Breaking News

ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ, ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಸೂಚನೆ

District Commissioner Nalin Atul informed in the progress review meeting of various sections and projects of the Health Department

ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸಲು, ಜನರಿಗೆ ಸೂಕ್ತ ಚಿಕಿತ್ಸೆ ಸಿಗಲು ಒತ್ತು ಕೊಡಿ

ಕೊಪ್ಪಳ ಸೆಪ್ಟೆಂಬರ್ 01 (ಕ.ವಾ.): ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸೆಪ್ಟೆಂಬರ್ 1ರಂದು ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆರೋಗ್ಯ ಇಲಾಖೆಯ ವಿಭಾಗಗಳ ಮತ್ತು ನಾನಾ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸುಧೀರ್ಘ 4 ಗಂಟೆಗಳ ಕಾಲ, ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿದ್ದ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ ವೈದ್ಯಾಧಿಕಾರಿಗಳು,
ಪ್ರಾತ್ಯಕ್ಷಿಕೆಯ ಮೂಲಕ
ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿನ ಮೂಲಸೌಕರ್ಯ ಮಾಹಿತಿ, ಖಾಯಂ ಸಿಬ್ಬಂದಿ ಮಾಹಿತಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿನ ಸಿಬ್ಬಂದಿ ವಿವರ, ತಾಯಿ ಮತ್ತು ಮಕ್ಕಳ ಆರೋಗ್ಯ ಮಾಹಿತಿ, ವಿವಿಧ ಲಸಿಕೆಗಳ ಪ್ರಗತಿ, ಈಡಿಸ್ ಲಾರ್ವಾ ಸಮೀಕ್ಷೆ, ಇ- ಸಂಜೀವಿನಿ, ಇ-ಆಸ್ಪತ್ರೆ ಅನುಷ್ಠಾನ, ಆಯುಷ್ಮಾನ ಭಾರತ ಡಿಜಿಟಲ್ ಮಿಷನ್, ಕಾಲಕಲ್ಪ, ರಾಷ್ಟ್ರೀಯ ಗುಣಮಟ್ಟ ಸುಧಾರಣಾ ಯೋಜನೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ 2011ರ ಜನಗಣತಿ ಅನ್ವಯ ಒಟ್ಟು ಜನಸಂಖ್ಯೆ ಕೊಪ್ಪಳ ಗಂಗಾವತಿ ಕುಷ್ಟಗಿ ಯಲಬುರ್ಗಾ ತಾಲೂಕು ಸೇರಿ 13,91,292 ಇದ್ದು 2022ಕ್ಕೆ ಯೋಜಿತ ಜನಸಂಖ್ಯೆ 15,91,183 ಇದೆ. ಜಿಲ್ಲೆಯಲ್ಲಿ ಅಂದಾಜು 36 ಎಂಬಿಬಿಎಸ್ ವೈದ್ಯರು, 12 ದಂತ ವೈದ್ಯರು, 33 ತಜ್ಞ ವೈದ್ಯರು, 122 ಶುಶ್ರುಷಕ ಅಧಿಕಾರಿಗಳು, 59 ಫಾರ್ಮಸಿ ಅಧಿಕಾರಿಗಳು, 43 ಪ್ರಯೋಗ ಅಧಿಕಾರಿಗಳು, 66 ಕ್ಲರಿಕಲ್ ಸಿಬ್ಬಂದಿ, 12 ಜನ ನೇತ್ರ ಅಧಿಕಾರಿಗಳು, 168 ಪಿಎಚ್ ಸಿಓ., 94 ಎಚ್ಇಓ, 1269 ಆಶಾ, 173 ಗ್ರೂಪ್ ಡಿ ಸೇರಿ ಒಟ್ಟು 2088 ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 413 ವಿವಿಧ ಹುದ್ದೆಗಳು ಖಾಲಿ ಇವೆ. ವೈದ್ಯಾಧಿಕಾರಿಗಳು, ಅರೇ ವೈದ್ಯಾಧಿಕಾರಿಗಳು ಮತ್ತು ಆಡಳಿತಾತ್ಮಕ ಸೇರಿ ಅಂದಾಜು 730 ಜನರು ರಾಷ್ಟ್ರಿಯ ಆರೋಗ್ಯ ಅಭಿಯಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜು,‌ ಒಂದು ಜಿಲ್ಲಾಸ್ಪತ್ರೆ,
