
Basavanna’s birth anniversary celebrated in Agalakeri


ಕೊಪ್ಪಳ-05 ತಾಲೂಕಿನ ಅಗಳಕೇರಿ ಗ್ರಾಮದ ಬಸವೇಶ್ವರ ಸರ್ಕಲ್ ನಲ್ಲಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ವಿಶ್ವಗುರು ಬಸವಣ್ಣ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಿ ಗಿರೀಶ್ ಹಿರೇಮಠ ಮೆರವಣಿಗೆಗೆ ಚಾಲನೆ ನೀಡಿದರು. ಗಿರೀಶ ಹಿರೇಮಠ ಮಾತನಾಡಿ 12ನೇ ಶತಮಾನದಲ್ಲಿ ಸಮ ಸಮಾಜ ನಿರ್ಮಾಣದ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ವಿಶ್ವಗುರು ಬಸವಣ್ಣನವರು ಒಂದು ಜಾತಿಗೆ ಸೀಮಿತವಾಗಿರದೆ ಜಾತ್ಯಾತೀತವಾಗಿ 900 ವರ್ಷಗಳ ಹಿಂದೆ ಜಾತಿ ವ್ಯವಸ್ಥೆ ಹಾಗೂ ಮೌಡ್ಯಾಚಾರಣೆಗಳ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದರು ಎಂದು ಹೇಳಿದರು. ಗ್ರಾಮದ ಹಿರಿಯರಾದ ಶರಣಪ್ಪ ಶಿವಪ್ಪ ಆನೆಗೊಂದಿ ಮಾತನಾಡಿ ಕಾಯಕ ದಾಸೋಹ ಬಸವಣ್ಣನವರ ದೃಷ್ಟಿಯಲ್ಲಿ ಪ್ರತಿಯೊಬ್ಬ ಶರಣರಿಗೂ ಕಾಯಕ ಅನಿವಾರ್ಯ " ಕಾಯಕವೇ ಕೈಲಾಸ" ಎಂಬ ವಿಶ್ವಮಾನ್ಯ ಆರ್ಥಿಕ ಸಿದ್ದಾಂತ ವಿಶ್ವಕ್ಕೆ ದೊರೆತ ಬಹುದೊಡ್ಡ ತತ್ವ ಎಂದು ಹೇಳಿದರು ಮುಂದಿನ ವರ್ಷ ನಮ್ಮ ಗ್ರಾಮದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಸೇರಿಕೊಂಡು ಬಸವಣ್ಣನವರ ಜಯಂತಿಯನ್ನು ಎಲ್ಲರೂ ಒಗ್ಗಟ್ಟಾಗಿ ಸೇರಿ ಈ ಜಯಂತಿಯನ್ನು ಆಚರಿಸೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ವೀರಭದ್ರಯ್ಯ ಭೂಸನೂರಮಠ, ಮಂಗಳಪ್ಪಗೌಡ್ರ ಕೀರ್ತಗೌಡ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡೈರೆಕ್ಟರ್ ಮಾಲತೇಶ ಕೀರ್ತಗೌಡ್ರ, ಮಹೇಶ ಮಂಗಳೂರು, ಬಸವರಾಜ ಕರ್ಕಿಹಳ್ಳಿ, ಶರಣಪ್ಪ ಕರ್ಕಿಹಳ್ಳಿ, ಮಹೇಶ ಹೂಗಾರ, ಶಿವು ಆನೆಗೂಂದಿ, ಮಂಜುನಾಥ ಶೆಟ್ಟರ್, ಶಾಂತಕುಮಾರ ಕಾರಡಗಿಮಠ, ಕೊಟ್ರೇಶ ವೀರಾಪೂರ, ಶರಣಪ್ಪ ಮಾಕಿ, ಮನೋಹರ ಆನೆಗೊಂದಿ, ಪ್ರಶಾಂತ ಹೂಗಾರ, ವಿನೋದ ಹೂಗಾರ, ವಿರುಪಾಕ್ಷಿ ಆನೆಗೊಂದಿ, ಮಲ್ಲಿಕಾರ್ಜುನ ಮಾಕಿ, ಮೊದಲಾದವರು ಹಾಜರಿದ್ದರು.




