Breaking News

ನಾರಾಯಣ್‌ ಸೇವಾ ಸಂಸ್ಥಾನ್‌ ನಿಂದ ದಕ್ಷಿಣ ಭಾರತದ ರಾಜ್ಯಗಳ ದಿವ್ಯಾಂಗರಿಗೆ ಉಚಿತ ಅಂಗಾಂಗಜೋಡಣೆಗಾಗಿ ಶಿಬಿರ; ನಾರಾಯಣ್‌ ಸೇವಾ ಸಂಸ್ಥಾನಕ್ಕೆ ನಿವೇಶನ, ಸಾಧ್ಯತೆಯ ಎಲ್ಲಾ ನೆರವು – ಸಚಿವ ಬಿ. ನಾಗೇಂದ್ರ

A camp for free organ transplantation for disabled people from South Indian states by Narayan Seva Sansthan; Location for Narayan Seva Sansthan, all possible assistance - Minister B. Nagendra




ಬೆಂಗಳೂರು, ಜು, ೧೬; ಉದಯ್‌ ಪುರದ ದಿವ್ಯಾಂಗರ ರಾಷ್ಟ್ರಮಟ್ಟದ ಸ್ವಯಂ ಸೇವಾ ಸಂಸ್ಥೆ ನಾರಾಯಣ್‌ ಸೇವಾ ಸಂಸ್ಥಾನ್‌ ನಿಂದ ಬೆಂಗಳೂರಿನಲ್ಲಿ ದಕ್ಷಿಣ ರಾಜ್ಯಗಳಿಂದ ಆಗಮಿಸಿದ್ದ ದಿವ್ಯಾಂಗರಿಗೆ ಹೊಂದಿಕೆಯಾಗುವಂತೆ ಅಂಗಾಂಗ ಜೋಡಣೆಗಾಗಿ ಅಂಗಾಂಗ ಮಾಪನ ಶಿಬಿರಕ್ಕೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಚಾಲನೆ ನೀಡಿದರು.

ಬೆಂಗಳೂರಿನ ವಿವಿಪುರದ ಅರಸೋಜಿ ರಾವ್‌ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಕೇರಳ ಆಂಧ್ರಪ್ರದೇಶದಿಂದ ಬಂದಿದ್ದ ದಿವ್ಯಾಂಗರಿಗೆ ಅಗತ್ಯಕ್ಕೆ ತಕ್ಕಂತೆ ಅಂಗಾಂಗಗಳ ಅಳತೆ ತೆಗೆದುಕೊಳ್ಳಲಾಯಿತು. ಅನುಭವಿ ಮೂಳೆ ತಜ್ಞರು, ಪ್ರಾಸ್ತೆಟಿಕ್ ಪರಿಣಿತ ವೈದ್ಯರು ಅಳತೆ ತೆಗೆದುಕೊಂಡರು. ದಿವ್ಯಾಂಗರ ಬದುಕಿನಲ್ಲಿ ಇದು ಹೊಸ ಆಶಾಕಿರಣ ಮೂಡಿಸುವ ಮತ್ತು ಸ್ವಾವಲಂಬಿ ಬದುಕು ಸಾಗಿಸಲು ಕೈಗೊಂಡಿರುವ ಕ್ರಮಗಳ ಕುರಿತು ಸಚಿವರು ಪರಿಣಿತ ವೈದ್ಯರಿಂದ ಮಾಹಿತಿ ಪಡೆದರು.

ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಚಿವ ಬಿ. ನಾಗೇಂದ್ರ, ಜೀವನದಲ್ಲಿ ನಿರೀಕ್ಷೆ ಇಲ್ಲದೇ ಸಂಭವಿಸುವ ಅವಘಡದಲ್ಲಿ ಅಮೂಲ್ಯ ಅಂಗಾಂಗಳನ್ನು ಕಳೆದುಕೊಂಡು ಕಷ್ಟದಲ್ಲಿರುವವರಿಗೆ ಸರ್ಕಾರದ ಅರೋಗ್ಯ ಯೋಜನೆಗಳು ಸಹಕಾರಿಯಾಗಿವೆ. ಇದರ ಜೊತೆಗೆ ಇಂತಹ ಸೇವಾ ಸಂಸ್ಥೆಗಳ ಸಮಾಜ ಮುಖಿ ಸೇವೆಯಿಂದ ಆರ್ಥಿಕ ಹೊರೆ ಕಡಿಮೆಯಾಗಿದೆ. ನಾರಾಯಣ ಸೇವಾ ಸಂಸ್ಥೆ 38 ವರ್ಷಗಳಿಂದ ೪.೩೩ ಲಕ್ಷಕ್ಕೂ ಹೆಚ್ಚು ದಿವ್ಯಾಂಗರಿಗೆ ಶಸ್ತ್ರಚಿಕಿತ್ಸೆ ಮಾಡಿರುವುದು ಸಂಸ್ಥೆಯ ಅನುಪನ ಸೇವೆಗೆ ಸಾಕ್ಷಿಯಾಗಿದೆ. 38,200 ಅಂಗವಿಕಲ ಮಕ್ಕಳಿಗೆ, ಪುರುಷರು, ಮಹಿಳೆಯರಿಗೆ ಉಚಿತವಾಗಿ ಕೃತಕ ಅಂಗಾಗ ಜೋಡಣೆ ಮಾಡಿದ್ದು, ಈ ಸೇವೆ ನಿರಂತರವಾಗಿ ಮುಂದುವರೆಯಲಿ ಎಂದು ಆಶಿಸಿದರು.