ಒಂದು ಆಯುಷ್ಮತಿ ಕ್ಲಿನಿಕ್, 4 ತಾಯಿ ಮತ್ತು ಮಕ್ಕಳ ಆಸ್ಪತ್ರೆ, 3 ತಾಲೂಕು ಸಾರ್ವಜನಿಕ ಆಸ್ಪತ್ರೆ, 9 ಸಮುದಾಯ ಆರೋಗ್ಯ ಕೇಂದ್ರಗಳು, ಏಳು ಎಫ್ಆರ್ ಯು., 46 ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 24*7ಪ್ರಾಥಮಿಕ ಆರೋಗ್ಯ ಕೇಂದ್ರಗಳು 43., 3 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 173 ಉಪ ಕೇಂದ್ರಗಳು, 145 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, 10 ಆರೋಗ್ಯ ವಿಸ್ತರಣಾ ಕ್ಲಿನಿಕ್ ಗಳು, 4 ಪೌಷ್ಟಿಕಾಂಶದ ಪುನರ್ವಸತಿ ಕೇಂದ್ರಗಳು, 3 ನಮ್ಮ ಕ್ಲಿನಿಕ್, 33 ಖಾಸಗಿ ಆಸ್ಪತ್ರೆಗಳು, 53 ಖಾಸಗಿ ಕ್ಲಿನಿಕಗಳು, 2 ಎಸ್ಎನ್ ಸಿಯು, 5 ಎನ್ ಬಿಎಸ್ ಯು, 04 ಪೌಷ್ಠಿಕಾಂಶದ ಪುನರ್ವಸತಿ ಕೇಂದ್ರಗಳು, 06 ರಕ್ತ ಸಂಗ್ರಹಣಾ ಕೇಂದ್ರಗಳು, 02 ಬ್ಲಡ್ ಬ್ಯಾಂಕ್ ಇವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ.
ವ್ಯಕ್ತಿಯ ಬೆಳವಣಿಗೆಯಲ್ಲಿ ಆರೋಗ್ಯವು ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿದವರಿಂದ ಉತ್ತಮ ಕಾರ್ಯಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಆರೋಗ್ಯ ಇಲಾಖೆಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಮತ್ತು ಜನತೆಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಕೊಡುವಲ್ಲಿ ಆರೋಗ್ಯ ಇಲಾಖೆಯ ಎಲ್ಲ ವಿಭಾಗಗಳ ವೈದ್ಯಾಧಿಕಾರಿಗಳು ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.
1 ವರ್ಷದವರೆಗೆ, 9 ರಿಂದ 11 ತಿಂಗಳೊಳಗೆ ಸಂಪೂರ್ಣ ಲಸಿಕೆ ಪಡೆದ ಮಕ್ಕಳ ವಿವರದ ಮಾಹಿತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ದಡಾರ ರುಬೆಲ್ಲಾ, ಹೆಪ್ ಬಿ, ಬಿಸಿಜಿ, ಒಪಿವಿ, ಪೆಂಟಾ, ರೋಟಾ, ಐಪಿವಿ, ಎಂಆರ್, ಜೆಇ, ಡಿಪಿಟಿ ವರ್ಧಕ, ಟಿಡಿ ಸೇರಿದಂತೆ ಬೇರೆ ಬೇರೆ ನಮೂನೆಯ ಲಸಿಕಾ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಿಗದಿಪಡಿಸಿದ ಅವಧಿಯೊಳಗೆ ನಡೆಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ಸಮೀಕ್ಷೆಯು ಅಚ್ಚುಕಟ್ಟಾಗಿ ನಡೆಯಲಿ:* ಕೊಪ್ಪಳದಲ್ಲಿ 86,083, ಗಂಗಾವತಿಯಲ್ಲಿ 59,907, ಕುಷ್ಟಗಿ ತಾಲೂಕಿನಲ್ಲಿ 61,765 ಮತ್ತು ಯಲಬುರ್ಗಾ ತಾಲೂಕಿನಲ್ಲಿ 95,895 ಸೇರಿ ಜಿಲ್ಲೆಯಲ್ಲಿ ಒಟ್ಟು 3,03,650 ಮನೆಗಳ ಪೈಕಿ ಜುಲೈ ಮೊದಲನೇ ಪಾಕ್ಷಿಕದಲ್ಲಿ ಶೇ.92.46 ಮತ್ತು ಎರಡನೇ ಪಾಕ್ಷಿಕದಲ್ಲಿ ಶೇ.87.84 ರಷ್ಟು ಈಡೀಸ್ ಲಾರ್ವಾ ಸಮೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಮಳೆಗಾಲ ಹಿನ್ನೆಲೆಯಲ್ಲಿ, ಪಾಕ್ಷಿಕವಾರು ಈಡಿಸ್ ಕಾರ್ವಾ ಸಮೀಕ್ಷೆ ಹಾಗೂ ಉತ್ಪತ್ತಿ ತಾಣ ನಾಶ ಚಟುವಟಿಕೆಯನ್ನು ಅಚ್ಚುಕಟ್ಟಾಗಿ ನಡೆಸಬೇಕು.
