ಜಿಲ್ಲೆಯಲ್ಲಿ 10,41,063 ಗಣತಿ ನಮೂನೆಗಳಡಿಜಿಟಲೀಕರಣ,ಎಸ್ಐಆರ್ ಕಾರ್ಯಕ್ರಮದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

H.Mallikarjun
H.Mallikarjun - Kalyanasiri
1 Min Read

Digitization of 10,41,063 census forms in the district; revised schedule for the SIR program announced.




ಜಿಲ್ಲೆಯಲ್ಲಿ 10,41,063 ಗಣತಿ ನಮೂನೆಗಳ ಡಿಜಿಟಲೀಕರಣ,ಎಸ್ಐಆರ್ ಕಾರ್ಯಕ್ರಮದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಕೊಪ್ಪಳ ಆಗಸ್ಟ್ 08 (ಕರ್ನಾಟಕ ವಾರ್ತೆ): ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮದ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿ ಭಾರತೀಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.‌ ಸುರೇಶ ಬಿ. ಇಟ್ನಾಳ ಅವರು ತಿಳಿಸಿದ್ದಾರೆ.

*ಮರುನಿಗದಿತ ಪರಿಷ್ಕರಣೆ ವೇಳಾಪಟ್ಟಿ:* ಬಿಎಲ್‌ಒ.ಗಳಿಂದ ಮನೆ ಮನೆ ಭೇಟಿ ಆಗಸ್ಟ್ 17ರವರೆಗೆ, ಮತಗಟ್ಟೆಗಳ ಸಬಲೀಕರಣ ಹಾಗೂ ಪುನರ್‌ರಚನೆ ಆ. 17ರವರೆಗೆ ನಡೆಯಲಿದ್ದು, ಆ. 24ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ. ಆ. 24 ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಹಾಗೂ ಹಕ್ಕುಗಳ ಸಲ್ಲಿಕೆಗೆ ಅವಕಾಶ. ಆ. 24 ರಿಂದ ಅಕ್ಟೋಬರ್ 22ರವರೆಗೆ ನೋಟಿಸ್ ಹಂತ ಮತ್ತು ಆಕ್ಷೇಪಣೆಗಳ ವಿಲೇವಾರಿ‌ ನಡೆಯಲಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ. ನಾಗರಿಕರು ಹಾಗೂ ಮತದಾರರು ಈ ನಿಗದಿತ ಅವಧಿಯಲ್ಲಿ ತಮ್ಮ ಮಾಹಿತಿಯನ್ನು ಸರಿಪಡಿಸಿಕೊಳ್ಳಲು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಸಹಕರಿಸಲು ಕೊಪ್ಪಳ ಜಿಲ್ಲಾಡಳಿತ ಕೋರಿದೆ.

*10,41,063 ಗಣತಿ ನಮೂನೆಗಳ ಡಿಜಿಟಲೀಕರಣ:* ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಯ 1,315 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರ ಅಂಗವಾಗಿ ಮನೆ ಮನೆ ಭೇಟಿ ಹಾಗೂ ಡಿಜಿಟಲೀಕರಣ ಕಾರ್ಯವು ಪ್ರಗತಿಯಲ್ಲಿದ್ದು, ಆಗಸ್ಟ್ 08ರ ಸಂಜೆ 4 ಗಂಟೆಯವರೆಗಿನ ವರದಿಯಂತೆ, ಜಿಲ್ಲೆಯಲ್ಲಿ ಒಟ್ಟು ಹಂಚಿಕೆ ಮಾಡಲಾದ 11,90,214 ಗಣತಿ ನಮೂನೆಗಳಲ್ಲಿ (Enumeration Forms) ಈಗಾಗಲೇ 10,41,063 ನಮೂನೆಗಳನ್ನು ಯಶಸ್ವಿಯಾಗಿ ಡಿಜಿಟಲೀಕರಣ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Total Views: 0
Share This Article