Engaging in self-employment with skill, Municipal Commissioner Virupaksha Murthy R. Advice

ಗಂಗಾವತಿ.11 ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಅವಕಾಶವಿದ್ದು ತರಬೇತಿ ಶಿಬರಗಳ ಮೂಲಕ ಸ್ವಾವಲಂಬಿಗಳಾಗದಂತೆ ನಗರಸಭೆ ಪೌರಯುಕ್ತ ವಿರೂಪಾಕ್ಷ ಮೂರ್ತಿ ಆರ್,ಸಲಹೆಯನ್ನು ನೀಡಿದರು
ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಟ್ರಸ್ಟ್ ನಿಂದ ಆಯೋಜಿಸಿದ್ದ ಸ್ವ ಉದ್ಯೋಗ ಪ್ರೇರಣ ಶಿಬಿರ ಉದ್ಘಾಟಿಸಿ ಮಾತನಾಡಿದರು, ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದು ಸ್ರೀ ಅಬಲೆಯಲ್ಲ ಸಬಲೆ ಎನ್ನುವುದಕ್ಕೆ ಹಲವು ನಿರ್ದೇಶನಗಳಿವೆ ಕೌಶಲದೊಂದಿಗೆ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆಯನ್ನು ನೀಡಿದರು .
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಮಾತನಾಡಿ ಸ್ವ ಉದ್ಯೋಗಕ್ಕೆ ಹಲವು ಯೋಜನೆಗಳಿದ್ದು ತರಬೇತಿ ವ್ಯವಸ್ಥೆಯಿದೆ ಶ್ರೀ ಧರ್ಮಸ್ಥಳ ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದರು
ಈ ಸಂದರ್ಭದಲ್ಲಿ ಕೆವಿಕೆ ಡಾ.ಕವಿತಾ ಉಳ್ಲಿಕಾಶಿ.ಲಕ್ಷ್ಮೀ ಕಾಂತ, ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ,ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಚಂದ್ರಕಾಂತ ನಾಡಗೌಡ,ಮೇಲ್ವಿಚಾರಕರಾದ ಸಿದ್ದಗೌಡ,ಶಾರದಾ, ನಾಗಮಣಿ,ಸರೋಜಾ,ದಯಾನಂದ ಸೇರಿದಂತೆ ಇತರರು ಇದ್ದರು