ಸಣ್ಣ ವಯಸ್ಸಿನವರಲ್ಲೇ ಈಗ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದ್ದು, ಗಂಭೀರ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಿ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 30 ವರ್ಷ ಮೇಲ್ಪಟ್ಟು ನೋದಣಿಯಾದವರಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಗೆ ಸಂಬಂಧಿಸಿದಂತೆ ಜನಸಂಖ್ಯೆ ಆಧಾರಿತ ಸಮೀಕ್ಷೆಯನ್ನು ತೀವ್ರಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ‌ ನೀಡಿದರು.
ದೃಷ್ಟಿ ಪರೀಕ್ಷೆ ನಡೆಸಿ: ಏಪ್ರೀಲ್ 1 ರಿಂದ ಜುಲೈ 30ರವರೆಗೆ ವೈದ್ಯಕೀಯ ಕಾಲೇಜಿನಲ್ಲಿ 81 ಜನರಿಗೆ, ಜಿಲ್ಲಾಸ್ಪತ್ರೆಯಲ್ಲಿ 40 ಜನರಿಗೆ ಮತ್ತು ಇತರೆ ಎನ್ ಜಿಓಗಳಲ್ಲಿ 21 ಜನರಿಗೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 2432 ಜನರಿಗೆ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವ ಹಿರಿಯ ನಾಗರಿಕರಿಗೆ ಪೂರ್ಣ ಪ್ರಮಾಣದಲ್ಲಿ
ಕನ್ನಡಕ ವಿತರಣೆಗೆ ಒತ್ತು ಕೊಡಬೇಕು. ವಾರ್ಷಿಕ ಗುರಿಯನುಸಾರ ಶಾಲಾ ಮಕ್ಕಳ ನೇತ್ರ ತಪಾಸಣೆ ಮತ್ತು ಅವರಿಗೆ ಕನ್ನಡಕ ವಿತರಣೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅನುಷ್ಠಾನಕ್ಕೆ ಒತ್ತು ಕೊಡಿ:
ಜಿಲ್ಲೆಯಲ್ಲಿ ಇ-ಆಸ್ಪತ್ರೆಯ ಅನುಷ್ಠಾನಕ್ಕೆ ಒತ್ತು ಕೊಡಲಾಗಿದೆ. ಇ-ಸಂಜಿವಿನಿ ಪ್ರಗತಿ ಜುಲೈ ಕೊನೆಗೊಂಡಂತೆ ಶೇ.82 ರಷ್ಟಾಗಿದೆ. ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯ ಪ್ರಗತಿ ಶೇ.88 ರಷ್ಟಾಗಿದೆ. ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಹಾಗೂ ಇ- ಕಚೇರಿ ವ್ಯವಸ್ಥೆ ಅನುಷ್ಠಾನಕ್ಕೆ ಸಹ ಒತ್ತು ಕೊಡಲಾಗುತ್ತಿದೆ ಎಂದು ವಿವಿಧ ವಿಭಾಗಗಳ ವೈದ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಲಿಂಗರಾಜು, ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಗಂಗಪ್ಪ, ಹಾಗೂ ವಿವಿಧ ವಿಭಾಗಗಳ ವೈದ್ಯಾಧಿಕಾರಿಗಳು ಇದ್ದರು.

About Mallikarjun

Check Also

ಖೊಟ್ಟಿ ದಾಖಲೆ ಸೃಷ್ಟಿಸಿ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು, ದಂಡವಸೂಲಿ.

ಕಾರಟಗಿ: ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.