Dr. Savadi as Koppal District President of State Government Medical Officers Association
ಗಂಗಾವತಿ,2:1ಜುಲೈ 20 ರಂದು ನಡೆದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ಡಾ.ಈಶ್ವರ ಶಿ.ಸವಡಿ ಇವರನ್ನು 2023-24ಕ್ಕೆ ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು, 1997ರಲ್ಲಿ ಸರ್ಕಾರಿ ವೈದ್ಯಾಧಿಕಾರಿ ಸೇವೆಗೆ ಗದಗ್ ಜಿಲ್ಲೆಯಿಂದ ವೃತ್ತಿಯನ್ನು ಆರಂಭಿಸಿದ ಡಾ. ಈಶ್ವರ ಸವಡಿ ಅವರು ಒಂದು ಬಾರಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕ್ಕೆ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅನುಭವ ಇರುವ ಇವರಿಗೆ ಕಳೆದ ಬಾರಿ 2020- 21ಕ್ಕೆ ಈಗಾಗಲೇ ಕೊಪ್ಪಳ ಜಿಲ್ಲಾ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಇವರು ರಾಜ್ಯ ಸರ್ಕಾರದಿಂದ ಕೊಡ ಮಾಡುವ ವೈದ್ಯರತ್ನ ವೈದ್ಯವಿಭೂಷಣ ವೈದ್ಯಶ್ರೀ ವೈದ್ಯ ಸೇವಾ ಸರ್ವೋತ್ತಮ ಹೀಗೆ ಮುಂತಾದ ಹಲವು ಪ್ರಶಸ್ತಿಗಳನ್ನು ಪಡೆಯುವುದರ ಜೊತೆಗೆ ಖಾಸಗಿಯವರಿಂದ ಅನೇಕ ಪ್ರಶಸ್ತಿಗಳು ಇವರ ಮೂಡಿಗೇರಿವೆ, ಜುಲೈ 20ರಂದು ನಡೆದ ಸರ್ಕಾರಿ ವೈದ್ಯಾಧಿಕಾರಿಗಳ ಪದಾಧಿಕಾರಿಗಳ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಡಾ. ಆನಂದ್ ಗೋಟುರ್, ಉಪಾಧ್ಯಕ್ಷರಾಗಿ ಡಾ. ಕಾವೇರಿ ಶಾವಿ, ಖಜಾಂಚಿಯಾಗಿ ಡಾ. ಶಿವಪ್ರಸಾದ್, ಜಿಲ್ಲಾ ಪ್ರತಿನಿಧಿಯಾಗಿ ಡಾಕ್ಟರ್ ನಂದಕುಮಾರ್, ಕಾರ್ಯದರ್ಶಿಯಾಗಿ ಡಾ.ನೇತ್ರಾ, ಜಂಟಿ ಕಾರ್ಯದರ್ಶಿಯಾಗಿ ಡಾ. ಅರ್ಚನಾ ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಲಿಂಗರಾಜ್, ಡಾ.ರವೀಂದ್ರ, ಡಾ.ಪ್ರಕಾಶ್, ಹಾಗೂ ಜಿಲ್ಲೆಯ ಸರ್ಕಾರಿ ವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದರು