Sharanegowda Mali Patil drives for formation of school parliament in Sri Channabasava Swamihiri Primary School

ಗಂಗಾವತಿ ,11: ನಗರದ ಶ್ರೀ ಕೊಟ್ಟೂರು ವಿದ್ಯಾವರ್ಧಕ ಸಂಘದ ಶ್ರೀ ಚನ್ನಬಸವ ಸ್ವಾಮಿ ಶಾಲೆಯಲ್ಲಿ ಶುಕ್ರವಾರದಂದು ಶಾಲಾ ಸಂಸತ್ತು ರಚನೆಜರುಗಿತು ಸಮಾರಂಭದ ಉದ್ಘಾಟನೆ ಹಾಗೂ ಪ್ರತಿಜ್ಞಾವಿಧಿ ಬೋಧನೆಯನ್ನು ಸಂಸ್ಥೆಯ ಕಾರ್ಯದರ್ಶಿ ಶರಣೇಗೌಡ ಮಾಲಿ ಪಾಟೀಲ್ ಉದ್ಘಾಟಿಸಿ ಮಾತನಾಡಿ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ಸಂಸದೀಯ ವ್ಯವಹಾರಗಳ ಬಗ್ಗೆ ಅರಿವು ಮೂಡಿಸುವಲ್ಲಿ ಶಾಲಾ ಸಂಸತ್ತರಚನೆ ಅತ್ಯಂತ ಮಹತ್ವದಾಯಕವಾಗಿದೆ , ಶ್ರೀ ಚನ್ನಬಸವ ಸ್ವಾಮಿ ಶಾಲೆಯ ಮುಖ್ಯೋಪಾಧ್ಯಾಯರು ಸೇರಿದಂತೆ ಶಿಕ್ಷಕರು ಮಕ್ಕಳಲ್ಲಿ ನಾಯಕತ್ವ ಗುಣ ಕಲೆ ಸಾಹಿತ್ಯ ಸಂಸ್ಕೃತಿ ಕ್ರೀಡಾ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಲು ಕಂಕಣ ಬದ್ಧವಾಗಿದೆ ಎಂದು ಹೇಳಿದರು , ಸಂಸ್ಥೆಯ ಸಹಕಾಯ್ಯದರ್ಶಿ ಹೆಚ್ ಎಂ ಮಂಜುನಾಥ್ ಮಾತನಾಡಿ ವಿದ್ಯಾರ್ಥಿಗಳು ಆರೋಗ್ಯ ಸ್ವಚ್ಛತೆ ಗುರುಹಿರಿಯರ ಬಗ್ಗೆ ಗೌರವ ಬೆಳೆಸಿಕೊಳ್ಳುವುದರ ಮೂಲಕ ತಾವು ಕಲಿತ ಶಾಲೆಗೆ ಕೀರ್ತಿ ತರುವಂತಹ ಆಗಬೇಕು ಜೊತೆಗೆ ಗುರುಗಳನ್ನು ಮೀರಿಸಿದ ಶಿಷ್ಯ ಎಂದು ಹೆಸರು ಪಡೆದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ ಎಂದು ಅತ್ಯಂತ ಮಾರ್ಮಿಕವಾಗಿ ಮಾತನಾಡಿದರು,, ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಸಿಂಗನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಯುವಕರೇ ನಾಳಿನ ನಾಯಕರು ಎಂಬುವತಿ ವಿದ್ಯಾರ್ಥಿಗಳಲ್ಲಿ ಪಟ್ಟದೊಂದಿಗೆ ಇತರೆ ಚಟುವಟಿಕೆಗಳನ್ನು ಬೆಳೆಸಿಕೊಳ್ಳುವ ಮೂಲಕ ಅತ್ಯುತ್ತಮ ನಾಯಕರಾಗಿ ಹೊರಬರಬೇಕೆಂದು ಸಲಹೆ ನೀಡಿದರು, ಪ್ರಧಾನಮಂತ್ರಿಯಾಗಿ ಕುಮಾರಿ ಕೃತಿಕ ಸೇರಿದಂತೆ 11 ಜನ ವಿದ್ಯಾರ್ಥಿಗಳು ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಉಪನ್ಯಾಸಕಿ ಶ್ರೀಮತಿ ವಾಣಿಶ್ರೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯನಿ ಅನಿತಾ ಶಿವಶಂಕರ್ ಭಂಡಾರಕ ರ , ಸಲಾ ಮುಖ್ಯೋಪಾಧ್ಯಾಯ ಪ್ರಕಾಶ್ ಗೌಡ ಪಾಟೀಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಿರಿಯ ಶಿಕ್ಷಕ ಬಾಲಪ್ಪ ಸ್ವಾಗತಿಸಿದರು ಸಹ ಶಿಕ್ಷಕಿ ರೇಣುಕಾ ಅಚ್ಚುಕಟ್ಟಾಗಿ ನಿರೂಪಿಸಿದರು,