Breaking News

ಭೀಮ ಕೋರೆಗಾಂವ್ ವಿಜಯೋತ್ಸವ ಅಂದರೆ ಒಂದುಪೌರಾಣಿಕಕಥೆಯಲ್ಲ ಇದು ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದ ಮಹರ್ ಸಮಾಜದ ಸತ್ಯ ಕಥೆ.

Bhima Koregaon victory is not a myth but a true story of Mahar Samaj who fought against untouchability.

ಗಂಗಾವತಿ: ನಗರದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ೨೦೬ನೇ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹುಲಗಪ್ಪ ಮಾಗಿ ಮಾತನಾಡಿ ಕೋರೆಗಾಂವ್ ವಿಜಯೋತ್ಸವ ಅಂದರೆ ಇದು ಒಂದು ಪೌರಾಣಿಕ ಕಥೆಯಲ್ಲ, ಶೋಷಿತರು ಮೇಲ್ಜಾತಿ ಶೋಷಣೆ ವಿರುದ್ಧ ನಡೆದ ಸತ್ಯ ಕಥೆ. ಅದರಲ್ಲಿ ಮಹರ್ ಜನಾಂಗವು ಭೀಮಾ ತೀರದಲ್ಲಿ ನಡೆದಿದ್ದರಿಂದ ಇಂದು ಮಹರ್ ಜನಾಂಗದ ಜನವರಿ-೦೧, ೧೮೧೮ ರಲ್ಲಿ ಕೋರೆಗಾಂವ್ ಭೀಮಾ ಶಿಕ್ರಾಪುರ ಪಟ್ಟಣವು ಭೀಮಾ ನದಿಯ ದಂಡೆಯ ಮೇಲೆ ೫೦೦ ಮಹರ್ ಸೈನಿಕರು ಸೇರಿಕೊಂಡು ೨೮೦೦೦ ಸಾವಿರ ಪೇಶ್ವೆಗಳ ಸೈನಿಕರ ಜೊತೆ ಯುದ್ಧ ಮಾಡಿ ಗೆದ್ದಂತಹ ಇತಿಹಾಸವನ್ನು, ಈ ಕೋರೆಗಾವ್ ವಿಜಯೋತ್ಸವದ ಕದನವನ್ನು ಯಾರಿಗೂ ತಿಳಿಯದ ಸಂದರ್ಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಲಂಡನ್‌ನಲ್ಲಿ ಓದುವ ಸಂದರ್ಭದಲ್ಲಿ ಹಲೋಸ್ಟೂಲ್ ಎಂಬ ಇತಿಹಾಸ ತಜ್ಞ ಈ ಕೋರೆಗಾಂವ್ ವಿಜಯೋತ್ಸವದ ಕುರಿತು ಇತಿಹಾಸ ಪುಟದಲ್ಲಿ ಉಲ್ಲೇಖ ಮಾಡಿರುತ್ತಾರೆ. ಆ ಪುಸ್ತಕವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಿಕ್ಕ ನಂತರ ಇಡೀ ಪುಸ್ತಕವನ್ನು ಅಂಬೇಡ್ಕರ್ ಅವರು ಸಂಪೂರ್ಣವಾಗಿ ಓದಿಕೊಂಡು ನಮ್ಮ ಮಹರ್ ಜನಾಂಗವು ನಾವು ಹುಟ್ಟುವುದಕ್ಕಿಂತ ಮುಂಚೇನೆ ಅಸ್ಪೃಶ್ಯತೆ ಬಗ್ಗೆ ಇಷ್ಟೊಂದು ಕದನ ನಡೆದಿದೆ ಎಂದು ಅವರಿಗೆ ತಿಳಿಯುತ್ತದೆ. ಆಗ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಲ್ಲಿಂದ ಪುಣೆಯ ವಾಯವ್ಯ ದಿಕ್ಕಿನ ಭೀಮಾ ನದಿಯ ದಂಡೆಯಲ್ಲಿ ಇರುವ ಕೋರೆಗಾಂವ್ ಗ್ರಾಮಕ್ಕೆ ಬಂದು, ಆ ಪೇಶ್ವೆಗಳ ವಿರುದ್ಧ ಹೋರಾಡುವ ಸಮಯದಲ್ಲಿ ೨೮ ಜನರು ನಮ್ಮ ಮಹಾರ್ ಸೈನಿಕರು ವೀರಮರಣ ಹೊಂದಿದ ಸಂದರ್ಭದಲ್ಲಿ ವಿಜಯಸ್ತಂಭವನ್ನು ಜನವರಿ-೦೧, ೧೮೧೮ ರಲ್ಲಿ ವಿಜಯೋತ್ಸವವನ್ನು ಸ್ಥಾಪನೆ ಮಾಡಿ ವಿಜಯೋತ್ಸವ ಆಚರಣೆ ಮಾಡುತ್ತಾರೆ. ಅವತ್ತಿನಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿ ವರ್ಷ ಜನವರಿ-೦೧ ರಂದು ತಮ್ಮ ಕುಟುಂಬ ಸಮೇತ ಆ ಕೋರೆಗಾಂವ್ ವಿಜಯೋತ್ಸವಕ್ಕೆ ಭೇಟಿ ನೀಡಿ ವಿಜಯೋತ್ಸವವನ್ನು ಆಚರಣೆ ಮಾಡುತ್ತಿದ್ದರು. ಅದೇ ರೀತಿಯಾಗಿ ಇಂದು ನಾವು ಗಂಗಾವತಿ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಲವಾದಿ ಸಮಾಜದ ಹಿರಿಯ ಮುಖಂಡರಾದ ದೊಡ್ಡ ಬೋಜಪ್ಪ ಮತ್ತು ಹಿರಿಯ ಮುಖಂಡ ಹುಲಗಪ್ಪ ಮಾಸ್ತರ್, ಜೈ ಶಂಕರ ವಿಭಾಗಿಯ ಪ್ರಧಾನ ಕಾರ್ಯದರ್ಶಿಗಳು, ಹುಸೇನಪ್ಪ ಹಂಚಿನಾಳ ವಕೀಲರು, ಹೊನ್ನೂರಪ್ಪ ಡಾಣಾಪುರ್, ಹುಲಿಗೇಶ ದೇವರಮನಿ, ಮಾರ್ಕಂಡೇಯ ಸೋಮನಾಳ, ವೀರೇಶ್ ಆರತಿ, ತಿಮ್ಮಣ್ಣ ಹಂಚಿನಾಳ, ಫಕೀರಪ್ಪ, ಪಂಪಾಪತಿ ಸಿದ್ದಾಪುರ, ರಮೇಶ್ ಮಾಗಿ, ಬಸವರಾಜ ಪೂಜಾರಿ, ನರಸಿಂಹಲು ಸೇರೆದಂತೆ ಇತರ ಮುಖಂಡರು ಭಾಗವಹಿಸಿದರು

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.