Unopposed election of new office bearers
ಕೊಪ್ಪಳ : ಇಲ್ಲಿನ ಶ್ರೀ ಹಡಪದ ಅಪ್ಪಣ್ಣ ಹಿಂದುಳಿದ ವರ್ಗಗಳ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ೨೦೨೩ ರಿಂದ ಮುಂದಿನ ಐದು ವರ್ಷಗಳ ಅವಧಿಗೆ ನೂತನ ಪದಾಧಿಕಾರಿ ಆಯ್ಕೆಯನ್ನು ನಡೆಸಲಾಯಿತು. ಪ್ರಸಕ್ತ ಸಾಲಿಗೆ ಮುತ್ತಣ್ಣ ಮಾದಿನೂರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ ನರೇಗಲ್ಲ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಇAದು ಶ್ರೀ ಹಡಪದ ಅಪ್ಪಣ್ಣ ಹಿಂದುಳಿದ ವರ್ಗಗಳ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಉಳಿದಂತೆ ಸದರಿ ಸಹಕಾರ ಸಂಘಕ್ಕೆ ನಿರ್ದೇಶಕರಾಗಿ ಬಸಪ್ಪ ಹಲಗೇರಿ, ನಿಂಗಪ್ಪ ಹಂದ್ರಾಳ, ಮಂಜುನಾಥ ಹಂದ್ರಾಳ, ರಾಮಪ್ಪ ಬೆಣಕಲ್, ನಾಗಪ್ಪ ಇರಕಲ್‌ಗಡಾ, ಗವಿಸಿದ್ದಪ್ಪ ಗುಡದಳ್ಳಿ, ಬಸವರಾಜ ಇಟಗಿ, ಗಣೇಶ ಹಂಚಿನಾಳ, ಜಗದೀಶ ಭಾಗ್ಯನಗರ, ಶ್ರೀಮತಿ ಪ್ರಭಾವತಿ ಇಟಗಿ, ಶ್ರೀಮತಿ ಸುರೇಖಾ ಬೆಟಗೇರಿರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಇAದು ಜರುಗಿದ ಸಭೆಯಲ್ಲಿ ಹಡಪದ ಸಮಾಜದ ಬಸಪ್ಪ ಇರಕಲ್‌ಗಡಾ, ಗವಿಸಿದ್ದಪ್ಪ ಕಾಟ್ರಳ್ಳಿ, ಪ್ರಕಾಶ ದದೇಗಲ್, ಶಂಕ್ರಪ್ಪ ಜವಳಗೇರಿ, ಉಮೇಶ ಮುದೋಳ, ಟೋಪಣ್ಣ ನರೇಗಲ್, ಮಂಜುನಾಥ ಬೇಳೂರು, ದ್ಯಾಮಣ್ಣ ಮಾದಿನೂರು ಪಂಪಣ್ಣ ಹಾಸಲಗ್, ವೀರಣ್ಣ ಯಲಬುರ್ಗಿ, ಸಂತೋಷ ಕುಕನೂರು, ಶೇಖಪ್ಪ ಕುಕನೂರು, ಮಲ್ಲಪ್ಪ ಚಿಕ್ಕನಕೊಪ್ಪ ಸೇರಿದಂತೆ ಸಮಾಜದ ಹಿರಿಯ ಮುಖಂಡರು, ಯುವಕರು ಮತ್ತಿತರರು ಪಾಲ್ಗೊಂಡಿದ್ದರು. ಸಹಕಾರಿ ಸಂಘಗಳ ಉಪನಿಬಂಧಕರ ಕಛೇರಿಯ ವೆಂಕರೆಡ್ಡಿಯವರು ಚುನಾವಣಾಧಿಕಾರಿಗಳಾಗಿ ಪಾಲ್ಗೊಂಡು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.