ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

H.Mallikarjun
H.Mallikarjun - Kalyanasiri
4 Min Read

 

Meeting with representatives of recognized and registered political parties
 

ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

ಜಾಹೀರಾತು


ಸುಲಭ ಮತದಾನಕ್ಕೆ ಅವಕಾಶ ನೀಡಲು ಹೊಸದಾಗಿ 37 ಮತಗಟ್ಟೆಗಳ ಸೃಜನೆ: ಸಿದ್ರಾಮೇಶ್ವರ

 ಕೊಪ್ಪಳ ಸೆಪ್ಟೆಂಬರ್ 02, (ಕರ್ನಾಟಕ ವಾರ್ತೆ): ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕರಡು ಮತದಾರ ಪಟ್ಟಿಯಲ್ಲಿದ್ದಂತೆ ಮತದಾರರ ಸಂಖ್ಯೆಗನುಗುಣವಾಗಿ 1200 ಕ್ಕಿಂತ ಹೆಚ್ಚು ಮತದಾರರಿರುವ ಪ್ರದೇಶಗಳಲ್ಲಿ ಮತದಾನಕ್ಕೆ ಅನುಕೂಲ ಕಲ್ಪಿಸಲು ಜಿಲ್ಲೆಯಲ್ಲಿ ಒಟ್ಟು 37 ಹೊಸ ಮತಗಟ್ಟೆಗಳನ್ನು ಸೃಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಹೇಳಿದರು.
ಸೆ.2 ರ ಬುಧವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಮಾನ್ಯತೆ ಪಡೆದ ಹಾಗೂ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರಡು ಮತದಾರರ ಪಟ್ಟಿಯಲ್ಲಿರುವಂತೆ 1200 ಕ್ಕಿಂತ ಹೆಚ್ಚಿನ ಮತದಾರರಿರುವ ಪ್ರದೇಶಗಳಲ್ಲಿ ಸುಲಭ ಮತದಾನಕ್ಕೆ ಅನುಕೂಲ ಕಲ್ಪಿಸಲು 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 14, 61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 11, 62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 5, 63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 3 ಹಾಗೂ 64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 4 ಸೇರಿದಂತೆ ಒಟ್ಟು 37 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮೊದಲು 1315 ಮತಗಟ್ಟೆಗಳಿದ್ದವು, ಪ್ರಸ್ತುತ ಜಿಲ್ಲೆಯಲ್ಲಿ 1352 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಹೊಸದಾಗಿ ಸ್ಥಾಪಿಸಲಾದ 37 ಮತಗಟ್ಟೆಗಳಿಗೆ ಈಗಾಗಲೇ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಈ ಮತಗಟ್ಟೆಗಳಿಗೆ ಬೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡಬೇಕಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ಕರಡು ಮತದಾರರ ಪಟ್ಟಿಯಲ್ಲಿ 5,19,142 ಪುರುಷ ಮತದಾರರು, 5,22,189 ಮಹಿಳಾ ಮತದಾರರು ಹಾಗೂ 57 ತೃತೀಯ ಲಿಂಗಿಯ ಮತದಾರರು ಸೇರಿದಂತೆ ಒಟ್ಟು 10,41,388 ಮತದಾರರಿದ್ದಾರೆ. ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾ ವೆಬ್‌ಸೈಟ್  https://koppal.nic.in/en/election/     ನಲ್ಲಿ, ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಯಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಛೇರಿಯಲ್ಲಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮತ್ತು ಮತಗಟ್ಟೆಗಳಲ್ಲಿ ಸಾರ್ವಜನಿಕರಿಗಾಗಿ ವೀಕ್ಷಣೆಗಾಗಿ ಪ್ರಕಟಿಸಲಾಗಿದೆ. ಜಿಲ್ಲೆಯ ಎಲ್ಲಾ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ದಿನಾಂಕ:24.08.2026 ರ ಕರಡು ಮತದಾರರ ಪಟ್ಟಿಯನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಗಣತಿ ನಮೂನೆಯಲ್ಲಿ ಒದಗಿಸಿರುವ ಹಿಂದಿನ ವಿಶೇಷ ಸಮಗ್ರ ಪರಿಷ್ಕರಣೆ ಮತದಾರರ ಪಟ್ಟಿಯ ವಿವರಗಳು ಲಭ್ಯವಿಲ್ಲದಿದ್ದಲ್ಲಿ ಅಥವಾ ಡೇಟಾಬೇಸ್‌ನಲ್ಲಿರುವ ಮಾಹಿತಿಯೊಂದಿಗೆ ತಾಳೆಯಾಗದಿರುವ 14,401  ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಇನಾಫಾರ್ಮೇಶನ್ ಶೀಟ್ ಫಾರ್ ಎನ್ಯುಮರೇಷನ್ ಫಾರ್ಮ  (Information Sheet for Enumeration Form)    ರಲ್ಲಿ ತಿಳಿಸಿದಂತೆ ಮತದಾರರ ಮ್ಯಾಪಿಂಗ್ ಆಗಿಲ್ಲದಿದ್ದಲ್ಲಿ ಅಥವಾ ಮ್ಯಾಪಿಂಗ್‌ನಲ್ಲಿ ಅನೊಮಲೀ   (Anomalie)     ಬಂದಲ್ಲಿ ಮತದಾರರ ನೋಂದಣಾಧಿಕಾರಿಗಳಿAದ ಸಂಬAಧಪಟ್ಟ ಮತದಾರರಿಗೆ ನೋಟಿಸ್ ಅನ್ನು ಸ್ವೀಕೃತಿಯಾದ ಮೇಲೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿವಿಧ ವರ್ಗಗಳ ಆಧಾರದ ಮೇಲೆ ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು. ವಿಚಾರಣೆಯನ್ನು ಕೈಗೊಳ್ಳಲು ಹೆಚ್ಚುವರಿಯಾಗಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ತಹಶೀಲ್ದಾರ್ ಕಛೇರಿ, ನಗರ ಸ್ಥಳೀಯ ಸಂಸ್ಥೆ ಕಛೇರಿಗಳಲ್ಲಿ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯಾಲಯಗಳಲ್ಲಿ ವಿಚಾರಣೆಯನ್ನು ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಶನಿವಾರ ಮತ್ತು ಭಾನುವಾರ (ಸೆಪ್ಟೆಂಬರ್-19 & 20) ಬೂತ್ ಮಟ್ಟದ ಅಧಿಕಾರಿಗಳನ್ನು ಹಾಗೂ ಇತರೆ ಅಧಿಕಾರಿಗಳನ್ನು ನಿಯೋಜನೆ ಮಾಡುವ ಮೂಲಕ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗುತ್ತಿದ್ದು, ಆಗಸ್ಟ್ 29 ಮತ್ತು 30 ರಂದು ಹಮ್ಮಿಕೊಂಡಿದ್ದ ವಿಶೇಷ ಅಭಿಯಾನದಂದು 18 ರಿಂದ 19 ವಯಸ್ಸಿನ ಯುವ ಮತದಾರರ 2,947 ಅರ್ಜಿಗಳು, 20+ ವಯಸ್ಸಿನ ಮತದಾರರ 966 ಅರ್ಜಿಗಳು ಸೇರಿದಂತೆ ನಮೂನೆ 6 ರ 3,913 ಅರ್ಜಿಗಳು, ನಮೂನೆ 7 ರ 11 ಅರ್ಜಿಗಳು, ನಮೂನೆ 8 ರ 954 ಅರ್ಜಿಗಳು ಅಥವಾ ಹಕ್ಕು ಮತ್ತು ಆಕ್ಷೇಪಣೆಗಳು ಸ್ವೀಕೃತಿಯಾಗಿರುತ್ತವೆ. ಪ್ರತಿ ದಿನ ಸ್ವೀಕೃತವಾಗುವಂತಹ ಹಕ್ಕು ಮತ್ತು ಆಕ್ಷೇಪಣೆಗಳ ವಿವರಗಳನ್ನು ನಮೂನೆ-9, 10, 11, 11ಎ & 11ಬಿ ರಲ್ಲಿ ಪ್ರತಿ ದಿನ ಮತದಾರರ ನೋಂದಣಾಧಿಕಾರಿಗಳ ಕಛೇರಿಯ ನೋಟಿಸ್ ಬೋರ್ಡ್ಗಳಲ್ಲಿ ಹಾಗೂ ಪ್ರತಿ ವಾರದಂದು ಜಿಲ್ಲಾ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಪ್ರಚುರಪಡಿಸಲಾಗುವುದು. ವಸತಿ ಪ್ರದೇಶಗಳು, ಅಪಾರ್ಟ್ಮೆಂಟ್, ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಅರ್ಹ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಇತರೆ ಸ್ಥಳಗಳಲ್ಲಿ ಸ್ವೀಪ್ ಚಟುವಟಿಕೆಗಳನ್ನು ಕೈಗೊಂಡು ಮಿಂಚಿನ ನೋಂದಣಿ ಅಭಿಯಾನಗಳನ್ನು ನಡೆಸಿ, ಮತದಾರರ ನೋಂದಣಿಯನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಭರ್ತಿ ಮಾಡಿದ ಗಣತಿ ನಮೂನೆಯನ್ನು ನಿಗದಿತ ಅವಧಿಯೊಳಗೆ ಸಲ್ಲಿಸಲು ಸಾಧ್ಯವಾಗದ ಮತದಾರರು ದಿನಾಂಕ: 23.09.2026 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ನಿಗದಿತ ಘೋಷಣಾ ಪತ್ರದೊಂದಿಗೆ ನಮೂನೆ-6 ಅನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಬಹುದು ಹಾಗೂ ನಮೂನೆ-8 ಅನ್ನು ಸಲ್ಲಿಸಿ ತಿದ್ದುಪಡಿ ಹಾಗೂ ವರ್ಗಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಅರ್ಹರಾಗಿರುವ ಯಾವುದೇ ವ್ಯಕ್ತಿಯು ಬೂತ್ ಮಟ್ಟದ ಅಧಿಕಾರಿಗಳಿಂದ ನಮೂನೆಯನ್ನು ಪಡೆಯಬಹುದು. ನಮೂನೆ 6 (ಹೊಸ ಮತದಾರರ ನೋಂದಣಿ), ನಮೂನೆ 6ಎ (ಹೊಸ ಮತದಾರರ ನೋಂದಣಿ- ಎನ್‌ಆರ್‌ಐ), ನಮೂನೆ 7 (ಈಗಿರುವ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಲು) ಮತ್ತು ನಮೂನೆ 8 (ನಮೂದುಗಳ ತಿದ್ದುಪಡಿ ಹಾಗೂ ಸ್ಥಳಾಂತರಕ್ಕಾಗಿ) ಇವುಗಳನ್ನು  ECINET     ಮೊಬೈಲ್ ಆಪ್ ಅಥವಾ  voters.eci.gov.in     ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿಯೂ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಚುನಾವಣಾ ತಹಶೀಲ್ದಾರ ರವಿ ವಸ್ತçದ, ಚುನಾವಣಾ ಶಾಖೆಯ ನಾಗರಾಜ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಜು ಬಾಕಳೆ, ಕೆ.ಎಸ್. ಮೈಲಾರಪ್ಪ, ಮಹಮ್ಮದ್ ಪಾಷಾ, ಕನಕಪ್ಪ ಸೇರಿದಂತೆ ಇತರರು ಇದ್ದರು. 

Total Views: 0
ಜಾಹೀರಾತು
Share This Article