Breaking News

ಸಂಗೀತಕ್ಕೆ ಸೋಲದ ಮನಸ್ಸುಗಳೆ ಇಲ್ಲ – ಹೇಮಂತಕುಮಾರ ದೊಡ್ಡಮನಿ.

There are no minds that cannot be defeated by music - Hemanthakumar Doddamani.

ಕೊಪ್ಪಳ : ಸಂಗೀತಕ್ಷೇತ್ರ ಪೂಜ್ಯನೀಯವಾದದ್ದು. ಉತ್ತಮ ಸಂಗೀತ ಕಲಾವಿದರಾಗ ಬಯಸುವವರು ಮೊದಲು ಉತ್ತಮ ಕೇಳುಗರಾಗಬೇಕು. ಅಂದಾಗ ಮಾತ್ರ ಒಳ್ಳೆಯ ಹಾಡುಗಾರರಾಗಲು ಸಾಧ್ಯವಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಅದ್ಭುತ ಸಂಗೀತ ಕಲಾವಿದರಿದ್ದಾರೆ. ಅವರೆಲ್ಲರಿಗೆ ಪ್ರೋತ್ಸಾಹ ಸಿಗಬೇಕಾಗಿದೆ. ಸಂಗೀತಕ್ಕೆ ಸೋಲದ ಮನಸುಗಳೇ ಇಲ್ಲ ಎಂದು ಜೂನಿಯರ್ ಎಸ್ .ಪಿ. ಬಾಲಸುಬ್ರಹ್ಮಣ್ಯಂ ಎಂದೇ ಖ್ಯಾತಿ ಪಡೆದ ಹೊಸಪೇಟೆಯ ತಹಶೀಲ್ದಾರರಾದ ಹೇಮಂತಕುಮಾರ ಎನ್. ದೊಡ್ಡಮನಿ ಹೇಳಿದರು.

ಅವರು ಕೊಪ್ಪಳದ ಸಾಹಿತ್ಯ ಭವನದಲ್ಲಿ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ವಾದ್ಯಗೋಷ್ಠಿ ಕಲಾವಿದರ ಮಹಾಸಂಘದ ಕೊಪ್ಪಳ ಜಿಲ್ಲಾ ಘಟಕದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಗಜೇಂದ್ರಗಡ ತಹಶೀಲ್ದಾರರಾದ ರಜನಿಕಾಂತ ಕೆಂಗೇರಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ನನಗೆ ಮೈಕ್ ಹಿಡಿದು ಹಾಡಲು ಕಲಿಸಿದವರೇ ಹೇಮಂತಕುಮಾರ  ಅವರು. ಅವರು ನನ್ನಂಥ ಬಹಳಷ್ಟು ಕಲಾವಿದರನ್ನು ಬಯಲಿಗೆ ತಂದಿದ್ದಾರೆ ಎಂದರು. 

