿದ್ದರು ಎಂದರು.
ರಂಗಭೂಮಿ ಹಾಗೂ ಚಿತ್ರರಂಗದ ಏಳಿಗಾಗಿ ತಮ್ಮ ಜೀವನವನ್ನೇ ಮುಡಪಾಗಿಟ್ಟಿದ್ದರು. ಸ್ಟುಡಿಯೋ ಸರಕಾರದ ಸುಪರ್ದಿಗೆ ತೆಗೆದು ಕೊಂಡು ಹಲವು ವರ್ಷಗಳೇ ಕಳೆದಿದ್ದರೂ ಈವರೆಗೆ ಸರಕಾರವು ಕನಿಷ್ಠ ಟಿ.ಎಸ್.ಕರಿಬಸಯ್ಯ ಅವರ ಸ್ಮರಣೆ ಕಾರ್ಯಕ್ರಮ ಆಚರಿಸಿಲ್ಲ ಎಂದು ಅವರ ಅಭಿಮಾನಿಗಳು ಆಗ್ರಹಿಸಿದ್ದರು.
ಪುತ್ಥಳಿ ಅನಾವರಣ ಸಂದರ್ಭದಲ್ಲಿ ಕಂಠೀರವ ಸ್ಟುಡಿಯೋ ಚೇರ್ಮನ್ ಮೆಹಬೂಬ್ ಪಾಷ, ಉಪಸ್ಥಿತರಿದ್ದರು.

