
Let’s work, launch of the Women’s Empowerment Campaign

ಕೂಲಿಕಾರರು ನರೇಗಾ ಯೋಜನೆ ಲಾಭ ಪಡೆಯಲಿ ಕೊಪ್ಪಳ ಸಂಸದರಾದ ಶ್ರೀ ರಾಜಶೇಖರ ಹಿಟ್ನಾಳ ಸಲಹೆ

ನರೇಗಾ 2025ರ ಜಾಗೃತಿ ಕರಪತ್ರ ಬಿಡುಗಡೆ
ಗಂಗಾವತಿ : ನರೇಗಾ ಯೋಜನೆಯ ಕೂಲಿ ಮೊತ್ತ 370 ರೂ. ಹೆಚ್ಚಳವಾಗಿದ್ದು, ಕೂಲಿಕಾರರು ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಂಸದರಾದ ರಾಜಶೇಖರ ಹಿಟ್ನಾಳ ಅವರು ಹೇಳಿದರು.
ತಾಲೂಕು ಪಂಚಾಯತ್ ಆವರಣದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ಅಭಿಯಾನಕ್ಕೆ ಸೋಮವಾರ 2025 ರ ನರೇಗಾ ಜಾಗೃತಿ ಕರಪತ್ರ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ನರೇಗಾ ಯೋಜನೆಯಡಿ ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ಅಭಿಯಾನ ಶುರುವಾಗಿದ್ದು, ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ನೀಡಲಾಗುತ್ತಿದೆ. ಕೂಲಿಕಾರರು ಗ್ರಾಪಂಗೆ ಕೆಲಸದ ಅರ್ಜಿ ಸಲ್ಲಿಸಿ ಸಾಮೂಹಿಕ ಕೆಲಸ ಪಡೆಯಬೇಕು ಎಂದರು.
ದುಡಿಯೋಣ ಬಾ ಅಭಿಯಾನದಡಿ ನರೇಗಾ ಯೋಜನೆಯಿಂದ ಹೊರಗಿರುವ ಅರ್ಹ ಕುಟುಂಬಗಳನ್ನು ಗುರುತಿಸಲಾಗುವುದು. ದುರ್ಬಲ ವರ್ಗಗಳ ಕುಟುಂಬಗಳ ಗುರುತಿಸುವುದು, ಮಹಿಳೆಯರು, ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶ ಈ ಅಭಿಯಾನ ಹೊಂದಲಾಗಿದೆ ಎಂದರು.
ಸ್ತ್ರೀ ಚೇತನ ಅಭಿಯಾನದಡಿ ಮಹಿಳೆಯರಿಗಿರುವ ಸೌಲಭ್ಯಗಳು ಹಾಗೂ ನರೇಗಾದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ ಎಲ್ಲರೂ ಅಭಿಯಾನದ ಅನುಕೂಲ ಪಡೆಯಬೇಕು ಎಂದರು.
ಈ ವೇಳೆ, ತಹಸೀಲ್ದಾರರಾದ ಯು.ನಾಗರಾಜ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್, ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷರಾದ ಡಾ.ಕೆ.ವಿ. ವೆಂಕಟೇಶ, ವಿಷಯ ನಿರ್ವಾಹಕರಾದ ಶಿವಮೂರ್ತಿ, ಎಂಐಎಸ್ ಸಂಯೋಜಕರಾದ ಶರಣಬಸವ ಮಾಲಿಪಾಟೀಲ್, ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ಸಾಮಾಜಿಕ ಲೆಕ್ಕಪರಿಶೋಧನೆ ಸಂಯೋಜಕರಾದ ವೀರನಗೌಡ ಪಾಟೀಲ್, ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಆಡಳಿತ ಸಹಾಯಕರಾದ ಶ್ರೀಕಾಂತ ಅರ್ಲೂರು, ಕೆಡಿಪಿ ಸದಸ್ಯರು, ನರೇಗಾ ಡಿಇಓಗಳು ಸೇರಿ ಇತರರು ಇದ್ದರು.