ನಾವು ಅನ್ನ ದಾಸೋಹ, ಅಕ್ಷರ ದಾಸೋಹ ಮಾಡುತ್ತೇವೆ. ಆದರೆ ಅಂಗಾಂಗ ದಾನ ಮಾಡುತ್ತಿರುವುದು. ಬಳ್ಳಾರಿ ಜಿಲ್ಲೆಯಿಂದ ಸಾಧ್ಯವಾದ ಎಲ್ಲಾ ನೆರವು ನೀಡುತ್ತೇವೆ. ನಮ್ಮ ಜಿಲ್ಲೆಯ ಕಂಪೆನಿಗಳು, ಕರ್ನಾಟನೆಗಳಿಂದಲೂ ನೆರವು ನೀಡುತ್ತೇವೆ. ಸಂಸ್ಥೆಯ ಮುಖ್ಯಸ್ಥರಾದ ಕೈಶಾಲ್‌ ಮಾನವ್‌ ಜೀವಂತ ದೇವರು. ಇಂತಹ ಉದಾತ್ತ ಸಂಸ್ಥೆಗೆ ನಿವೇಶನ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನಿಸುತ್ತೇನೆ. ಸ್ವತಃ ತಮ್ಮ ಕಚೇರಿಯಲ್ಲೂ ಸಹ ೮ ರಿಂದ ೯ ಮಂದಿ ದಿವ್ಯಾಂಗರು ಕೆಲಸ ಮಾಡುತ್ತಿದ್ದಾರೆ. ಶನಿವಾರವಷ್ಟೇ ಬಳ್ಳಾರಿಯಲ್ಲಿ ನಾಲ್ಕು ಮಂದಿಗೆ ದಿವ್ಯಾಂಗರಿಗೆ ಕೆಲಸ ಕೊಡಿಸಿದ್ದೇನೆ. ತಮ್ಮ ಉಸಿರು ಇರುವ ತನಕ ದಿವ್ಯಾಂಗರ ಸೇವೆ ಮಾಡುತ್ತೇನೆ. ಕ್ರೀಡಾ ಮತ್ತು ಯುವ ಸಚಿವಾಲಯದಿಂದಲೂ ಇಂತಹ ಮಾನವೀಯ ಸೇವೆಗೆ ಸೂಕ್ತ ನೆರವು ನೀಡಲು ಸಿದ್ಧ ಎಂದರು.

ಕಾರ್ಯಕ್ರಮದಲ್ಲಿ ಜನರಲ್‌ ಮೋಟಾರ್ಸ್‌ ಕಂಪೆನಿಯ ಮುಖ್ಯಸ್ಥ ಅಮಿತ್‌ ಭಾತ್‌ ಪಟೇಲ್‌, ಉದ್ಯಮಿ ಗಣಪತ್‌ ಬಾಗ್ಲೇಚಾ, ನಾರಾಯಣ್‌ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್‌ ಪ್ರಸಾದ್‌ ಗೌರ್‌, ನಾರಾಯಣ್‌ ಸೇವಾ ಸಂಸ್ಥಾನದ ಸಾರ್ವಜನಿಕ ಸಂಪರ್ಕಾಧಿಕಾರಿ ಭಗವಾನ್‌ ಪ್ರಸಾದ್‌ ಗೌರ್‌, ಶಿಬಿರದ ಸಮನ್ವಯಕಾರ ರೋಹಿತ್‌ ತಿವಾರಿ, ಮಾಧ್ಯಮ ಸಮನ್ವಯಕಾರರಾದ ಬಿ.ವಿ ಚಂದ್ರಶೇಖರಯ್ಯ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.