- ಹೂವಿನಿಂದ ನ್ಯಾಕ ತಂಡದವರನ್ನು ಭರ್ಜರಿ ಸ್ವಾಗತ
- ವಿದ್ಯಾರ್ಥಿಗಳೋಂದಿಗೆ ಸಂಭ್ರಮಿಸಿದ ನ್ಯಾಕ ಕಮೀಟಿ
- ವಿದ್ಯಾರ್ಥಿಗಳಿಂದ ಅರಳಿದ ವಿವಿಧ ಕಲಾ ಕೃತಿಗಳು
ಸಾವಳಗಿ: ವಿದ್ಯಾರ್ಥಿಗಳು ತಮ್ಮ ಜೀವನದ ಮುಂದಿನಗುರಿಯನ್ನುಪದವಿತರಗತಿಯಲ್ಲಿರುವಾಗಲೇ ಹಾಕಿಕೊಂಡಾಗ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದು, ನಿಮ್ಮ ಈ ಸಾಂಸ್ಕೃತಿಕ ಕಾರ್ಯಕ್ರಮ ತುಂಬಾ ಚೆನ್ನಾಗಿ ಮಾಡಿದ್ದಿರಿ ಹಾಗೂ ನಮ್ಮನ್ನು ಬೆಳಿಗ್ಗೆ ಸ್ವಾಗತಿಸಿ, ಸತ್ಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದ ನ್ಯಾಕ ಪೀರ್ ತಂಡದ ಚೇರಮನ ಹಿಮಾಚಲ ಪ್ರದೇಶದ ಪ್ರೊ ಡಾ. ಆರ್. ಕೆ. ಗುಪ್ತಾ ಹೇಳಿದರು.
ಪಟ್ಟಣದಲ್ಲಿರುವ ಚನ್ನಪಣ್ಣ ನಿಂಗಪ್ಪ ನಿರಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗುರುವಾರ, ಶುಕ್ರವಾರ ಭೇಟಿ ನೀಡಿದ್ದ ನ್ಯಾಕ ಪೀರ್ ತಂಡ ಕಾಲೇಜಿನ ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಪರಿಶೀಲನೆ ಮಾಡಿದರು.
ನಂತರ ಮಾತನಾಡಿದ ಸಿ.ಎನ್.ಎನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ ಮಂಜುನಾಥ ತ್ಯಾಳಗಡೆ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಈಗಿನಿಂದಲೇ ನಿಮ್ಮ ಜೀವನ ರೂಪಿಸಿಕೊಳ್ಳಿ ಎಂದರು.
ವಿದ್ಯಾರ್ಥಿಗಳಿಂದ ಅರಳಿದ ಚಿತ್ರಕಲಾ ಕೃತಿ: ಎನ್.ಎ. ಎ (ನ್ಯಾಕ) ಪೀರ್ ಟೀಮ್ ಕಾಲೇಜಿಗೆ ಆಗಮಿಸುತ್ತಿರುವ ಮುನ್ನವೇ ವಿದ್ಯಾರ್ಥಿ-ವಿದ್ಯಾರ್ಥಿಗಳು ತಮ್ಮ ಕೈಯಿಂದ ದೆಹಲಿಯ ಸಂಸತ್ತ ಭವನ, ವಿಧಾನಸಭೆ, ಅಯೋಧ್ಯೆ ರಾಮಮಂದಿರ, ಸುಪ್ರೀಂ ಕೋರ್ಟ್, ಸೇರಿದಂತೆ ಅನೇಕ ರೀತಿಯ ವಸ್ತುಗಳನ್ನು ತೆಗೆದು ಅವರನ್ನು ಸತ್ಕರಿಸಿದರು.
ನ್ಯಾಕ ಪೀರ್ ತಂಡದವರಾದ ಹಿಮಾಚಲ ಪ್ರದೇಶದಿಂದ ಪ್ರೊ ಡಾ. ಆರ್. ಕೆ. ಗುಪ್ತಾ, ಛತ್ತೀಸಗಢದಿಂದ ಡಿ. ಆರ್. ಎಸ್. ಆರ್. ಕಮಲೇಶ್, ಮಹಾರಾಷ್ಟ್ರದಿಂದ ಪ್ರಶಾಂತ್ ಎಸ್. ಅಮೃತಕಾರ ಅವರು ಪರಿಶೀಲನೆಗೆ ಆಗಮಿಸಿದ್ದರು.
ಬಾಕ್ಸ್: ಕಾಲೇಜಿನಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳ ಇದೆ. ಉತ್ತಮವಾದ ಮೈದಾನ. ಸುಂದರವಾದ ಕಟ್ಟಡಗಳು. ಡಿಜಿಟಲ್ ಗ್ರಂಥಾಲಯ ಸೇರಿದಂತೆ ಅನೇಕ ಇವೆ, ನ್ಯಾಕ ತಂಡ ಎಲ್ಲವೂ ಪರಿಶೀಲನೆ ಮಾಡಿದ್ದಾರೆ. ಉತ್ತಮವಾದ ಗ್ರೇಡಗಾಗಿ ಕಾಯುತ್ತಿದ್ದೇವೆ.
ಡಾ. ಮಂಜುನಾಥ ತ್ಯಾಳಗಡೆ
ಚನ್ನಪಟ್ಟಣ ನಿಂಗಪ್ಪ ನಿರಾಣಿ ಕಾಲೇಜು ಪ್ರಾಂಶುಪಾಲರು ಸಾವಳಗಿ