ಹಿರಿಯ ಪತ್ರಕರ್ತರಾದ ಎಂ. ಸಾಧಿಕ್ ಅಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಕೊಪ್ಪಳದಲ್ಲಿ ಕಲಾವಿದ ಭಾಷಾ ಹಿರೇಮನಿ ಅವರ ನೇತೃತ್ವದಲ್ಲಿ ಸಂಘವು ಸಂಗೀತದ ಒಳ್ಳೆಯ ರಸದೌತಣ ಕೊಡುತ್ತಾ ಬಂದಿದೆ. ನಮ್ಮ ನಾಡಿನ ಕಲೆ, ಪರಂಪರೆ, ಉಳಿಸಿ ಬೆಳೆಸಿ ನಮ್ಮೆಲ್ಲರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಸಂಘದ ಮೂಲಕ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಹೊಸ ಕಲಾವಿದರಿಗೆ ಗರಡಿ ಮನೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಹಿರಿಯ ಪತ್ರಕರ್ತರರಾದ ಜಿ.ಎಸ್. ಗೋನಾಳ ಅವರು ಮಾತನಾಡುತ್ತಾ, ಕಲೆ, ಸಂಗೀತ, ನೃತ್ಯಕ್ಕೆ ಭವ್ಯ ಸಂಗೀತದ ಮೂಲಕ ಮನುಷ್ಯನ ಹಲವಾರು ಮಾನಸಿಕ ಕಾಯಿಲೆಗಳು ವಾಸಿಯಾಗುತ್ತವೆ ಎಂದರು. ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಮಾತನಾಡುತ್ತಾ, ಕಲಾವಿದರಾದ ಭಾಷಾ ಹಿರೇಮನಿಯವರು ಮಾಜಿ ಮುಖ್ಯಮಂತ್ರಿ ಎಸ್. ಆರ್ .ಬಂಗಾರಪ್ಪನವರಿAದ ಮೆಚ್ಚುಗೆ ಪಡೆದ ಕಲಾವಿದರಾಗಿದ್ದಾರೆ. ಅವರ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮಗಳಾಗುತ್ತಿವೆ. ಮುಂದಿನ ದಿನಮಾನಗಳಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಪ್ರಕಾರದ ಕಲಾವಿದರ ಗ್ರಂಥವನ್ನು ಹೊರತರಲಾಗುವುದು ಎಂದು ಹೇಳಿ, ಕರೋಕೆ ಜೊತೆಗೆ ಒಂದು ಹಾಡನ್ನು ಹಾಡುವುದರ ಮೂಲಕ ಸಭಿಕರನ್ನು ರಂಜಿಸಿದರು.

ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ವಾದ್ಯಗೋಷ್ಠಿ ಕಲಾವಿದರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಭಾಷಾ ಹಿರೇಮನಿ ಅವರು ಮಾತನಾಡುತ್ತಾ, ಕೊಪ್ಪಳ ಜಿಲ್ಲೆಯಲ್ಲಿ ಇರುವ ಎಲ್ಲಾ ಕಲಾವಿದರಿಗೆ ವೇದಿಕೆ ಕಲ್ಪಿಸಿ ಕೊಡುವುದೇ ನಮ್ಮ ಸಂಘದ ಮುಖ್ಯವಾದ ಉದ್ದೇಶವಾಗಿದೆ. ಮುಂದಿನ ದಿನಮಾನಗಳಲ್ಲಿ ಕೂಡ ಬೇರೆ ತಾಲೂಕುಗಳಲ್ಲಿ ಸಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ವೇದಿಕೆಯ ಮೇಲೆ ಗಿರೀಶ ಜಿ .ಹಿರೇಮಠ, ದಾವೂದ್ ಹುನುಗುಂದ, ಪ್ರದೀಪ್ ಹೆಚ್, ಜಗದೀಶ ಚಲವಾದಿ, ಕೃಷ್ಣಾ ಬಿ. ವಿದ್ಯಾವತಿ, ಎಂ. ಡಿ .ರಫಿ, ಮಂಜುನಾಥ ನೀರಲಗಿ, ಕಳಕಪ್ಪ ತಳವಾರ, ಮಲ್ಲಿಕಾರ್ಜುನ ಶಾಸ್ತಿçಮಠ, ಶಿವಪ್ರಸಾದ ಮಠಪತಿ, ಮಂಜುನಾಥ ಚಿಲವಾಡಗಿ, ಅಲ್ಲಾಭಕ್ಷಿ ಎಂ. ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು. ಶಿವಪ್ಪ ಹುಳ್ಳಿ ಪ್ರಾರ್ಥಿಸಿದರು. ವೀರೇಶ ಬಡಿಗೇರ ನಿರೂಪಿಸಿದರು. ಸೋಮು ಕಂಬಳಿ ವಂದಿಸಿದರು.

About Mallikarjun

Check Also

ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಜನ್ಮ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮಕ್ಕೆಕೊಪ್ಪಳದಿಂದ 100 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ

More than 100 people from Koppal will participate in the closing ceremony of the founder …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.