ಕೊಪ್ಪಳ ಜಿಲ್ಲೆಯ ಬಂಜಾರ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ನಾಯ್ಕ ಮತ್ತು ಕರ್ನಾಟಕ ಬಂಜಾರ ಜಾಗೃತಿದಳ ರಾಜ್ಯಾಧ್ಯಕ್ಷ ತಿಪ್ಪಾ ಸರ್ ನಾಯ್ಕ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಡಾ.ಬಸವರಾಜ ಕ್ಯಾವಟರ ಅವರಿಗೆ ಬಂಜಾರ ಸಮುದಾಯದ ಸಂಪೂರ್ಣ ಬೆಂಬಲವಿದೆ .
ಕಾರಣ, ಬಂಜಾರ ಸಮುದಾಯದವರಿಗೆ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಕೋಟ್ಟಿಲ್ಲ. ಬಹಳ ಮೋಸವನ್ನು ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಗೆದ್ದ ನಮ್ಮ ಸಮಾಜದ ಒಬ್ಬ ಶಾಸಕನಿಗೆ ಮಂತ್ರಿ ಸ್ಥಾನ ನಿಡಲಿಲ್ಲ.
ಪಕ್ಷ ಅಧಿಕಾರಕ್ಕೆ ಬಂದು ವರ್ಷವಾದರೂ ಕರ್ನಾಟಕ ತಾಂಡಾ ನಿಗಮದ ಅಧ್ಯಕ್ಷರನ್ನು ನೇಮಕ ಮಾಡಿಲ್ಲ.
ಬಂಜಾರ ಸಮುದಾಯದ ಮೇಲೆ ಕಾಂಗ್ರೆಸ್ ಮೋಸ ಮಾಡಿದ್ದಾರೆ ಕಾಂಗ್ರೆಸ್ನಲ್ಲಿ ನಮ್ಮ ಬಂಜಾರ ಸಮುದಾಯದ ನಾಯಕರಿಗೆ ಯಾವುದೇ ದೊಡ್ಡ ಸ್ಥಾನ ಮಾನ ನೀಡಿಲ್ಲ. ಮೂಗಿಗೆ ತುಪ್ಪ ಹಚ್ಚುವ ಕೆಲಸ ಕಾಂಗ್ರೆಸ್ ಬಹಳ ವರ್ಷಗಳಿಂದ ಮಾಡುತ್ತಿದೆ. ಹೀಗಾಗಿ ಬಂಜಾರ ಸಮಾಜ ಈ ಸಲ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಟಿಯಲ್ಲಿ ಗುರು ಗೋಸಾವಿ ಬಾವಾ, ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ, ಬಿಜೆಪಿ ಮುಖಂಡರಾದ ಮುತ್ತು ರಾಠೋಡ, ಲಿಂಗರಾಜ ಕಟ್ಟಿಮನಿ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.