Breaking News

ಸದೃಢ ಭಾರತಕ್ಕಾಗಿ ಯುವ ಜನತೆ: ಮಂಜುಳಾ ಲೋಕೇ ನಾಯಕ್

Young people for a strong India: Manjula Lokaye Naik

ಜಾಹೀರಾತು

ಗಂಗಾವತಿ: ಸರ್ಕಾರಿ ಜೂನಿಯರ್ ಕಾಲೇಜ್ ಗಂಗಾವತಿಯ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ-೨೦೨೪ರ ಕಾರ್ಯಕ್ರಮ ರಾಮದುರ್ಗ (ಗೂಗಿಬಂಡಿ) ಯಲ್ಲಿ ಸೆಪ್ಟೆಂಬರ್-೨೯ ರಂದು ಸಂಜೆ ಅಧಿಕೃತವಾಗಿ ಸಸಿ ನೆಡುವುದರೊಂದಿಗೆ ಉದ್ಘಾಟನೆಗೊಂಡಿತು.
ಏಳು ದಿನಗಳವರೆಗೆ ನಡೆಯುವ ಈ ಶಿಬಿರದ ಉದ್ಘಾಟನೆಯನ್ನು ಸಂಗಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಲೋಕೇನಾಯಕ್ ರವರು ಉದ್ಘಾಟಿಸಿ ಮಾತನಾಡುತ್ತಾ “ನಾನು ಕಾಲೇಜುವರೆಗೂ ಓದಿದ್ದೇನೆ ಆದರೆ ನಾನು ಎನ್.ಎಸ್.ಎಸ್ ಶಿಬಿರ ಸೇರಲಿಲ್ಲ. ಅಂತಹ ಅವಕಾಶ ನನಗೆ ಸಿಗಲಿಲ್ಲ. ಎನ್.ಎಸ್.ಎಸ್ ಅಂದ್ರೆ ಏನು ಅಂತ ನನಗೆ ಗೊತ್ತಿತ್ತು. ಇಂಥ ಅವಕಾಶ ನಿಮಗೆ ಸಿಕ್ಕಿದ್ದು, ತುಂಬಾ ಖುಷಿಯಾಗಿರತಕ್ಕಂತ ವಿಚಾರ. ನೀವೆಲ್ಲರೂ ಕೂಡ ಇದರ ಸದುಪಯೋಗಪಡಿಸಿಕೊಳ್ಳಬೇಕು. ನಿಮ್ಮ ವ್ಯಕ್ತಿತ್ವ ವಿಕಸನ ಇದರಲ್ಲಿದೆ. ನಾಡು-ನುಡಿಗಾಗಿ ಸೇವೆ ಸಲ್ಲಿಸುವ ಕೆಲಸ, ಸೇವೆಯೇ ಬಾಳುವೆ ಎಂಬ ಸಂದೇಶವನ್ನು ಸಾರುವ ಈ ಶಿಬಿರ ಯಶಸ್ವಿಯಾಗಲಿ. ಗ್ರಾಮದ ಪರವಾಗಿ ನಿಮಗೆ ಎಲ್ಲಾ ರೀತಿಯಿಂದ ಸಹಕಾರ ನೀಡುತ್ತೇವೆ” ಎಂದು ಹೇಳಿದರು.
ಅದಕ್ಕೂ ಮೊದಲು ಎನ್.ಎಸ್.ಎಸ್ ಧ್ವಜಾರೋಹಣ ನಡೆಯಿತು. ಎನ್.ಎಸ್.ಎಸ್ ಪ್ರತಿಜ್ಞಾವಿಧಿಯನ್ನು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಸೋಮಶೇಖರಗೌಡ ಇವರು ನಡೆಸಿಕೊಟ್ಟರು. ಪ್ರಾಸ್ತಾವಿಕವಾಗಿ ಡಾ. ಲಿಂಗಣ್ಣ ಜಂಗಮರಹಳ್ಳಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿಯವರು “ದೇಶ ಕಟ್ಟುವ ಕೆಲಸ, ಗಾಂಧೀಜಿಯವರ ಆಶಯದ ಈ ಚಿಂತನೆಗಳು ನಾಡಿನಾದ್ಯಂತ ಬಿತ್ತರಿಸಬೇಕು, ಗ್ರಾಮದ ಉದ್ಧಾರವೇ ಎನ್.ಎಸ್.ಎಸ್ ಧ್ಯೇಯವಾದ್ದರಿಂದ ಗ್ರಾಮದಡೆಗೆ ಮಕ್ಕಳನ್ನು ಕರೆದುಕೊಂಡು ಹೋಗಿ, ಅಲ್ಲಿ ವಸತಿ ಸಹಿತ ಶಿಬಿರಗಳನ್ನು ಮಾಡಿ ಹೊಸ ಅನುಭವಗಳನ್ನು ಪಡೆದುಕೊಳ್ಳುವಂತೆ ಮಾಡಿ ಮಕ್ಕಳ ವ್ಯಕ್ತಿತ್ವ ವಿಕಸನವನ್ನು ಮಾಡುವುದು ಮತ್ತು ಅವರು ಬದುಕುವ ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಹಲವಾರು ಚಿಂತನ ವಿಷಯಗಳನ್ನು ಹಮ್ಮಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ” ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಎರಡು ಎನ್.ಎಸ್.ಎಸ್ ಘಟಕದ ೪೫ ವಿದ್ಯಾರ್ಥಿನಿಯರು ಮತ್ತು ೫೫ ವಿದ್ಯಾರ್ಥಿಗಳು ಸೇರಿ ಒಟ್ಟು ೧೦೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಾಧಿಕಾರಿಗಳಾದ ರುದ್ರೇಶ್ ತಬಾಲಿ, ಬಸವನದುರ್ಗ ಶಾಲೆಯ ಮುಖ್ಯ ಗುರುಗಳಾದ ಛತ್ರಪ್ಪ ತಂಬೂರಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ರಾಮದುರ್ಗ ಗೂಗಿಬಂಡಿಯ ಎಸ್‌ಡಿಎಂಸಿ ಅಧ್ಯಕ್ಷರಾದ ನಾಗರಾಜ್ ಬಾಲಪ್ಪ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಕೆ.ಎಸ್ ರವರು, ಗ್ರಾಮ ಪಂಚಾಯತ್ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಊರಿನ ಮುಖಂಡರು ಭಾಗವಹಿಸಿದ್ದರು. ಕೊನೆಯಲ್ಲಿ ಕಾಲೇಜಿನ ಗ್ರಂಥಪಾಲಕರಾದ ರಮೇಶ ಗಬ್ಬೂರ್ ವಂದಿಸಿದರು.

About Mallikarjun

Check Also

ಡಾ,ಗಂಗಾಮಾತಾಜಿ ನೇತೃತ್ವದಲ್ಲಿ ನಡೆಯುತ್ತಿರು 23ನೇ ಕಲ್ಯಾಣ ಪರ್ವಕ್ಕೆ 25 ಸಾವಿರ ರೊಟ್ಟಿ ತಯಾರಿ

Preparation of 25 thousand roti for 23rd Kalyana Parva is going on under the leadership …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.