Breaking News

ಮೇಜರ್ಧ್ಯಾನಚಂದ್ಜನ್ಮದಿನ: ಪ್ರಬಂಧಸ್ಪರ್ಧೆ

Major Dhyan Chand’s Birthday: Essay Competition

ಕೊಪ್ಪಳ ಆಗಸ್ಟ್ 21 (ಕರ್ನಾಟಕ ವಾರ್ತೆ): ಮೇಜರ್ ಧ್ಯಾನಚಂದ್‌ರವರ ಜನ್ಮ ದಿನಾಚರಣೆ ಹಾಗೂ ರಾಷ್ಟಿçÃಯ ಕ್ರೀಡಾ ದಿನಾಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
 ಕ್ರೀಡೆಯಲ್ಲಿ ಭಾರತದ ಇತಿಹಾಸ, ವಾಸ್ತವ ಹಾಗೂ ಭವಿಷ್ಯತ್ತು. ಕ್ರೀಡಾ ಸಾಧಕರ ಪರಿಚಯದೊಂದಿಗೆ ಈಗಿನ ಯುವಕ, ಯುವತಿಯರಿಗೆ ಕ್ರೀಡಾಲೋಕದಲ್ಲಿ ಸಾಧನೆ ಮಾಡಲು ಪ್ರೇರೆಪಣೆ. ಈಗಿನ ಒತ್ತಡದ ಬದುಕು ಹಾಗೂ ಶಾರೀರಿಕ & ಮಾನಸಿಕ ಸ್ವಾಸ್ತö್ಯ ಮತ್ತು ಶಕ್ತಿಗೊಳಿಸಲು ಕ್ರೀಡೆಯ ಮಹತ್ವ. ಯುವ ಪಿಳೀಗೆಯನ್ನು ದುಶ್ಚಟಗಳಿಂದ ಮುಕ್ತಗೊಳಿಸುವಲ್ಲಿ ಕ್ರೀಡೆಯ ಪಾತ್ರ ಎಂಬ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದ್ದು, 15 ರಿಂದ 35 ವರ್ಷದೊಳಗಿನ ಯುವ ಪ್ರತಿಭೆಗಳಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
 ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಕೊಪ್ಪಳ ಜಿಲ್ಲೆಯವರಿಗೆ ಮಾತ್ರ ಅವಕಾಶವಿದ್ದು, ಪ್ರಬಂಧವು ಕನ್ನಡದಲ್ಲಿರಬೇಕು. 5000 ಪದಗಳ ಮಿತಿಯೊಳಗೆ ಬರೆಯಬೇಕು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರೂ. 5 ಸಾವಿರ, ದ್ವಿತೀಯ ರೂ. 4 ಸಾವಿರ, ತೃತೀಯ ರೂ. 3 ಸಾವಿರ, ನಾಲ್ಕನೇ ಸ್ಥಾನಕ್ಕೆ ರೂ. 2 ಸಾವಿರ ಮತ್ತು ಐದನೇ ಸ್ಥಾನಕ್ಕೆ ರೂ. 1 ಸಾವಿರಗಳ ನಗದು ಬಹುಮಾನವಿದ್ದು, ಆ. 29 ರಂದು ನಡೆಯಲಿರುವ ಮೇಜರ್ ಧ್ಯಾನಚಂದ್‌ರವರ ಜನ್ಮ ದಿನದ ಕಾರ್ಯಕ್ರಮದಲ್ಲಿ ವಿಜೇತರಿಗೆ ನಗದು ಬಹುಮಾನಗಳನ್ನು ವಿತರಿಸಲಾಗುವುದು.
 ಆಸಕ್ತರು ತಮ್ಮ ವಿಳಾಸ, ಫೋಟೋ ಹಾಗೂ ವಿವರಗಳನ್ನು ಲಕೋಟೆಯೊಂದಿಗೆ ಆಗಸ್ಟ್ 26ರ ಸಂಜೆ 4 ಗಂಟೆಯೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯಾಲಯ, ಜಿಲ್ಲಾ ಕ್ರೀಡಾಂಗಣ, ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು.
 ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಿಬ್ಬಂದಿ ತುಕಾರಾಂ ರಂಜಪಲ್ಲಿ ಮೊ.ಸಂ: 8197398600 ಅಥವಾ ಕಛೇರಿ ದೂರವಾಣಿ ಸಂಖ್ಯೆ 08539-230121 ಗೆ ಸಂಪರ್ಕಿಸಿ ಎಂದು ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

screenshot 2025 12 13 08 43 24 46 6012fa4d4ddec268fc5c7112cbb265e7.jpg

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ

ಆತ್ಮವಿಶ್ವಾಸ ವಿದ್ದಲ್ಲಿ ಪ್ರತಿಭೆ ಅನಾವರಣ—ಡಾ! ಮಂಜುನಾಥ ಕುಕನೂರ Unveiling talent in self-confidence—Dr. Manjunatha Kukanoor ಯಲಬುರ್ಗಾ—ಪ್ರತಿಭೆಗೆ ಬಡತನ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.